Asianet Suvarna News Asianet Suvarna News

Tumakuru: ಸ್ಮಶಾನಕ್ಕೆ ಆಗ್ರಹಿಸಿ ರಸ್ತೆಯಲ್ಲೇ ಶವವಿಟ್ಟು ಪ್ರತಿಭಟಿಸಿದ ರೊಪ್ಪ ಗ್ರಾಮಸ್ಥರು

  • ಸ್ಮಶಾನಕ್ಕೆ ಆಗ್ರಹ : ರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ
  • ಗ್ರಾಮಸ್ಥರ ಮನವೊಲಿಕೆಗೆ ಅಧಿಕಾರಿಗಳ ಕಸರತ್ತು
  • ಅಧಿಕಾರಿಗಳ‌ ತಂಡದೊಂದಿಗೆ ಸ್ಮಶಾನ ಜಾಗ ಹುಡುಕುತ್ತಿರುವ ಶಾಸಕ ವೆಂಕಟರಮಣಪ್ಪ
Roppa villagers protested by burying dead body on the road, demanding a graveyard at tumakuru rav
Author
First Published Jan 30, 2023, 12:07 PM IST

ವರದಿ : ಮಹಂತೇಶ್ ಕುಮಾರ್,  ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು

ತುಮಕೂರು (ಜ.30) :  ಮೃತ ವ್ಯಕ್ತಿಯ ಅಂತ್ಯಕ್ರಿಯೆಗೆ ಸ್ಮಶಾನವಿಲ್ಲದಿರುವುದರಿಂದ ಬೇಸತ್ತ ಗ್ರಾಮಸ್ಥರು ಶವವನ್ನ ರಸ್ತೆಯಲ್ಲಿಟ್ಟು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ತುಮಕೂರು(Tumakuru) ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮ(Roppa village)ದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಭಾನುವಾರ ಗ್ರಾಮದ ರಂಗಪ್ಪ(54) ಎಂಬುವವರು ನಿಧರಾಗಿದ್ದರು. ಅವರ ಅಂತ್ಯಕ್ರಿಯೆ ನಡೆಸಲು ಗ್ರಾಮದಲ್ಲಿ ಸ್ಮಶಾನವಾಗಲಿ, ರಂಗಪ್ಪ ಅವರ ಸ್ವಂತ ಸ್ಥಳವಾಗಲಿ ಇಲ್ಲದೆ ಕುಟುಂಬಸ್ಥರು ಪರದಾಡುತ್ತಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಸ್ಮಶಾನಕ್ಕೆ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿ ಮೃತ ರಂಗಪ್ಪ ಅವರ ಶವವನ್ನ ರಸ್ತೆಯಲ್ಲಿಟ್ಟು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಜಮೀನು ವಿವಾದ ಇತ್ಯರ್ಥಕ್ಕಾಗಿ ಸ್ಮಶಾನದ ದಾರಿ ಮುಚ್ಚಿದ ಕುಟುಂಬ

ಹಿಂದೂ-ಮುಸಲ್ಮಾನ ಸಮುದಾಯದ ನೂರಾರು ಮನೆಗಳಿರುವ ಈ ಗ್ರಾಮದಲ್ಲಿ ಯಾರಾದ್ರೂ ಮೃತಪಟ್ಟರೆ ಅಂತ್ಯಕ್ರಿಯೆ ನಡೆಸಲು ಸೂಕ್ತ ಸ್ಥಳ ಇಲ್ಲದೆ ಪ್ರತಿ ಭಾರಿಯೂ ಇದೇರೀತಿ  ಗ್ರಾಮಸ್ಥರು ಪರದಾಡುತ್ತಿದ್ದಾರೆ. ಪದೇಪದೆ ಈ ಸಮಸ್ಯೆಯಿಂದ ಬೇಸತ್ತಿರುವ ಗ್ರಾಮಸ್ಥರು. ಹಲವು ಬಾರಿ  ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದ್ದಾರೆ. ಆದರೆ  ಪಂಚಾಯಿತಿ ಅಧಿಕಾರಿಗಳು ಇದುವರೆಗೆ ಯಾವುದೇ ರೀತಿ ಸ್ಪಂದಿಸಿಲ್ಲ. ಹೀಗಾಗಿ ಗ್ರಾಮಸ್ಥರು ಬೇಸತ್ತು ಈ ಬಾರಿ ಮೃತವ್ಯಕ್ತಿಯನ್ನು ರಸ್ತೆಯ ಮೇಲೆ ಇಟ್ಟು ಪ್ರತಿಭಟನೆಗಿಳಿದಿದ್ದಾರೆ. ಗ್ರಾಮಕ್ಕೆ ಸ್ಮಶಾನ ಭೂಮಿ ನೀಡುವವರೆಗೆ ಧರಣಿ ನಿಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಿನ್ನೆಯಿಂದ ಶುರುವಾದ ಪ್ರತಿಭಟನೆ ಇಂದು ಕೂಡ ಮುಂದುವರಿದಿದೆ. ಶಾಸಕ ವೆಂಕಟರಮಣಪ್ಪ ಹಾಗೂ ತಹಶೀಲ್ದಾರ್ ವರದರಾಜು ಸೇರಿದಂತೆ  ಕಂದಾಯ ಇಲಾಖೆ ಅಧಿಕಾರಿಗಳ ತಂಡ ಸ್ಮಾಶನಕ್ಕೆ ಜಾಗ ಹುಡುಕುವಲ್ಲಿ ನಿರತರಾಗಿದ್ದಾರೆ.‌ ರೊಪ್ಪ  ಗ್ರಾಮದ ಪಕ್ಕದ ಗ್ರಾಮ ಟಿ.ಎನ್ ಪೇಟೆಯಲ್ಲಿ ಸ್ಮಾಶನಕ್ಕೆ ಜಾಗ ಹುಡುಕಲಾಗಿದೆ. ಆದರೆ‌ ಟಿ.ಎನ್ ಪೇಟೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.  ಹೀಗಾಗಿ ರೊಪ್ಪದಲ್ಲೇ ಸ್ಮಾಶನಕ್ಕೆ ಜಾಗ ಹುಡುಕಾಟ ನಡೆಸಿದ್ದಾರೆ ಅಧಿಕಾರಿಗಳು. 

ಶವ ಸಂಸ್ಕಾರಕ್ಕೆ ಮದೂರಿಗೆ ಬಂದಿದೆ ಸಂಚಾರಿ ಸ್ಮಶಾನ!

Follow Us:
Download App:
  • android
  • ios