ಹಾಸನ, (ಮೇ.23): ಖ್ಯಾತ ಪರಿಸರ ಹೋರಾಟಗಾರ್ತಿ, ಶತಾಯುಷಿ ಸಾಲುಮರದ ತಿಮ್ಮಕ್ಕನವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ತೀವ್ರ ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿ ಅಸ್ವಸ್ಥರಾಗಿದ್ದ ತಿಮ್ಮಕ್ಕನವರನ್ನು ಗುರುವಾರ ಹಾಸನ ನಗರದ ಮಣಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಇದೀಗ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರು ಚೇತರಿಸಿಕೊಂಡಿದ್ದು, ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ವೈರಸ್ ಕೇಕೆ, ಟಿ20 ವಿಶ್ವಕಪ್ ಮುಂದೂಡಿಕೆ; ಮೇ.23ರ ಟಾಪ್ 10 ಸುದ್ದಿ!

ಮಣಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯೆ ಸೌಮ್ಯಮಣಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತಿಮ್ಮಕ್ಕ ಅವರು ಆರೋಗ್ಯವಾಗಿದ್ದಾರೆ  ಸ್ಪಷ್ಟಪಡಿಸಿದರು.

ದತ್ತು ಪುತ್ರ ಬಳ್ಳೂರು ಉಮೇಶ್ ಅವರ ಸ್ವಗ್ರಾಮ ಬೇಲೂರಿನ ತಾಲ್ಲೂಕಿನ ಬಳ್ಳೂರು ಗ್ರಾನದಲ್ಲಿ ಕಳೆದೆರಡು ತಿಂಗಳಿನಿಂದ ತಿಮ್ಮಕ್ಕ ನೆಲೆಸಿದ್ದಾರೆ.