ಮೈಸೂರು [ಸೆ.13]: ಕ್ಷೇತ್ರ ಬದಲಾವಣೆ ಮಾಡುವತ್ತ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಆಪ್ತ ಮನಸು ಮಾಡಿದ್ದಾರೆ.

ಮಾಜಿ ಸಚಿವ ಜೆಡಿಎಸ್ ಮುಖಂಡ ಸಾ.ರಾ ಮಹೇಶ್ ಸೋಲಿನ ಭೀತಿಯಿಂದ ತಮ್ಮ ಕ್ಷೇತ್ರ ಬದಲಾವಣೆ ಮಾಡುವತ್ತ ಚಿತ್ತ ಹರಿಸಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿ.ಟಿ.ದೇವೇಗೌಡ ಹಾಗೂ ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರ ವಿರುದ್ಧ ನಿಲ್ಲುವುದು ಅಪಾಯಕಾರಿ ಎಂದು ಸೋಲಿನ ಭೀತಿಯಿಂದ  ಕ್ಷೇತ್ರದಿಂದ ಮತ್ತೊಂದು ಕ್ಷೇತ್ರದತ್ತ ಮುಖ ಮಾಡಲಿದ್ದಾರೆ ಎನ್ನಲಾಗಿದೆ. 

ಕೆ.ಆರ್ ನಗರ ಕ್ಷೇತ್ರದಿಂದ ಚಾಮರಾಜ ಕ್ಷೇತ್ರದತ್ತ ವಲಸೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ನೂತನ ಕ್ಷೇತ್ರದತ್ತ ತೆರಳುವ ಹಿನ್ನೆಲೆ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಮಹಾನಗರ ಪಾಲಿಕೆ ಸದಸ್ಯರು ಸೇರಿದಂತೆ ಹಲವು ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ.