ಡಿಕೆ ಶಿವಕುಮಾರ್ ಸೂಚನೆ : ಶಕ್ತಿಶಾಲಿ ಎಂದೆನಿಸಿಕೊಳ್ಳುವ ಮಠಕ್ಕೆ ಹೋಗಿ ಬಂದ ಕುಸುಮಾ

ಕಾಂಗ್ರೆಸ್‌ನ ಮಾಸ್ಟರ್ ಮೈಂಡ್ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್ ಅವರ ಅಣತಿಯಂತೆ ಈ ಜಾಗಕ್ಕೆ ಹೋಗಿ ಬಂದಿದ್ದಾರೆ

RR Nagar Congress Candidate Kusuma Visits Maralegavi Mutt snr

ರಾಮ​ನ​ಗರ (ಅ.14):  ರಾಜ​ರಾ​ಜೇ​ಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಕುಟುಂಬ​ದ​ವ​ರೊಂದಿಗೆ ಕನ​ಕ​ಪುರ ತಾಲೂ​ಕಿನ ಮರ​ಳೇ​ಗವಿ ಮಠಕ್ಕೆ ಮಂಗ​ಳ​ವಾರ ಭೇಟಿ ನೀಡಿ ಡಾ.ಶ್ರೀ ಮುಮ್ಮಡಿ ಶಿವ​ರು​ದ್ರ ಸ್ವಾಮೀಜಿ ಅವ​ರಿಂದ ಆಶೀ​ರ್ವಾದ ಪಡೆ​ದರು.

ಬುಧ​ವಾರ ಉಮೇ​ದು​ವಾ​ರಿಕೆ ಸಲ್ಲಿ​ಸ​ಲಿ​ರುವ ಹಿನ್ನೆ​ಲೆ​ಯಲ್ಲಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವರ ಅಣ​ತಿ​ಯಂತೆ ಕುಸುಮಾರವರು ಮರ​ಳೇ​ಗವಿ ಮಠಕ್ಕೆ ಭೇಟಿ ನೀಡಿದರು. ಮರ​ಳೇ​ಗವಿ ಮಠ ಅತ್ಯಂತ ಶಕ್ತಿ ಶಾಲಿ ಮಠ. ಶ್ರೀಗಳ ಆಶೀ​ರ್ವ​ಚನ ನನ್ನಲ್ಲಿ ಆತ್ಮ​ವಿ​ಶ್ವಾಸ ಹೆಚ್ಚಿ​ಸಿದೆ ಎಂದು ಕುಸುಮಾ ಪ್ರತಿ​ಕ್ರಿಯೆ ನೀಡಿ​ದರು. ಕುಸುಮಾ ಅವ​ರೊಂದಿಗೆ ತಂದೆ ಹನು​ಮಂತ​ರಾ​ಯಪ್ಪ ಹಾಗೂ​ಕು​ಟುಂಬ​ದ​ವರು ಹಾಜ​ರಿ​ದ್ದರು.

ಡಿ.ಕೆ ರವಿ ತಾಯಿ ಹೇಳಿಕೆಗೆ ಕುಸುಮಾ ಮೊದಲ ರಿಯಾಕ್ಷನ್ .

ಪ್ರತಿ ಚುನಾ​ವ​ಣೆ​ಯಲ್ಲಿ ಡಿಕೆ ಸಹೋ​ದ​ರರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀ​ರ್ವಾದ ಪಡೆ​ಯು​ವುದು ವಾಡಿಕೆ. ಅಲ್ಲದೇ ಬೆಂಗ​ಳೂ​ರಿನ ಸೆರ​ಗಿ​ನ​ಲ್ಲಿ​ರುವ ಮರ​ಳೇ​ಗವಿ ಮಠ ಬೆಂಗ​ಳೂ​ರಿ​ನಲ್ಲಿ ನೆಲೆ​ಸಿ​ರುವ ಲಿಂಗಾ​ಯತ ಸಮು​ದಾ​ಯ​ದಲ್ಲಿ ತನ್ನ ಪ್ರಭಾವ ಹೊಂದಿದೆ ಎನ್ನ​ಲಾ​ಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಮಠ​ಕ್ಕೆ ಭೇಟಿ ನೀಡುವ ಮೂ​ಲಕ ಚುನಾ​ವ​ಣೆಯ ಗೆಲು​ವಿಗೆ ಗುರು​ಗಳ ಆಶೀ​ರ್ವಾದ ಪಡೆ​ದಿ​ದ್ದಾ​ರೆ.

Latest Videos
Follow Us:
Download App:
  • android
  • ios