ಬೆಂಗಳೂರು (ಜು.20): ಕೆಲದಿನಗಳ ಹಿಂದೆ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕೆಲವರ ವರ್ತನೆ ಬಗ್ಗೆ, ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ವಿಷಾದದ ಮಾತುಗಳನ್ನಾಡಿದ್ದರು.

ಅದರ ಬೆನ್ನಲ್ಲೇ, ಅವರು ಊಹಿಸಿದಂತೆಯೇ ಕೆಲ ಬೆಳವಣಿಗೆಗಳು ನಡೆದಿವೆ. ಸೋಶಿಯಲ್ ಮೀಡಿಯಾದಲ್ಲಿ ಮೇಯರ್ ವಿರುದ್ಧ ಅಪಪ್ರಚಾರ ನಡೆದಿದೆ. ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಕೆಲ ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ.  

ಈ ಹಿನ್ನೆಲೆಯಲ್ಲಿ ಸೈಬರ್ ಕಿಡಿಗೇಡಿಗಳಿಗೆ ಮೇಯರ್, ಹಿಗ್ಗಾಮುಗ್ಗಾವಾಗಿ ತರಾಟೆಗೆ ತೆಗೆದುಕೊಂಡಿದ್ದಾರಲ್ಲದೇ ಕಾನೂನಿನ ಎಚ್ಚರಿಕೆಯನ್ನೂ ನೀಡಿದ್ದರು.


ಇದಾದ ಬಳಿಕವೂ, ತಮ್ಮ ನರಿ ಬುದ್ಧಿ ಮುಂದುವರಿಸಿದ ಕಿಡಿಗೇಡಿಗಳ ವಿರುದ್ಧ ಮೇಯರ್ ಇದೀಗ ಕಾನೂನು ಕ್ರಮವನ್ನು ತೆಗೆದುಕೊಂಡಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್ ಕಮಿಷನರ್ ಭೇಟಿಯಾಗಿ ಮಣಿಕಂಠ ಭಾರದ್ವಾಜ್ ಎಂಬ ವ್ಯಕ್ತಿ, ಮೋದಿ ಭಕ್ತ  ಫೇಸ್ಬುಕ್ ಪೇಜ್ ಅಡ್ಮಿನ್ ಮತ್ತಿತರ ವಿರುದ್ಧ  ದೂರು ನೀಡಿದ್ದಾರೆ.