ಬಾಗಲಕೋಟೆ(ಫೆ.29): ದರಿದ್ರ ಆರ್‌ಎಸ್‌ಎಸ್‌, ದರಿದ್ರ ಸಂಘ ಪರಿವಾರ ಇದರಲ್ಲಿ ಯಾರೂ ಸ್ವಾತಂತ್ರ್ಯ ಹೋರಾಟಗಾರರೇ ಇಲ್ಲ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದ್ದಾರೆ. 

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ವಿಚಾರದ ಬಗ್ಗೆ ಶನಿವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ತಾಯಿಯ ಊರು ವಿಜಯಪುರ, ನಾನು ಸಾಕಷ್ಟು ಸಲ ಹೋಗಿದ್ದೇನೆ, ಯತ್ನಾಳ ಬಗ್ಗೆ ನನಗೆ ಗೊತ್ತು. ದೇವರು ಕೊಟ್ಟ ನಾಲಿಗೆಯನ್ನು ಜವಾಬ್ದಾರಿಯಿಂದ ಬಳಸಬೇಕು, ಅದನ್ನ ನಿಯಂತ್ರಣದಲ್ಲಿಡಬೇಕು. ದೊರೆಸ್ವಾಮಿ ಬಗ್ಗೆ ಮಾತನಾಡಿದ್ದು ಅನ್‌ಎಕ್ಸಪ್ಟೇಬಲ್, ಇದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಅವರು ನಿಯಂತ್ರಣ ಎಕ್ಸಸೈಜ್ ಮಾಡಬೇಕು ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜನ ಏನು ವಿಶ್ವಾಸವಿಟ್ಟು ಆರಿಸಿ ಕಳಿಸಿದ್ದಾರೋ ಅವರ ಬಗ್ಗೆನೂ ಗೌರವದಿಂದ ಮಾತನಾಡಬೇಕು. ಮುಸ್ಲಿಮರು ನನಗೆ ಓಟ್ ಹಾಕದಿದ್ರೆ ಏನು ಪ್ರಶ್ನೆ ಇಲ್ಲ ಅಂತ ಹೇಳುತ್ತಾರೆ. ಒಮ್ಮೆ ಶಾಸಕರಾದ ಮೇಲೆ‌ ಎಲ್ಲರಿಗೂ ಶಾಸಕರೇ, ಅಷ್ಟು ಪರಿಜ್ಞಾನ ಇರಬೇಕು ಎಂದಿದ್ದಾರೆ.

ಇವರ್ಯಾರಿ ಕೇಳೋವಾ, ಆ ಯಾಮ್ ಸಾರಿ ಟು ಸೇ ದಿಸ್, ಈ ದರಿದ್ರ ಆರ್‌ಎಸ್‌ಎಸ್‌, ಈ ದರಿದ್ರ ಸಂಘ ಪರಿವಾರ, ಇವರಲ್ಲಿ ಯಾರೂ ಎಂದೂ ಸ್ವಾತಂತ್ರ್ಯ ಹೋರಾಟಗಾರರೇ ಇಲ್ಲ. ನನ್ನ ಅಭಿಪ್ರಾಯದಲ್ಲಿ ಇಂತಹ ಉದ್ಧಟತನ ಹೇಳಿಕೆ ಜನಪ್ರತಿನಿಧಿಗೆ ಶೋಭೇ ತರುವುದಿಲ್ಲ ಎಂದು ಹೇಳಿದ್ದಾರೆ.

ತಕ್ಷಣ ಯತ್ನಾಳ ಬಾಯಿ ಬಂದ್ ಮಾಡಬೇಕು. ಇವರಷ್ಟೇ ಅಲ್ಲ ಇನ್ನುಳಿದವರು ಬಾಯಿ ಎತ್ತುತ್ತಿದ್ದಾರೆ. ಜನ ಕಳಿಸಿದ್ದು ಇವರನ್ನು ಕೆತ್ತೆಬಜೆ ಮಾಡೋಕೆ ಅಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಜನಹಿತ ಮಾತನಾಡುವುದಕ್ಕೆ ಕಳಿಸಿದ್ದಾರೆ ಎಂದು ಎಸ್.ಆರ್.ಹಿರೇಮಠ ಹೇಳಿದ್ದಾರೆ.

ಸಚಿವ ಆನಂದ ಸಿಂಗ್‌ಗೆ ಅರಣ್ಯ ಖಾತೆ ನೀಡಿದ್ದು ಕಟುಕನ ಕೈಯಲ್ಲಿ ಕುರಿ ಕೊಟ್ಟಂತೆ ಆಗಿದೆ. ಆನಂದ ಸಿಂಗ್ ಮಹಾಕಳ್ಳ, ಗಾಲಿ ಜನಾದರ್ನನ ರೆಡ್ಡಿ ದೊಡ್ಡ ಕಳ್ಳ, ದೊಡ್ಡ ಫಾರೆಸ್ಟ್ ವಲಯವನ್ನೇ ರೆವಿನ್ಯೂ ಅಂತ ಮಾಡಿದ್ರು, ದಾಖಲೆ ಸಮೇತ ಸುಪ್ರಿಕೋರ್ಟ್‌ಗೆ ಹೋದಾಗ ರದ್ದುಪಡಿಸಿತ್ತು. ಮೈನಿಂಗ್‌ನಲ್ಲಿ ಜನಾದರ್ನನ ರೆಡ್ಡಿ‌ ಜೊತೆ ಕೈಗೂಡಿಸಿದವ ಆನಂದ ಸಿಂಗ್. ಬೆಲೆಕೇರಿಯ 5 ಪ್ರಮುಖ ಕೇಸ್‌ಗಳಲ್ಲಿ ಒಂದು ಗಂಭೀರ ಕೇಸ್ ಆನಂದ ಸಿಂಗ್ ಮೇಲಿದೆ. ಇವನೊಬ್ಬ ಅತೀ ಬ್ರಷ್ಟ ಮನುಷ್ಯನಾಗಿದ್ದಾನೆ ಎಂದು ಹೇಳಿದ್ದಾರೆ. 

ಆನಂದ ಸಿಂಗ್ ರನ್ನ ಸಚಿವರನ್ನಾಗಿ ಮಾಡಿದ್ದಕ್ಕೆ ಸಿಎಂ ಯಡಿಯೂರಪ್ಪಗೆ ಪತ್ರ ಬರೆಯುತ್ತೇವೆ. ಬರೆದು ಎರಡು ವಾರ ಕಾಯುತ್ತೇವೆ. ಬಳಿಕ ನಾನು ಹಾಗೂ ಪ್ರಶಾಂತ ಭೂಷಣ ಸೇರಿ ಸುಪ್ರಿಕೋರ್ಟ್‌ನಲ್ಲಿ  ಮುಂದೇನು ಮಾಡಬೇಕು ಅಂತ ನೋಡುತ್ತೇವೆ ಎಂದು ಹೇಳಿದ್ದಾರೆ.