* ಪ್ರತಿಯೊಂದು ವಿಚಾರದಲ್ಲೂ ಸಮಾಜದಲ್ಲಿ ಟಾರ್ಗೆಟ್‌ ಮಾಡಲಾಗುತ್ತದೆ* ಪ್ರಶಾಂತ ಸಂಬರಗಿ ನನಗೆ ಪರಿಚಯ ಇಲ್ಲ* ನಾನು ಕಾಸ್ಟಿಂಗ್‌ ಕೌಚ್‌ ಬಗ್ಗೆ ನೋಡಿಲ್ಲ

ವಿಜಯಪುರ(ಜೂ.17):ಡ್ರಗ್ಸ್‌ ಕೇಸ್‌ನಲ್ಲಿ ನನ್ನನ್ನು ಶೇ.100ರಷ್ಟು ಟಾರ್ಗೆಟ್‌ ಮಾಡಲಾಗಿದೆ. ಆದರೆ ನಾನು ಈ ವಿಚಾರದಲ್ಲಿ ತಪ್ಪು ಮಾಡಿಲ್ಲ. ಅದಕ್ಕಾಗಿ ನಾನು ಟೆನ್ಶನ್‌ ಮಾಡಿಕೊಳ್ಳಲ್ಲ ಎಂದು ಚಿತ್ರನಟಿ ರಾಗಿಣಿ ದ್ವಿವೇದಿ ಅವರು ತಿಳಿಸಿದ್ದಾರೆ. 

ಬುಧವಾರ ನಗರದಲ್ಲಿ ಖಾಸಗಿ ಹೊಟೇಲ್‌ವೊಂದರಲ್ಲಿ ಮಂಗಳಮುಖಿಯರಿಗೆ ಕೋವಿಡ್‌ ಜಾಗೃತಿ, ವ್ಯಾಕ್ಸಿನ್‌ ನೀಡಿಕೆ ಹಾಗೂ ಆಹಾರ ಕಿಟ್‌ ವಿತರಿಸಿದ ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಡ್ರಗ್ಸ್‌ ವಿಚಾರವಾಗಿ ನಾನು ಹೆಚ್ಚು ಮಾತನಾಡಲ್ಲ. ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸವಿದೆ. ಬರೀ ಈ ಒಂದು ಕೇಸ್‌ನಲ್ಲಿ ಅಲ್ಲ. ಹೆಣ್ಣು ಮಕ್ಕಳು ಎಂದರೆ ಸಾಕು. ಪ್ರತಿಯೊಂದು ವಿಚಾರದಲ್ಲೂ ಸಮಾಜದಲ್ಲಿ ಟಾರ್ಗೆಟ್‌ ಮಾಡಲಾಗುತ್ತದೆ ಎಂದರು.

ಕಾಸ್ಟಿಂಗ್‌ ಕೌಚ್‌ ಒಂದು ಸ್ಟುಪಿಡ್‌ ವರ್ಡ್‌:

ಕಾಸ್ಟಿಂಗ್‌ ಕೌಚ್‌ ಅನ್ನುವುದು ನನ್ನ ದೃಷ್ಟಿಯಲ್ಲಿ ಒಂದು ಸಖತ್‌ ಸ್ಟುಪಿಡ್‌ ವರ್ಡ್‌. ನೀವು ನಡೆಸುವ ಜೀವನದ ಮೇಲೆ ಅದು ಡಿಪೆಂಡ್‌ ಆಗಿರುತ್ತದೆ. ಯಾವತ್ತೂ ಒಂದೇ ಕೈಯಿಂದ ಚಪ್ಪಾಳೆ ಆಗಲ್ಲ. ಕಾಸ್ಟಿಂಗ್‌ ಕೌಚ್‌ ಬಗ್ಗೆ ನನ್ನ ಲೈಫಲ್ಲಿ ನನಗೆ ಎಕ್ಸಪಿರೀಯನ್ಸ್‌ ಆಗಿಲ್ಲ ಎಂದು ಹೇಳಿದರು.

ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತದಾನ ಮಾಡಿದ ಸ್ಯಾಂಡಲ್‌ವುಡ್‌ ನಟಿ ರಾಗಿಣಿ!

ಲೈಫ್‌ನಲ್ಲಿ ಎರಡು ಥರ ಜೀವನ ಇದೆ. ಒಂದು ಶಾರ್ಟ್‌ ಕಟ್‌ ಮತ್ತೊಂದು ಲಾಂಗ್‌ ಲೈಫ್‌. ಕಷ್ಟಪಟ್ಟರೆ ನಾವು ಬೆಳೆಯುತ್ತೇವಿ. ಪ್ರತಿಯೊಂದು ಸ್ಟೆಪ್‌ ಬೈ ಸ್ಟೆಪ್‌ ಆಗುತ್ತದೆ. ಶಾರ್ಟ್‌ ಕಟ್‌ ತೆಗೆದುಕೊಂಡರೆ ಕೆಲವೊಮ್ಮೆ ರಾಂಗ್‌ ಪರ್ಸನ್‌ ಮೀಟ್‌ ಮಾಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅತಿ ಬೇಗನೆ ನೇಮು, ಫೇಮು, ದುಡ್ಡು ಗಳಿಸುವುದನ್ನು ಬಿಟ್ಟು ನಮ್ಮ ಕೆಲಸದ ಮೇಲೆ ನಾವು ಏನು ಮಾಡ್ತಿವಿ ಅನ್ನುವುದರ ಮೇಲೆ ಫೋಕಸ್‌ ಮಾಡಬೇಕು ಎಂದು ಹೇಳಿದರು. 12 ವರ್ಷದಿಂದ ನಾನು ಸಿನಿಮಾ ಇಂಡಸ್ಟ್ರೀಜ್‌ನಲ್ಲಿ ಇದ್ದೇನೆ. ನಾನು ಕಾಸ್ಟಿಂಗ್‌ ಕೌಚ್‌ ಬಗ್ಗೆ ನೋಡಿಲ್ಲ. ಯಾರಾದರೂ ಕಾಸ್ಟಿಂಗ್‌ ಕೌಚ್‌ ಬಗ್ಗೆ ಹೇಳಿದರೆ ಬಹುಶಃ ಅವರು ಅಂತಹ ಸಂದರ್ಭ ಅನುಭವಿಸಿರಬಹುದು. ಅವರಿಗೆ ಆ ಥರ ಅನುಭವ ಆಗಿರಬಹುದು. ಅದರ ಹಿಂದೆ ಸಾಕಷ್ಟು ಕಾರಣಗಳು ಇರುತ್ತವೆ ಎಂದರು. ಮತ್ತೊಬ್ಬರಿಗೆ ಬ್ಲೇಮ್‌ ಮಾಡುವ ಬದಲು ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಕರೆಕ್ಟ್ ಆಗಿದ್ದರೆ ಸಾಕು. ಎಲ್ಲವೂ ಸರಿ ಇರುತ್ತದೆ ಎಂದರು.

ಪ್ರಶಾಂತ ಸಂಬರಗಿ ನನಗೆ ಪರಿಚಯ ಇಲ್ಲ:

ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ನಿಜವಾಗಿಯೂ ನನಗೆ ಪರಿಚಯವಿಲ್ಲ. ಅವರೊಂದಿಗೆ ನಾನು ಮಾತನಾಡಿಯೂ ಇಲ್ಲ. ಅವರವರ ಓಪಿನಿಯನ್‌ ಹೇಳುತ್ತಾರೆ. ಅದನ್ನು ನಾನು ಕಂಟ್ರೋಲ್‌ ಮಾಡಲಿಕ್ಕಾಗಲ್ಲ. ನಾನು ಏನು ಮಾಡ್ತಿನಿ, ಮಾತಾಡ್ತಿನಿ ಅನ್ನುವುದನ್ನು ಮಾತ್ರ ಕಂಟ್ರೋಲ್‌ ಮಾಡ್ತಿನಿ ಎಂದು ತಿಳಿಸಿದರು. ನನ್ನನ್ನು ಎಲ್ಲರೂ ಇಷ್ಟ ಪಡುತ್ತಾರೆ. ನನಗೆ ಫ್ಯಾನ್ಸ್‌ ಇದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ನನ್ನನ್ನು ಇಷ್ಟಪಟ್ಟವರಿಗೂ ಹಾಗೂ ಇಷ್ಟಪಡದವರಿಗೂ ಥ್ಯಾಂಕ್ಯೂ ಎಂದು ರಾಗಿಣಿ ಮಾತು ಮುಗಿಸಿದರು.