Asianet Suvarna News Asianet Suvarna News

ಸ್ತ್ರೀಯರ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ಸಖಿ ಯೋಜನೆ

ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ವೈಯಕ್ತಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿ ಸ್ವಸ್ಥ ಮಹಿಳಾ ಸಮಾಜ ನಿರ್ಮಾಣಕ್ಕಾಗಿ ನಮ್ಮ ಆರೋಗ್ಯ ಕೇಂದ್ರ ಎಂಬ ವಿನೂತನ, ವಿಶಿಷ್ಟಯೋಜನೆಗೆ ಚಾಲನೆ ನೀಡಲಾಗುತ್ತಿದ್ದು ಮಹಿಳೆಯರು ಇದರ ಸದ್ವಿನಿಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕಾಂಗ್ರೆಸ್‌ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿ ಸಿ.ಬಿ. ಶಶಿಧರ್‌ ತಿಳಿಸಿದರು.

Sakhi Yojana For Women Health improvement snr
Author
First Published Dec 4, 2022, 6:01 AM IST

  ತಿಪಟೂರು (ಡ.04):  ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ವೈಯಕ್ತಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿ ಸ್ವಸ್ಥ ಮಹಿಳಾ ಸಮಾಜ ನಿರ್ಮಾಣಕ್ಕಾಗಿ ನಮ್ಮ ಆರೋಗ್ಯ ಕೇಂದ್ರ ಎಂಬ ವಿನೂತನ, ವಿಶಿಷ್ಟಯೋಜನೆಗೆ ಚಾಲನೆ ನೀಡಲಾಗುತ್ತಿದ್ದು ಮಹಿಳೆಯರು ಇದರ ಸದ್ವಿನಿಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕಾಂಗ್ರೆಸ್‌ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿ ಸಿ.ಬಿ. ಶಶಿಧರ್‌ ತಿಳಿಸಿದರು.

ನಗರದ ಕೌಸ್ತುಭ ಹೋಟೆಲ್‌ನಲ್ಲಿ (Hotel)  ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಮತಾ ಉಮಾ ಮಹೇಶ್‌ ಮಾತನಾಡಿ,ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ತಮಗಾಗುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಕುಟುಂಬ (Family)  ದೊಂದಿಗೆ ಹೇಳಿಕೊಳ್ಳಲು ಸಂಕೋಚ ಪಡುತ್ತಾರೆ. ಅವರೊಂದಿಗೆ ನಮ್ಮ ಸಖಿಯರು ಆಪ್ತಸಮಾಲೋಚನೆ ನಡೆಸಿ ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಸಮಸ್ಯೆಗಳನ್ನು ಆಲಿಸಿ ವೈದ್ಯರನ್ನು ಸಂಪರ್ಕಿಸಿ ಪರಿ ಹರಿಸುವ ಕೆಲಸ ಮಾಡಲಾಗುವುದು ಎಂದರು.

ಸಾರ್ಥವಳ್ಳಿ ಗ್ರಾಪಂ ಸದಸ್ಯೆ ಭವ್ಯ ನವೀನ್‌ ಮಾತನಾಡಿ, ಮಹಿಳೆಯರಿಂದ ಮಹಿಳೆಯರಿಗಾಗಿ ಈ ಕಾರ್ಯಕ್ರಮವನ್ನು ತರಲಾಗುತ್ತಿದ್ದು ಹಣಕ್ಕಿಂತ ಆರೋಗ್ಯ ಮುಖ್ಯವಾಗಿದ್ದು ಎಷ್ಟೋ ಹೆಣ್ಣು ಮಕ್ಕಳು ತಮ್ಮ ಆರೋಗ್ಯ ಸಮಸ್ಯೆಗಳನ್ನು ಮುಚ್ಚಿಡುತ್ತಾರೆ. ಇದರಿಂದ ಮುಂದೆ ತೊಂದರೆಯಾಗಲಿದ್ದು ನಮ್ಮ ಸಖಿಯರು ನಿಮ್ಮ ಮನೆ ಬಾಗಿಲಿಗೆ ಬಂದಾಗ ಮುಕ್ತವಾಗಿ ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆಯಿರಿ ಎಂದರು.

ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷೆ ಭವ್ಯ ಮಾತನಾಡಿ, ಮಹಿಳೆಯರ ಬಗ್ಗೆ ಕಾಳಜಿ ಹೊಂದುವ ವ್ಯಕ್ತಿಗಳು ತೀರ ವಿರಳ. ಶಶಿಧರ್‌ರವರು ಮಹಿಳೆಯರು ಆರೋಗ್ಯವಾಗಿದ್ದರೆ ಇಡೀ ಸಮಾಜವೇ ಆರೋಗ್ಯವಾಗಿರಲಿದೆ ಎಂಬ ಉದ್ದೇಶದಿಂದ ನೂತನ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದ ವಿಷಯ. ಮಹಿಳೆಯರ ಆರೋಗ್ಯದ ಜತೆಗೆ ಉದ್ಯೋಗವನ್ನು ಕಲ್ಪಿಸಿಕೊಡುವಲ್ಲಿ ಚಿಂತನೆ ನಡೆಸಿರುವ ಇವರಿಗೆ ಎಲ್ಲರ ಪೋ›ತ್ಸಾಹ, ಸಹಕಾರ ಅಗತ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಬಳುವನೇರಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ, ಗ್ರಾಪಂ ಸದಸ್ಯೆ ಸುಮಲತಾ ಮತ್ತಿತರರಿದ್ದರು.

ಆರೋಗ್ಯ ಸಖಿಯರ ನೇಮಕಾತಿ ಪ್ರಕ್ರಿಯೆ ಆರಂಭ

ಪ್ರತಿ ಗ್ರಾಮಕ್ಕೊಬ್ಬರಂತೆ ಸಖಿಯನ್ನು ನಿಯೋಜಿಸಲಾಗುತ್ತಿದ್ದು ಪ್ರತಿ ಮನೆಗಳಿಗೆ ಭೇಟಿ ನೀಡಿ ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ತಿಳಿದು ಸಮಾಲೋಚನೆ ನಡೆಸಲಾಗುವುದು. ಇದಕ್ಕಾಗಿ 50ರಿಂದ 100 ಆರೋಗ್ಯ ಸಖಿಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇದರ ಮೊದಲ ಪ್ರಯತ್ನವಾಗಿ ಡಿ.6ರಂದು ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ನಮ್ಮ ಆರೋಗ್ಯ ಕೇಂದ್ರಕ್ಕೆ ಚಾಲನೆ ನೀಡಲಾಗುತ್ತಿದೆ. ಕೆರೆಗೋಡಿ - ರಂಗಾ ಪುರ ಸು ಕ್ಷೇತ್ರಾಧ್ಯಕ್ಷರಾದ ಗುರು ಪರದೇಶಿ ಕೇಂದ್ರ ಸ್ವಾಮೀಜಿ, ತಮ್ಮಡಿ ಹಳ್ಳಿ ಡಾ. ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಮಾಡಾಳು ರುದ್ರ ಮುನಿ ಸ್ವಾಮೀಜಿ, ಹೊನ್ನವಳ್ಳಿ ಶಿವ ಪ್ರಕಾಶ ಸ್ವಾಮೀಜಿಗಳು ಭಾಗ ವಹಿಸಲಿದ್ದಾರೆ. ಖ್ಯಾತ ಪ್ರಸೂತಿ ತಜ್ಞೆ ಹಾಗೂ ಆರ್ಟಿಸ್ಟ್‌ ಫಾರ್‌ ಹರ್‌ನ ಮುಖ್ಯಸ್ಥೆ ಹೇಮಾ ದಿವಾಕರ್‌ ಅವರ ಕನಸಿನ ಯೋಜನೆಗೆ ಮತ್ತಷ್ಟುಶಕ್ತಿ ಬರಲಿದೆ. ಮುಂದಿನ ದಿನಗಳಲ್ಲಿ 26 ಗ್ರಾಮ ಪಂಚಾಯಿತಿಗಳಲ್ಲಿಯೂ ಈ ಯೋಜನೆಗೆ ಚಾಲನೆ ನೀಡಲಾಗುವುದು. ಮಹಿಳೆಯರು ಪ್ರಯೋಜನ ಪಡೆದುಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ಶಶಿಧರ್‌ ಮನವಿ ಮಾಡಿದರು.

  ಗ್ರಾಮೀಣ ಭಾಗದ ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ವೈಯಕ್ತಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿ ಸ್ವಸ್ಥ ಮಹಿಳಾ ಸಮಾಜ ನಿರ್ಮಾಣ

ನಮ್ಮ ಆರೋಗ್ಯ ಕೇಂದ್ರ ಎಂಬ ವಿನೂತನ, ವಿಶಿಷ್ಟಯೋಜನೆಗೆ ಚಾಲನೆ

ಮಹಿಳೆಯರು ಇದರ ಸದ್ವಿನಿಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಕಾಂಗ್ರೆಸ್‌ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿ ಸಿ.ಬಿ. ಶಶಿಧರ್‌

 

Follow Us:
Download App:
  • android
  • ios