ಗದಗ: ಪರಿವರ್ತನೆ ತರುವ ಚಿಂತನೆಯಿಂದ ಜನ್ಮತಳೆದ ಆರ್‌ಎಸ್‌ಎಸ್‌, ಕುಲಕರ್ಣಿ

ಅಧಿಕಾರದ ಮೋಹಕ್ಕಾಗಿ ದೇಶವನ್ನೇ ತುಂಡು ಮಾಡಿದ ಉದಾಹರಣೆ ನಮ್ಮ ಕಣ್ಣೆದುರಿಗಿದೆ. ಹೀಗಾಗಿ ಡಾ. ಹೆಡಗೇವಾರ ಈ ಎಲ್ಲ ಕಾರಣಗಳನ್ನು ಅಧ್ಯಯನ ಮಾಡಿ ವ್ಯಕ್ತಿಗಳಲ್ಲಿ ಪರಿವರ್ತನೆ ತರಬೇಕೆನ್ನುವ ಚಿಂತನೆಯನ್ನು ಇಟ್ಟುಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಾರಂಭಿಸಲಾಯಿತು ಎಂದ ಗುರುರಾಜ ಕುಲಕರ್ಣಿ

RSS Born From the Thought of Bringing Change Says Gururaj Kulkarni grg

ಮುಂಡರಗಿ(ಡಿ.26): ಪರಿವರ್ತನೆ ತರಬೇಕೆನ್ನುವ ಚಿಂತನೆಯನ್ನು ಇಟ್ಟುಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಾರಂಭಿಸಲಾಗಿದೆ ಎಂದು ಆರ್‌ಎ​ಸ್‌​ಎ​ಸ್‌ ಧಾರವಾಡ ವಿಭಾಗ ಬೌದ್ಧಿಕದ ಪ್ರಮುಖ ಗುರುರಾಜ ಕುಲಕರ್ಣಿ ಹೇಳಿದರು. ಪಟ್ಟಣದ ಕೆ.ಆರ್‌. ಬೆಲ್ಲದ ಕಾಲೇಜು ಆವರಣದಲ್ಲಿ ಶನಿ​ವಾ​ರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಶ್ರಯದಲ್ಲಿ ಜರುಗಿದ ಪಥ ಸಂಚಲನ ಕಾರ್ಯಕ್ರಮದ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಇದು ಜಾತಿ, ಮತ, ಪಂಥ, ಪಂಗಡಗಳ ಸಮೀಕರಣ ಅಲ್ಲ. ಅದರ ಅಪಮೌಲ್ಯ ಅವತ್ತು ಆಗಿತ್ತು, ಇವತ್ತು ಆಗುತ್ತಿದೆ.

ಅಧಿಕಾರದ ಲಾಲಸೆಯ ಸ್ವಾರ್ಥ, ಕ್ಷುಲ್ಲಕ ರಾಜಕಾರಣಕ್ಕಾಗಿ ಸಮಾಜವನ್ನು ತುಂಡರಿಸುವಂತಹ, ಅಣು ಅಣುವಾಗಿ ಭಿನ್ನ ಭಿನ್ನ ಮಾಡುವಂತಹ ಹೀನ ಕೃತ್ಯ ಕಣ್ಣೆದುರಿಗೆ ನಡೆದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ಎನ್ನುವಷ್ಟು ರಾಜಾರೋಷವಾಗಿ ಇವತ್ತಿನ ದಿವಸ ಅಧಿಕಾರವನ್ನು ಹಿಡಿಯಲೇಬೇಕೆನ್ನುವ ರಾಜಕಾರಣ ಇಂದು ನಮ್ಮ ದೇಶದ ಆತ್ಮವನ್ನು ದುರ್ಬಲಗೊಳಿಸುತ್ತಿದೆ. ಅಧಿಕಾರದ ಮೋಹಕ್ಕಾಗಿ ದೇಶವನ್ನೇ ತುಂಡು ಮಾಡಿದ ಉದಾಹರಣೆ ನಮ್ಮ ಕಣ್ಣೆದುರಿಗಿದೆ. ಹೀಗಾಗಿ ಡಾ. ಹೆಡಗೇವಾರ ಈ ಎಲ್ಲ ಕಾರಣಗಳನ್ನು ಅಧ್ಯಯನ ಮಾಡಿ ವ್ಯಕ್ತಿಗಳಲ್ಲಿ ಪರಿವರ್ತನೆ ತರಬೇಕೆನ್ನುವ ಚಿಂತನೆಯನ್ನು ಇಟ್ಟುಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಾರಂಭಿಸಲಾಯಿತು ಎಂದರು.
ಕದಾಂಪೂರದ ಪ್ರಗತಿಪರ ರೈತ ಬಸವಂತಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಯುವಕರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾದರಿಯಾಗಿದ್ದು, ಅದರ ಕಾರ್ಯಚಟುವಟಿಕೆಗಳಲ್ಲಿ ತೊಡಗುವುದರಿಂದ ಹೆಚ್ಚು ಕ್ರಿಯಾಶೀಲರು ಹಾಗೂ ದೇಶ ಪ್ರೇಮಿಗಳಾಗುತ್ತಾರೆ ಎಂದರು.

MANN KI BAAT: ಗದಗ ಹೋಟೆಲ್ ಉದ್ಯಮಿಯ ಕಲಾಸೇವೆಗೆ ಮನ್ ಕೀ ಬಾತ್ ನಲ್ಲಿ ಮೋದಿ ಮೆಚ್ಚುಗೆ

ಈ ವೇಳೆ ಜಿಲ್ಲಾ ಕಾರ್ಯವಾಹ ಮಂಜುನಾಥ ಇಟಗಿ, ತಾಲೂಕು ಕಾರ್ಯವಾಹ ಶ್ರೀನಿವಾಸ ಕಟ್ಟಿಮನಿ, ಚಂದ್ರಶೇಖರ ಹಿರೇಮಠ, ಪ್ರವೀಣ ಅರ್ಕಸಾಲಿ, ಯಲ್ಲಪ್ಪ ಅಕ್ಕಸಾಲಿ, ಅನಂತ ಚಿತ್ರಗಾರ, ಕರಬಸಪ್ಪ ಹಂಚಿನಾಳ, ಹೇಮಗೀರೀಶ ಹಾವಿನಾಳ, ನಾಗೇಶ ಹುಬ್ಬಳ್ಳಿ, ಡಾ. ಪ್ರಕಾಶ ಹೊಸಮನಿ, ಭೀಮಸಿಂಗ್‌ ರಾಠೋಡ, ಗುರುನಾಥ ದಾನಪ್ಪನವರ, ಮಂಜುನಾಥ ಅಳವಂಡಿ, ರವೀಂದ್ರಗೌಡ ಪಾಟೀಲ, ಪ್ರಶಾಂತ ಗುಡದಪ್ಪನವರ, ದೇವಪ್ಪ ಇಟಗಿ, ಮಂಜುನಾಥ ರಾಮೇನಹಳ್ಳಿ,ಯಲ್ಲಪ್ಪ ಗಣಚಾರಿ, ಮಂಜುನಾಥ ಮುಧೋಳ, ನಾರಾಯಣ ಮಹೇಂದ್ರಕರ್‌, ಶ್ರೀಕಾಂತ ಬಡಿಗೇರ, ನಾಗರಾಜ ಪತ್ತಾರ, ಮಲ್ಲೇಶ, ಹನುಮಂತ, ಹಂಪನಗೌಡ ಗುಗ್ಗರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಹೇಶ ನಾಗರಹಳ್ಳಿ, ನಿರೂಪಿಸಿ, ವಂದಿಸಿದರು.

Latest Videos
Follow Us:
Download App:
  • android
  • ios