Vijayapura: ಅನಾರೋಗ್ಯ ವದಂತಿ ನಂತರ ಸಿದ್ದೇಶ್ವರ ಶ್ರೀಗಳಿಂದ ಭಕ್ತರ ದರ್ಶನ: ಅರ್ಧ ಗಂಟೆ ಪ್ರವಚನ
• ಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಶಿಕ್ಷಣ ಸಚಿವರು.
• ಭಕ್ತರಿಗೆ ಅರ್ಧ ತಾಸು ದರ್ಶನ ನೀಡಿದ ಶ್ರೀಗಳು.
• ಆರೋಗ್ಯ ವಿಚಾರಿಸಿದ ಮಠಾಧೀಶರು ಸೇರಿ ಮುಖಂಡರು.
ವರದಿ- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಡಿ.28) : ನಡೆದಾಡುವ ದೇವರು ಜ್ಞಾನ ಯೋಗಾಶ್ರಮ ಶ್ರೀ ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರವಾಗಿ ಜಿಲ್ಲೆಯಲ್ಲಿ ಹರಡಿರುವ ಊಹಾಪೋಹ ಹಿನ್ನೆಲೆಯಲ್ಲಿ ಜಿಲ್ಲೆ, ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ತಂಡೋಪತಂಡವಾಗಿ ಜ್ಞಾನ ಯೋಗಾಶ್ರಮಕ್ಕೆ ಆಗಮಿಸಿದ್ದರು. ಗಾಬರಿಗೊಂಡ ಭಕ್ತರು ಶ್ರೀಗಳ ದರ್ಶನಕ್ಕಾಗಿ ಕಾಯ್ದು ಕುಳಿತಿದ್ದರು. ಇವರ ಜತೆ ವಿವಿಧ ಮಠಗಳ ಮಠಾಧೀಶರು ಸಹ ಶ್ರೀಗಳ ಆರೋಗ್ಯ ವಿಚಾರಿಸಲು ಆಗಮಿಸಿ ಶ್ರೀಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿ ಕುಶಲೋಪಾರಿ ವಿಚಾರಿಸಿದರು.
ಕಳೆದ 10ದಿನಗಳಿಂದ ಶ್ರೀಗಳ ಆರೋಗ್ಯ ಕುರಿತು ಹಲವು ವದಂತಿಗಳು ಸಾಮಾಜಿಕ ತಾಣ, ಸಾರ್ವಜನಿಕರಲ್ಲಿ ಹರಿದಾಡುತ್ತಿತ್ತು. ಇಂದು ಶ್ರೀಗಳು ತಮ್ಮ ಮೊದಲು ಕೋಣೆಯಿಂದ ಸುಮಾರು 1 ಗಂಟೆ ಸುಮಾರಿಗೆ ಬಂದು ಭಕ್ತರಿಗೆ ದರ್ಶನ ನೀಡಿ ಕೆಲ ಹೊತ್ತು ಅಲ್ಲಿಯೇ ಕುಳಿತರು. ಶ್ರೀಗಳನ್ನು ನೋಡಿದ ಭಕ್ತರ ಸಂತಸಕ್ಕೆ ಪಾರವೇ ಇರಲಿಲ್ಲ. ಹೆಚ್ಚು ಬಿಸಿಲು ಇರುವ ಕಾರಣ ಭಕ್ತರ ಅನುಕೂಲಕ್ಕಾಗಿ ಟೆಂಟ್ ಹಾಕಲಾಗಿತ್ತು. ಸುಮಾರು 20ನಿಮಿಷಕ್ಕೂ ಹೆಚ್ಚು ಕಾಲ ಭಕ್ತರ ಜತೆ ಕಳೆದ ಶ್ರೀಗಳು ನಂತರ ಮತ್ತೆ ವಿಶ್ರಾಂತಿಯಾಗಿ ಕೋಣೆಗೆ ತೆರಳಿದರು.
Vijayapura: ಗಂಭೀರ ಆರೋಗ್ಯ ಸಮಸ್ಯೆಯಿಲ್ಲ, ಆಪ್ತರೊಂದಿಗೆ ಜ್ಞಾನ ಯೋಗಾಶ್ರಮ ಸಿದ್ದೇಶ್ವರ ಸ್ವಾಮೀಜಿ ಮಾತು
ಶಿಕ್ಷಣ ಸಚಿವ ನಾಗೇಶ್ ಭೇಟಿ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅನಾರೋಗ್ಯ ಹಿನ್ನೆಲೆಯಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಲು ಜ್ಞಾನ ಯೋಗಾಶ್ರಮಕ್ಕೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಭೇಟಿ ದರ್ಶನ ಪಡೆದರು. ವಿಜಯಪುರ ನಗರದಲ್ಲಿರುವ ಜ್ಞಾನ ಯೋಗಾಶ್ರಮ ಆವರಣದಲ್ಲಿ ಭಕ್ತರಿಗೆ ದರ್ಶನ ನೀಡಿದ ಬಳಿಕ ವಿಶ್ರಾಂತಿಗೆ ತೆರಳಿದ್ದ ಶ್ರೀಗಳನ್ನ ಆಶ್ರಮದ ಮೊದಲ ಮಹಡಿಯ ಲ್ಲಿರುವ ಕೊಠಡಿ ಯಲ್ಲಿ ಸಚಿವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.. ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹಾಗೂ ಇತರೆ ಮುಖಂಡರು ಶ್ರೀಗಳ ದರ್ಶನ ಪಡೆದರು.
ನೈತಿಕ ಶಿಕ್ಷಣದ ಬಗ್ಗೆ ಸ್ವಾಮೀಜಿಗಳೊಂದಿಗೆ ಚರ್ಚೆ: ಸ್ವಾಮೀಜಿಗಳ ದರ್ಶನದ ಬಳಿಕ ಮಾತನಾಡಿದ ಸಚಿವರು ನೈತಿಕ ಶಿಕ್ಷಣದ ಬಗ್ಗೆ ಸ್ವಾಮೀಜಿಗಳ ಗಮನಕ್ಕೆ ತಂದಿದ್ದೇನೆ, ನೈತಿಕ ಶಿಕ್ಷಣದ ವಿಚಾರವಾಗಿ ಮುಂಬರುವ ದಿನಗಳಲ್ಲಿ ಒಂದು ಸೆಮಿನಾರ್ ಆಯೋಜನೆ ಮಾಡಲಾಗುತ್ತದೆ. ನೈತಿಕ ಶಿಕ್ಷಣ ಕುರಿತು ಸಹಮತ ವನ್ನು ಸಹ ಸ್ವಾಮೀಜಿಯವರು ವ್ಯಕ್ತಪಡಿಸಿದ್ದಾರೆಂದ ಸಚಿವರು ಹೇಳಿದರು.
Vijayapura : 4 ವರ್ಷದ ಮೇಲ್ಸೇತುವೆ ಕಾಮಗಾರಿ ಪೂರ್ಣ: ನಿಟ್ಟುಸಿರು ಬಿಟ್ಟ ಇಬ್ರಾಹಿಂಪುರ ಜನ
ಆರೋಗ್ಯದ ಬಗ್ಗೆ ಊಹಾಪೋಹ: ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ಕುರಿತ ಊಹಾ ಪೋಹ ಸಲ್ಲದು ಸ್ವಾಮೀಜಿಯವರು ಆರೋಗ್ಯವಾಗಿದ್ದಾರೆಂದು ಶಿಕ್ಷಣ ಸಚಿವರು ಹೇಳಿದರು. ಆರೋಗ್ಯದ ಬಗ್ಗೆ ವದಂತಿ ಹರಡಿರುವದಕ್ಕೆ ಸಚಿವರು ಬೇಸರ ವ್ಯಕ್ತಪಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಎಂದಿನಂತೆ ಇತ್ತು. ಶ್ರೀಗಳ ದರ್ಶನ ಪಡೆದ ಭಕ್ತರು ನೇರವಾಗಿ ಪ್ರಸಾದ ಸ್ಥಳಕ್ಕೆ ಹೋಗಿ ಪ್ರಸಾದ ಸ್ವೀಕರಿಸಿ ಸಂತೃಪ್ತಿಯಿಂದ ಶ್ರೀಗಳ ದರ್ಶನ ಪಡೆದು ಪುಳುಕಿತರಾಗಿ ಆಶ್ರಮದಿಂದ ಹೊರನಡೆದರು.