Asianet Suvarna News Asianet Suvarna News

ಪಕ್ಷ, ರಾಜ್ಯದ ಹಿತಕ್ಕಾಗಿ ಮಂತ್ರಿ ಸ್ಥಾನ ತ್ಯಾಗ

  • ಪರಿಸ್ಥಿತಿಗನುಗುಣವಾಗಿ ನಾನು ಸಭಾಪತಿಯಾದೆ. ಆದರೆ ಸಭಾಪತಿಯ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವೆ : ಬಸವರಾಜ ಹೊರಟ್ಟಿ
  • ವರ್ಷಕ್ಕೆ 60 ದಿನಗಳಾದರೂ ಸುವರ್ಣಸೌಧದಲ್ಲಿ  ಹೆಚ್ಚು ಸಭೆ ನಡೆಯುವಂತೆ ಕ್ರಮ 
Sacrificed for Party and State Says Basavaraja Horatti
Author
Bengaluru, First Published Jul 15, 2018, 4:36 PM IST

ಗದಗ[ಜು.15]: ನನಗೂ ಮಂತ್ರಿಯಾಗುವ ಆಸೆಯಿತ್ತು. ಎಲ್ಲರಿಗೂ ಅವಕಾಶದ ದೃಷ್ಟಿಯಿಂದ ಹಿರಿಯರಾದ ನಮ್ಮಂಥವರು ತ್ಯಾಗ ಮಾಡುವ ಅವಶಕ್ಯಕತೆ ಇದ್ದು, ಪಕ್ಷ ಹಾಗೂ ರಾಜ್ಯದ ಹಿತಕ್ಕಾಗಿ ಸಭಾಪತಿಯಾಗಿದ್ದೇನೆ ಎಂದು ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ್ ಹೊರಟ್ಟಿ ತಿಳಿಸಿದರು.

ಗದಗದಲ್ಲಿ ಮಾತನಾಡಿದ ಅವರು, ನಾನೂ ಶಿಕ್ಷಣ ಮಂತ್ರಿಯಾಗಬೇಕೆಂದು ಇಷ್ಟ ಪಟ್ಟಿದ್ದೆ. ಪರಿಸ್ಥಿತಿಗನುಗುಣವಾಗಿ ನಾನು ಸಭಾಪತಿಯಾದೆ. ಆದರೆ ಸಭಾಪತಿಯ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ನನ್ನ ಕಾರ್ಯ ನಿರ್ವಹಿಸುವೆ ಎಂದು ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಟ್ಟ ವಿಷಯದ ಬಗ್ಗೆ ಮಾತನಾಡಿದ ಅವರು, ಸರ್ಕಾರದ ಹೊಂದಾಣಿಕೆಯಲ್ಲಿ ಸಿಎಂ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೊಂದಾಣಿಕೆಯಲ್ಲಿ ತೊಂದರೆ ಸಹಜ. ಆದರೂ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದ ಅವರು ಬೆಳಗಾವಿ ಸುವರ್ಣಸೌಧ ಸದ್ಬಳಕೆಗೆ ಸಿಎಮ್ ಹಾಗೂ ಸಚಿವರ ಸಭೆ ಕರೆದು ಚರ್ಚಿಸುತ್ತೇನೆ ಎಂದರು. 

ಉತ್ತರ ಕರ್ನಾಟದಲ್ಲಿ ಹಾಗೂ ವರ್ಷಕ್ಕೆ 60 ದಿನಗಳಾದರೂ ಸುವರ್ಣಸೌಧದಲ್ಲಿ  ಹೆಚ್ಚು ಸಭೆ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಮಹದಾಯಿ ಅಥವಾ ಉತ್ತರ ಕರ್ನಾಟಕ ನಿಷ್ಕಾಳಿಜಿ ಬಗ್ಗೆ ನನ್ನ ಪರಿಮಿತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗಳು  ಶಿಥಿಲಾವಸ್ಥೆಯಲ್ಲಿವೆ. ಈ ಕುರಿತು ಸಚಿವರ ಸಭೆ ಕರೆದು  ಚರ್ಚಿಸಿದ್ದೇನೆ. ಆದ್ಯತೆಯ ಮೇರೆಗೆ ಸರ್ಕಾರಿ ಶಾಲೆಗಳ ದುರಸ್ಥಿ ಕಾರ್ಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

(ಸಾಂದರ್ಭಿಕ ಚಿತ್ರ)

 

Follow Us:
Download App:
  • android
  • ios