'ಇಂದಿರಾ ಗಾಂಧಿಗೆ ಪಾಠ ಕಲಿಸಿದಂತೆ 2024ರಲ್ಲಿ ಮೋದಿಗೆ ಜನರು ತಕ್ಕಪಾಠ ಕಲಿಸ್ತಾರೆ'

ಆನಂದ ಸಿಂಗ್, ಶ್ರೀರಾಮುಲು, ಜನಾರ್ದನ ರೆಡ್ಡಿ ವಿರುದ್ಧ ಎಸ್.ಆರ್. ಹೀರೆಮಠ ವಾಗ್ದಾಳಿ| ಹಗಲು ದರೋಡೆ ಮಾಡಿ ಪಾಪ ಮಾಡಿರೋದ್ರಿಂದ ಜೈಲಿಗೆ ಹೋಗಿದ್ದ ಜನಾರ್ದನ ರೆಡ್ಡಿ| ಡಿ. 8ರ ಭಾರತ್ ಬಂದ್‌ಗೆ ಬೆಂಬಲ| 

S R Hiremth Slams On PM Narendra Modi Government grg

ಬಳ್ಳಾರಿ(ಡಿ.06): ರೈತ ವಿರೋಧಿ ಕಾಯ್ದೆಯನ್ನು ವಿರೋಧದ ಮಧ್ಯೆ ಅಂಗೀಕರಿಸಿದ್ದು ರೈತರಿಗೆ ‌ಮಾಡಿದ ಅನ್ಯಾಯವಾಗಿದೆ. ಮೂರು ರೈತ ವಿರೋಧ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಡಿ. 8ರ ಭಾರತ್ ಬಂದ್‌ಗೆ ಬೆಂಬಲ ಸೂಚಿಸುವುದರ ಜೊತೆಗೆ ರಾಜ್ಯದಲ್ಲಿಯೂ ಕೂಡ ಬಂದ್ ಮಾಡುತ್ತೇವೆ ಎಂದು  ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹೀರೆಮಠ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅದಾನಿ ಅಬಾನಿ ಟಾಟಾ ಬಿರ್ಲಾಗಳೇ ದೇಶದ ಪ್ರಧಾನಿಯಾಗಿದ್ದಾರೆ. ರೈತ ವಿರೋಧಿ ಕಾನೂನು ತರುತ್ತಿರುವ ಪ್ರಧಾನಿ ಮೋದಿ ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಹೊಸಪೇಟೆ: ಯುವಕನ ಕೊಲೆ ಶಂಕೆ, ಶವ ಇಟ್ಟು ಪ್ರತಿಭಟನೆ

ಹಿಂದೆ ಇಂದಿರಾ ಗಾಂಧಿಗೆ ಪಾಠ ಕಲಿಸಿದಂತೆ 2024ರಲ್ಲಿ ಬಿಜೆಪಿಗೆ ಜನರು ತಕ್ಕಪಾಠ ಕಲಿಸುತ್ತಾರೆ. ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದಿಂದಲೇ ಕೇಂದ್ರ ಸರ್ಕಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. 

ಗಣಿಗಾರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಹಿರೇಮಠ ಅವರು, ಗಣಿಭಾಧಿತ ಪ್ರದೇಶದ ಜನರಿಗೆ ಯಾವುದೇ ಸವಲತ್ತುಗಳನ್ನು ನೀಡುತ್ತಿಲ್ಲ. ಹದಿನೈದು ಸಾವಿರ ಕೋಟಿ ಗಣಿಭಾದಿತ ಹಣ ಇದೆ ಅದನ್ನು ಸಮರ್ಪಕವಾಗಿ ಬಳಸುವ ಕೆಲಸವಾಗಬೇಕು. ಅದಕ್ಕೆ ರಾಜ್ಯ ಸರ್ಕಾರ ಕೆಲ ಕಳ್ಳರನ್ನು ನೇಮಕ ಮಾಡಿದೆ. ಆನಂದ ಸಿಂಗ್, ಶ್ರೀರಾಮುಲು, ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಗಣಿ ಲೂಟಿ ಹೊಡೆದು ನೂರು ಕೋಟಿ ಮನೆ ಕಟ್ಟಿಸಿದ್ದಾರೆ. ಇಂಥವರನ್ನ ಸಂಪುಟದಿಂದ ಕೈಬಿಡಿ. ಹಗಲು ದರೋಡೆ ಮಾಡಿ ಪಾಪ ಮಾಡಿರೋದ್ರಿಂದ ಜನಾರ್ದನ ರೆಡ್ಡಿ ಜೈಲಿಗೆ ಹೋಗಿದ್ದರು. NMDC ಮೈನಿಂಗ್ ಕಂಪನಿಗೆ ಕಡಿಮೆ ಪ್ರೀಮಿಯಂನಲ್ಲಿ ಪ್ರೋಡೆಕ್ಷನ್ ಮಾಡಲು ಅನುಮತಿ ನೀಡಿರೋದು ತಪ್ಪು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
 

Latest Videos
Follow Us:
Download App:
  • android
  • ios