Asianet Suvarna News Asianet Suvarna News

ಮತ್ತೊಂದು ಪ್ರೇಮಲೋಕದ ಜೊತೆಗೆ ನಿಮ್ಮ ಮುಂದೆ ಬರುವೆ: ನಟ ರವಿಚಂದ್ರನ್

ಕುಟುಂಬದವರು ಪ್ರೀತಿಯಿಂದ ಸೇರಲು ಮನೆ ಹಬ್ಬ ಮಾಡುತ್ತೇವೆ. ಆದರೆ, ಇಡೀ ಊರ ಜನರು ಒಗ್ಗೂಡಲು ಮಾಡುವ ಹಬ್ಬ ಅಂದ್ರೆ ಅದು ಹಂಪಿ ಉತ್ಸವ ಎಂದು  ಹಂಪಿ ಉತ್ಸವದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ ನಟ ರವಿಚಂದ್ರನ್ 

Sandalwood Actor V Ravichandran Talks Over Premaloka Part 2 Movie grg
Author
First Published Feb 5, 2024, 12:30 AM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ವಿಜಯನಗರ(ಫೆ.05): 36 ವರ್ಷದ ಹಿಂದೆ ಪ್ರೇಮಲೋಕ ಮಾಡಿದ್ದೇ 36 ವರ್ಷದ‌ ಹಿಂದೆ ಹಂಪಿ ಉತ್ಸವ ಅರಂಭವಾಗಿತ್ತು. ಹಂಪಿ ಉತ್ಸವಕ್ಕೂ ನನಗೂ ನಂಟಿದೆ. ಮುಂದಿನ ವರ್ಷದ ಹಂಪಿ‌ ಉತ್ಸವದೊಳಗೆ ಮತ್ತೊಂದು ಪ್ರೇಮಲೋಕದ ಜೊತೆಗೆ ನಿಮ್ಮ ಮುಂದೆ ಬರುವೆ ಎಂದು ಪ್ರೇಮಲೋಕ ಪಾರ್ಟ್‌ 2 ಸಿನಿಮಾ ಮಾಡುವ ಬಗ್ಗೆ ನಟ ವಿ. ರವಿಚಂದ್ರನ್ ಘೋಷಣೆ ಮಾಡಿದ್ದಾರೆ. 

ಹಂಪಿ ಉತ್ಸವದ ಮೂರನೇ(ಭಾನುವಾರ) ದಿನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ವೇದಿಕೆಯಲ್ಲಿ ಮಾತನಾಡಿದ ರವಿಚಂದ್ರನ್ ಅವರು, ಕುಟುಂಬದವರು ಪ್ರೀತಿಯಿಂದ ಸೇರಲು ಮನೆ ಹಬ್ಬ ಮಾಡುತ್ತೇವೆ. ಆದರೆ, ಇಡೀ ಊರ ಜನರು ಒಗ್ಗೂಡಲು ಮಾಡುವ ಹಬ್ಬ ಅಂದ್ರೆ ಅದು ಹಂಪಿ ಉತ್ಸವ ಎಂದು  ಹಂಪಿ ಉತ್ಸವದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. 

ವಿಜಯನಗರ: ಹಂಪಿ ಉತ್ಸವದಲ್ಲಿ ಧ್ವನಿ, ಬೆಳಕಿನ ರಸದೌತಣ..!

ಹಂಪಿ ವಿಜಯನಗರ ಸಾಮ್ರಾಜ್ಯ ಅಂದ್ರೆ  ಮೈ ಝುಮ್ಮೆನ್ನುತ್ತದೆ. ಹಂಪಿಯಲ್ಲಿನ ಒಂದೊಂದು ಶಿಲೆಗಳು ಇಲ್ಲಿನ ಒಂದೊಂದು ಕಥೆ ಹೇಳುತ್ತವೆ. ಇಲ್ಲಿನ ಕಲಾಶಿಲ್ಪ ಅವಿಸ್ಮರಣೀಯವಾಗಿದೆ. ಅಂತಹ ಕಲಾವಿದರ ಸೇವೆಯನ್ನು ಸ್ಮರಿಸುವ ಕಾರ್ಯವನ್ನು ಇಂತಹ ಉತ್ಸವಗಳು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಹಂಪಿ ಸುಮ್ಮನೇ ಆಗಿಲ್ಲ. ಇದಕ್ಕೆ  ಅದ್ಭುತ ಇತಿಹಾಸವಿದೆ. ಹಲವರು ಸೇರಿ ನಿರ್ಮಿಸಿದ ಸಂಪತ್ತು ಇದು. ಇದನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಿನಿಮಾ ಮಾಡೋದು ಪ್ರೀತಿ ಮಾಡೋದಷ್ಟೇ ಗೊತ್ತು

ಇನ್ನೂ ತಮ್ಮ. ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ ರವಿಚಂದ್ರನ್ ಅವರು, ನನಗೆ ಗೊತ್ತಿರೋದು ಕೇವಲ ಸಿನಿಮಾ ಮಾಡೋದು ಮತ್ತು ಪ್ರೀತಿ ಮಾಡೋದು. ಸಿನಿಮಾ ಮಾಡ್ತೇನೆ ಸೋಲೋ ಗೆಲುವೋ ಗೊತ್ತಿಲ್ಲ. ಆದರೆ ನಿಮಗೆ ಇಷ್ಟವಾಗುವ ಸಿನಿಮಾ ಮಾಡ್ತೇನೆ. ನನ್ನ ಗೆಲವು ಮತ್ತು ನನ್ನ ಸೋಲು ಜನರ ಕೈಯಲ್ಲಿದೆ ಎಂದು ಭಾವಿಸಿದ್ದೇನೆ. ನಾನು ಯಾವತ್ತೂ ಸೋತಿಲ್ಲ. ಸೋಲನ್ನು ನಾನು ಒಪ್ಪೋಲ್ಲ.  ಒಂದು ಉತ್ತಮ ಕೆಲಸಕ್ಕಾಗಿ ನಾನು ಸಾಕಷ್ಟು ಕಾಯುತ್ತೇನೆ. ಬರುವ ವರ್ಷದೊಳಗೆ ಮತ್ತೆ ಪ್ರೇಮಲೋಕ ಕಟ್ಟಿ ಕೊಡ್ತೇನೆ. ಮನೆ ಮನೆಯಲ್ಲಿ ಹಾಡು ಕೇಳಬೇಕು. ಸಿನಿಮಾದಲ್ಲಿ 25 ಹಾಡುಗಳನ್ನು ಸಂಯೋಜನೆ ಮಾಡ್ತೇನೆ. ಮನೆ ಮಂದಿಯಲ್ಲ ಕುಳಿತು ಸಿನಿಮಾ ನೋಡಬೇಕು ಹಾಗೆ ಸಿನೇಮಾ‌ ಮಾಡ್ತೇನೆ ಎಂದರು. 

ಹೊಸಪೇಟೆ: ಹಂಪಿಯಲ್ಲಿ ದೇವರ ದರ್ಶನಕ್ಕೂ ಬಂತು ಡ್ರೆಸ್‌ ಕೋಡ್‌..!

ಅಪ್ಪ ಮತ್ತು ಅಪ್ಪು ಇಬ್ಬರ ಅಪ್ಪುಗೆ ಮರೆಯಲು ಸಾಧ್ಯವಿಲ್ಲ ಎಂದು ತಮ್ಮ ತಂದೆ ಮತ್ತು ಪುನೀತ್ ರಾಜಕುಮಾರ್‌ ಅವರನ್ನು ನೆನೆದರು.

ನಾಡಹಬ್ಬದಂತೆ ನಡೆದ ಹಂಪಿ ಉತ್ಸವ

ನಾಡ ಹಬ್ಬದಂತೆ  ಮೂರು ದಿನಗಳ   ಹಂಪಿ ಉತ್ಸವ  ಅದ್ದೂರಿಯಾಗಿ ನಡೆದಿದೆ  ಹಂಪಿ ಉತ್ಸವಕ್ಕೆ ಯಾವುದೇ ಪಕ್ಷ ಬೇಧ ಇಲ್ಲ. ಎಲ್ಲರೂ ನಮ್ಮ ನಾಡಿನ ಉತ್ಸವ ಎಂದೇ ಪಾಲ್ಗೊಂಡಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್‌ ಹೇಳಿದರು.
ಮಾಜಿ ಸಚಿವ ಆನಂದ ಸಿಂಗ್ ಪಕ್ಷಬೇದ ಮರೆತು ಪಾಲ್ಗೊಂಡಿರೋದು ಸಂತೋಷವಾಗಿದೆ.  ಈ ಹಿಂದಿನ ಎಲ್ಲಾ ಉತ್ಸವಗಳಿಂತಲೂ ಅಧಿಕ ಜನಸ್ತೋಮ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಿದ್ದಾರೆ.     ಹಂಪಿಯ ತುಂಬೆಲ್ಲಾ ಹೋಟೆಲ್ ಸ್ಟಾಲ್‌ಗಳು ರಿಯಾಯಿತಿ ದರದಲ್ಲಿ ಊಟ ಒದಗಿಸಿವೆ. ಇವರ ಸೇವೆ ಆಧರಿಸಿ ಜಿಲ್ಲಾಡಳಿತದಿಂದ ಹೋಟೆಲ್ ಸ್ಟಾಲ್‌ಗಳ ಬಾಡಿಗೆ ಮನ್ನಾ ಮಾಡುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದರು. 

Follow Us:
Download App:
  • android
  • ios