ಶಿರಾ (ಅ.06): ಉಪಚುನಾವಣೆಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಬರುತ್ತಾರೆ. ಅವರು ಹಣಕ್ಕೆ ಯೋಚಿಸುವುದಿಲ್ಲ. ನಿಮ್ಮ ಹಣವನ್ನೇ ಲೂಟಿ ಮಾಡಿ ತಂದು ಹಂಚುತ್ತಾರೆ. ಸುಮಾರು 30 ರಿಂದ 50 ಕೋಟಿ ರು. ಖರ್ಚು ಮಾಡಲು ತಯಾರಿದ್ದಾರೆ. ನಿಮ್ಮ ದುಡ್ಡು ಲೂಟಿ ಹೊಡೆದು ನಿಮಗೆ ಕೊಡಲು ಬರುತ್ತಿದ್ದಾರೆ. ಅದಕ್ಕೆ ನೀವು ಮರುಳಾಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸೋಮವಾರ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಕಾರ್ಯಕರ್ತರು ದುಡ್ಡು ಹಿಡಿದುಕೊಂಡು ಬರುವ ದುಡ್ಡಿಗೆ, ಆ ಹಣದ ಆಮಿಷಕ್ಕೆ ಬಲಿಯಾಗಬೇಡಿ ಎಂದು ಮನವಿ ಮಾಡಿದರು.

ರಾಜಕಾರಣ ಬಿಟ್ಟು ದೊಡ್ಡದೊಂದು ಹಕ್ಕೊತ್ತಾಯ ಮಾಡಿದ HDK

ಉಪಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿ ಯಾರು ಎಂಬುದರ ಕುರಿತು ನಾಳೆ ಅಥವಾ ನಾಡಿದ್ದು ಅಂತಿಮ ತೀರ್ಮಾನಕ್ಕೆ ಬರಲಾಗುವುದು. ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದ್ದು ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ. ಬುಧವಾರದೊಳಗೆ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.