ಸಾಗರ (ಶಿವಮೊಗ್ಗ): ತಾಲೂಕಿನ ಪ್ರಸಿದ್ಧ ಸಿಗಂದೂರು ದೇವಾಲಯದ ಪ್ರಧಾನ ಅರ್ಚಕರು ಹಾಗೂ ಧರ್ಮದರ್ಶಿಗಳ ನಡುವೆ ಉಂಟಾಗಿದ್ದ ವಿವಾದ ಬುಧವಾರ ಸಾಗರದ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯ ಕಂಡಿದೆ.

ದೇವಸ್ಥಾನದ ಭಕ್ತರಾದ ಸಂದೀಪ್‌ ಜೈನ್‌ ಹುಲಿದೇವರಬನ ಹಾಗೂ ನವೀನ್‌ ಜೈನ್‌ ಕೊಪ್ಪ ಅವರು, ದೇವಸ್ಥಾನದ ಪೂಜಾ ವಿಧಿವಿಧಾನ ನಡೆಸಲು ಅರ್ಚಕ ಶೇಷಗಿರಿ ಭಟ್ಟರಿಗೆ ಯಾವುದೇ ರೀತಿ ಅಡ್ಡಿ ಆತಂಕ ಉಂಟು ಮಾಡಬಾರದು ಎಂದು ಧರ್ಮದರ್ಶಿ ರಾಮಪ್ಪ ಮತ್ತು ಅವರ ಪುತ್ರ ರವಿಕುಮಾರ್‌ ವಿರುದ್ಧ ನಿರ್ಬಂಧಕಾಜ್ಞೆ ನೀಡುವಂತೆ ಕೋರಿ ಸೋಮವಾರ ದಾವೆ ದಾಖಲಿಸಿದ್ದರು.

ಸಿಗಂದೂರು ಚೌಡೇಶ್ವರಿ ಸನ್ನಿಧಿ ಭಾರೀ ಉದ್ವಿಗ್ನ ...

 ಈ ಸಂಬಂಧ ದಾವೆ ಹೂಡಿದ್ದ ಪಕ್ಷಗಾರರು ದೇವಾಲಯ ಧರ್ಮದರ್ಶಿ ರಾಮಪ್ಪ ಹಾಗೂ ಅವರ ಪುತ್ರ ರವಿಕುಮಾರ್‌ ಹಾಗೂ ಅರ್ಚಕ ಶೇಷಗಿರಿ ಭಟ್‌ ಅವರನ್ನು ನ್ಯಾಯಾಲಯಕ್ಕೆ ಕರೆಸಿದ ನ್ಯಾ. ಫೆಲಿಕ್ಸ್‌ ಆಲಾ​ನ್ಸೋ ಅಂತೋನಿಯವರು ಮಧ್ಯಸ್ಥಗಾರಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದರು. ಉಭಯ ಪಕ್ಷಗಾರರ ವಕೀಲರ ಹಾಗೂ ನ್ಯಾಯಾಲಯ ನೇಮಿಸಿದ ಮಧ್ಯಸ್ಥಗಾರರ ಉಪಸ್ಥಿತಿಯಲ್ಲಿ ನಡೆದ ಮಾತುಕತೆಯಲ್ಲಿ ರಾಜಿ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ತೀರ್ಮಾನಿಸಲಾಯಿತು.