Asianet Suvarna News Asianet Suvarna News

Udupi : ಶವ ಸಂಸ್ಕಾರಕ್ಕೆ ಮದೂರಿಗೆ ಬಂದಿದೆ ಸಂಚಾರಿ ಸ್ಮಶಾನ!

ಈ ಊರಲ್ಲಿ ಸುಸಜ್ಜಿತ ಸ್ಮಶಾನವಿಲ್ಲ. ಜಾಗದ ಕೊರತೆಯಿಂದಾಗಿ ಶವಸಂಸ್ಕಾರ ನಡೆಸಲು ದೂರದ ಕುಂದಾಪುರಕ್ಕೆ ತೆರಳಬೇಕಾದ ಅನಿವಾರ್ಯತೆ. ಇಲ್ಲಿನ ನಿವಾಸಿಗಳ ಸಂಕಷ್ಟಮನಗಂಡು ಈ ಭಾಗದ ಸಹಕಾರ ಸಂಸ್ಥೆಯೊಂದು ದಶಕಗಳ ಬೇಡಿಕೆಗೆ ಸ್ಪಂದಿಸಿದೆ. ಕೇರಳ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಆಧುನಿಕ ಮಾದರಿಯ ಶವಸಂಸ್ಕಾರ ಯಂತ್ರವನ್ನು ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಇಲ್ಲಿನ ಗ್ರಾಮಸ್ಥರಿಗೆ ನೀಡಿದೆ.

A mobile cemetery has come for funerals where there is no cemetery udupi rav
Author
First Published Jan 18, 2023, 9:43 AM IST

ಕುಂದಾ​ಪು​ರ (ಜ.18) : ಈ ಊರಲ್ಲಿ ಸುಸಜ್ಜಿತ ಸ್ಮಶಾನವಿಲ್ಲ. ಜಾಗದ ಕೊರತೆಯಿಂದಾಗಿ ಶವಸಂಸ್ಕಾರ ನಡೆಸಲು ದೂರದ ಕುಂದಾಪುರಕ್ಕೆ ತೆರಳಬೇಕಾದ ಅನಿವಾರ್ಯತೆ. ಇಲ್ಲಿನ ನಿವಾಸಿಗಳ ಸಂಕಷ್ಟಮನಗಂಡು ಈ ಭಾಗದ ಸಹಕಾರ ಸಂಸ್ಥೆಯೊಂದು ದಶಕಗಳ ಬೇಡಿಕೆಗೆ ಸ್ಪಂದಿಸಿದೆ. ಕೇರಳ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಆಧುನಿಕ ಮಾದರಿಯ ಶವಸಂಸ್ಕಾರ ಯಂತ್ರವನ್ನು ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಇಲ್ಲಿನ ಗ್ರಾಮಸ್ಥರಿಗೆ ನೀಡಿದೆ.

ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಜಡ್ಕಲ್‌ ಗ್ರಾಪಂ ವ್ಯಾಪ್ತಿಯಲ್ಲಿ ಸ್ಮಶಾನ ಇಲ್ಲದ ಹಿನ್ನೆಲೆಯಲ್ಲಿ ಜಡ್ಕಲ್‌ ಹಾಗೂ ಮುದೂರು ಭಾಗದಲ್ಲಿ ಸಾವು ಸಂಭವಿಸಿದರೆ ಅಂತ್ಯಕ್ರಿಯೆ ನಡೆಸುವುದೇ ಸಮಸ್ಯೆ. ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಮುದೂರು ಉದಯನಗರದ 50 ವರ್ಷ ಪ್ರಾಯದ ವ್ಯಕ್ತಿಯ ಶವಸಂಸ್ಕಾರ ಮನೆಯಂಗಳದಲ್ಲೇ ನಡೆಸಿದ್ದು, ಚಿಕ್ಕಮಕ್ಕಳಿದ್ದ ಮನೆಯಲ್ಲಿ ಅಂಗಳದಲ್ಲೇ ಶವ ಸುಡುವ ಪರಿಸ್ಥಿತಿ ಎದು​ರಾ​ಗಿತ್ತು. ಈ ಸಮಸ್ಯೆಗೆ ಮುಕ್ತಿ ನೀಡಲು ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ವ್ಯವಸ್ಥೆ ಕಲ್ಪಿಸಿದೆ. ‘ಮೊಬೈಲ್‌ ಕ್ರಿಮೆಟೋರಿಯಮ…’ ಅಥವಾ ’ಸಂಚಾರಿ ಸ್ಮಶಾನ’ ಎಂಬ ಶವ ದಹನ ಯಂತ್ರ ಲೋಕಾರ್ಪಣೆಗೊಳಿಸಿದೆ.

28000 ಗ್ರಾಮಗಳಿಗೆ ಸ್ಮಶಾನ ಜಾಗ; ಇನ್ನೂ 319 ಊರಿಗೆ ಬಾಕಿ: ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

ಏನಿದು ದಹನ ಯಂತ್ರ?: ಅಂದಾಜು 7 ಅಡಿ ಉದ್ದ, 2 ಅಡಿ ಅಗಲ, 4 ಅಡಿ ಎತ್ತರದ ಈ ಶವದಹನ ಯಂತ್ರವು ಗ್ಯಾಸ್‌ ಮತ್ತು ವಿದ್ಯುತ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಒಂದೊಮ್ಮೆ ವಿದ್ಯುತ್‌ ಇಲ್ಲದಿದ್ದರೆ ಕೇವಲ ಗ್ಯಾಸ್‌ ಮೂಲಕವೇ ಶವ ದಹಿಸಲು ಸಾಧ್ಯ. ಯಂತ್ರದ ಒಳಭಾಗದಲ್ಲಿನ ಚೇಂಬರ್‌ ಮೇಲೆ ಶವ ಇಟ್ಟು ಕರ್ಪೂರ ಹಚ್ಚಿ ಮೇಲ್ಭಾಗ ಮುಚ್ಚಿ ಗ್ಯಾಸ್‌ ಸಂಪರ್ಕ ನೀಡಿದರೆ ಕೆಲವೇ ಕ್ಷಣಗಳಲ್ಲಿ ದಹನ ಪ್ರಕ್ರಿಯೆ ಮುಗಿಯುತ್ತದೆ. ಗ್ಯಾಸ್‌ ಮೂಲಕವೇ ದಹನ ಪ್ರಕ್ರಿಯೆ ನಡೆಯುವ ಕಾರಣ ವಾಯುಮಾಲಿನ್ಯ ರಹಿತವಾಗಿ, ಪರಿಸರ ಸ್ನೇಹಿಯಾಗಿ ಈ ಯಂತ್ರ ಕಾರ್ಯಾಚರಿಸುತ್ತದೆ. ಒಂದು ಶವ ಸಂಸ್ಕಾರಕ್ಕೆ 10 ಕಿಲೋ ಗ್ಯಾಸ್‌, 100 ಗ್ರಾಂ ಕರ್ಪೂರ ಬೇಕಾಗಲಿದೆ. ಈ ಯಂತ್ರಕ್ಕೆ 5.80 ಲಕ್ಷ ರು. ವೆಚ್ಚವಾಗಿದ್ದು, ಕೇರಳ ಮೂಲದ ಸ್ಟಾರ್‌ಚೇಸ್‌ ಕಂಪ​ನಿ ಈ ಯಂತ್ರ ನಿರ್ಮಿಸುತ್ತಿದೆ. 90 ದಿನದಲ್ಲಿ ಸ್ಮಶಾನವಾಗುತ್ತಾ ಚೀನಾ? ಕರ್ಮ ಬಿಡೋಲ್ಲ ಬಿಡಿ!

Follow Us:
Download App:
  • android
  • ios