Hotel Gas Up by ₹993 ಬೀದರ್‌ನಲ್ಲಿ ಕಮರ್ಷಿಯಲ್ ಎಲ್‌ಪಿಜಿ ಗ್ಯಾಸ್ ಬೆಲೆ ₹993 ಏರಿಕೆಯಾಗಿದ್ದು, ಹೊಟೇಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ತಿಂಡಿ ತಿನಿಸುಗಳ ಬೆಲೆ ಹೆಚ್ಚಿಸಿದ್ದು, ಮತ್ತೊಮ್ಮೆ ಬೆಲೆ ಏರಿಕೆ ಮಾಡಿದರೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಬೀದರ್ (ಮೇ.2): ದೇಶಾದ್ಯಂತ ಕಮರ್ಷಿಯಲ್ ಎಲ್‌ಪಿಜಿ ಗ್ಯಾಸ್ ಬೆಲೆ ಏರಿಕೆ ಶುಕ್ರವಾರದಿಂದ ಜಾರಿಯಾದ ಹಿನ್ನೆಲೆ ಜಿಲ್ಲೆಯ ಹೊಟೇಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏಕಾಏಕಿ ಕಮರ್ಷಿಯಲ್ ಗ್ಯಾಸ್ ಬೆಲೆ 993 ಏರಿಕೆ ಮಾಡಿದ್ದು, ಬೆಳಂಬೆಳಗ್ಗೆ ಹೊಟೇಲ್ ಮಾಲಿಕರಿಗೆ ಶಾಕ್ ಆಗಿದೆ. ಈಗಾಗಲೇ ಬೆಳಗಿನ ಉಪಾಹಾರ ಸೇರಿದಂತೆ ಹೊಟೇಲ್ ತಿಂಡಿಯ ಬೆಲೆ 15 ರಿಂದ 20 ರು. ಏರಿಕೆ ಮಾಡಲಾಗಿದೆ. ಈಗ ಮತ್ತೆ ಬೆಲೆ ಹೆಚ್ಚಳ ಮಾಡಿದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗುವುದಂತೂ ಗ್ಯಾರಂಟಿ ಎನ್ನುತ್ತಾರೆ ಹೊಟೇಲ್‌ ಮಾಲೀಕರು.

ಇರಾನ್ - ಇಸ್ರೇಲ್ ವಾರ್ ಎಫೆಕ್ಟ್‌ನಿಂದ ಇಂಧನ ಪೂರೈಕೆ ವ್ಯತ್ಯಯದಿಂದ ಬೆಲೆ ಏರಿಕೆಯಾಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಸತತ ಕಮರ್ಷಿಯಲ್ ಗ್ಯಾಸ್ ಬೆಲೆ ಹೆಚ್ಚಳ ಆಗಿದೆ. ಮಾರ್ಚ್‌ ತಿಂಗಳಿನಲ್ಲಿ 144 ರು. ಏಪ್ರಿಲ್‌ನಲ್ಲಿ 190 ಹಾಗೂ ಈಗ 993 ರು. ಏರಿಕೆಯಾಗಿದೆ. ಹೀಗೆ ಸತತ ಗ್ಯಾಸ್ ದರ ಏರಿಕೆಯಿಂದ ಹೊಟೇಲ್ ಉದ್ಯಮಕ್ಕೆ ದೊಡ್ಡ ಹೊರೆ ಬಿದ್ದಿದ್ದು, ಹೋಟೆಲ್ ಉದ್ಯಮ ನಡೆಸೋದಕ್ಕೂ ಕಷ್ಟ ಆಗ್ತಿದೆ ಎನ್ನುತ್ತಾರೆ ಮಾಲಿಕರು.

ಗ್ಯಾಸ್ ಬೆಲೆ ಹೆಚ್ಚಳದಿಂದ ಹೋಟೆಲ್ ಮುಚ್ಚಿದರೂ ಬಾಡಿಗೆ ಕಟ್ಟಬೇಕು. ಕಾರ್ಮಿಕರಿಗೆ ವೇತನ ನೀಡಬೇಕು. ನಾವು ಏನು ಮಾಡಬೇಕು ತಿಳಿಯುತ್ತಿಲ್ಲ. ಹೊಟೇಲ್ ಮಾಲಿಕರ ಸಂಘದ ಸಭೆ ನಡೆಸಿ ಅದರಲ್ಲಿ ತಿಂಡಿಯ ಬೆಲೆ ಹೆಚ್ಚಳ ಮಾಡಬೇಕು. ಎನ್ನುವುದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೊಟೇಲ್ ಮಾಲೀಕ ಮೂರ್ತಿ ಹೇಳಿದ್ದಾರೆ.