Asianet Suvarna News Asianet Suvarna News

#Breaking ಸಾಗರ ಶಾಸಕ ಹರತಾಳು ಹಾಲಪ್ಪನವರಿಗೆ ಕೊರೋನಾ ಸೋಂಕು..!

ಮಾಜಿ ಸಚಿವ, ಸಾಗರ ಕ್ಷೇತ್ರದ ಶಾಸಕ, MSIL  ಅಧ್ಯಕ್ಷ ಹರತಾಳು ಹಾಲಪ್ಪ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಹಾಲಪ್ಪ ಪತ್ನಿ ಕಾರು ಚಾಲಕ ಹಾಗೂ ಓರ್ವ ಸಿಬ್ಬಂದಿಗೆ ಸೋಂಕಿಗೆ ತುತ್ತಾಗಿರುವುದಾಗಿ ಸ್ವತಃ ಹಾಲಪ್ಪ ಖಚಿತಪಡಿಸಿದ್ದಾರೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

Sagara MLA Harathalu Halappa Tests Corona Positive
Author
Bengaluru, First Published Aug 4, 2020, 2:05 PM IST

ಬೆಂಗಳೂರು(ಜು.04): ಕೊರೋನಾ ವೈರಸ್ ಜನಸಾಮಾನ್ಯರ ಜತೆ ಜತೆಗೆ ಜನಪ್ರತಿನಿಧಿಗಳನ್ನು ಕಾಡಲಾರಂಭಿಸಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಹೌದು, ಹರತಾಳು ಹಾಲಪ್ಪ ಅವರಿಗೆ ಮೈಕೈ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪರೀಕ್ಷೆಗೊಳಗಾಗಿದ್ದಾರೆ. ಪರೀಕ್ಷೆ ಬಳಿಕ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಹರತಾಳು ಹಾಲಪ್ಪ ಅವರ ಪತ್ನಿ ಮತ್ತು ವಾಹನ ಚಾಲಕನಿಗೂ ಸೋಂಕು ಧೃಢಪಟ್ಟಿದೆ. 

ನಾನು ಕೋವಿಡ್-19 ಪರೀಕ್ಷೆ ಒಳಗಾಗಿದ್ದು ಇದೀಗ ಬಂದ ವರದಿಯ ಪ್ರಕಾರ ನನಗೆ, ನನ್ನ ಪತ್ನಿ, ಕಾರು ಚಾಲಕ, ಹಾಗೂ ಓರ್ವ ಸಿಬ್ಬಂದಿಗೆ, ಪಾಸಿಟಿವ್ ಎಂದು ದೃಢಪಟ್ಟಿದೆ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ.

ಇತ್ತೀಚೆಗೆ ನನ್ನನ್ನು ಸಂಪರ್ಕಿಸಿದವರಿಗೆ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಕೂಡಲೇ ಪರೀಕ್ಷೆಗೆ ಒಳಗಾಗಬೇಕಾಗಿ ವಿನಂತಿಸುತ್ತೇನೆ ಎಂದು ಹರತಾಳು ಹಾಲಪ್ಪ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಿದ್ದರಾಮಯ್ಯ ಜೊತೆ ಇದ್ದ ಡಿಕೆಶಿ ಟೆಂಪಲ್ ರನ್; ಸಾಮಾಜಿಕ ಅಂತರವೂ ಇಲ್ಲ, ಜವಾಬ್ದಾರಿಯೂ ಇಲ್ಲ.!

ಇತ್ತೀಚಿಗಷ್ಟೇ ಎಂ.ಎಸ್.ಐ.ಎಲ್. ಅಧ್ಯಕ್ಷರಾಗಿ ಹರತಾಳು ಹಾಲಪ್ಪ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಹರತಾಳು ಹಾಲಪ್ಪ ಹಾಗೂ ಪತ್ನಿ ಮತ್ತು ಕಾರು ಚಾಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಲಾರಂಭಿಸಿದ್ದಾರೆ

Follow Us:
Download App:
  • android
  • ios