ಕಳೆದ 29 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರೋಹನ್‌ ಕಾರ್ಪೊರೇಶನ್‌ ಇದೀಗ ಮಂಗಳೂರಿನ ಬಿಜೈ ಮುಖ್ಯ ರಸ್ತೆಯಲ್ಲಿ ಅತ್ಯಾಧುನಿಕ ಸೌಕರ್ಯಗಳ ರೋಹನ್‌ ಸಿಟಿ’ ಸಮುಚ್ಛಯವನ್ನು ಅಭಿವೃದ್ಧಿಪಡಿಸುತ್ತಿದೆ. ಇದೀಗ ಬುಕ್ಕಿಂಗ್‌ಗೆ ವಿದ್ಯುಕ್ತ ಚಾಲನೆ ನೀಡಲಾಗಿದೆ.

ಮಂಗಳೂರು (ಜ.11) : ಕಳೆದ 29 ವರ್ಷಗಳಿಂದ ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ರೋಹನ್‌ ಕಾರ್ಪೊರೇಶನ್‌ ಇದೀಗ ಮಂಗಳೂರಿನ ಬಿಜೈ ಮುಖ್ಯ ರಸ್ತೆಯಲ್ಲಿ ಅತ್ಯಾಧುನಿಕ ಸೌಕರ್ಯಗಳ ರೋಹನ್‌ ಸಿಟಿ’ ಸಮುಚ್ಛಯವನ್ನು ಅಭಿವೃದ್ಧಿಪಡಿಸುತ್ತಿದೆ. ಸಹಕಾರ ರತ್ನ’ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ಈ ಸಮುಚ್ಚಯದ ಸಹ ಪ್ರವರ್ತಕರಾಗಿದ್ದಾರೆ. ಪ್ರಾಥಮಿಕ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಇದೀಗ ಬುಕ್ಕಿಂಗ್‌ಗೆ ವಿದ್ಯುಕ್ತ ಚಾಲನೆ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹನ್‌ ಕಾರ್ಪೊರೇಶನ್‌(Rohan Corporation) ಎಂಡಿ ರೋಹನ್‌ ಮೊಂತೆರೋ, 3.5 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ರೋಹನ್‌ ಸಿಟಿ(Rohan City)- ರೋಹನ್‌ ಕಾರ್ಪೊರೇಶನ್‌ ಮಹತ್ವಾಕಾಂಕ್ಷಿ ಯೋಜನೆ. ಆತ್ಯಾಧುನಿಕ ಭದ್ರತಾ ವ್ಯವಸ್ಥೆ, ನಿರಂತರ ವಿದ್ಯುತ್‌ ಮತ್ತು ನೀರು ಸರಬರಾಜು, ಯಾಂತ್ರೀಕೃತ ವಾಹನ ನಿಲುಗಡೆ, ಹಸಿರುವನ ಮತ್ತು ವಾಯು ವಿಹಾರಕ್ಕೆ ಕಾಲುದಾರಿಯನ್ನು ಹೊಂದಿದೆ. ವಸತಿಗಾಗಿ 6 ಲಕ್ಷ ಚದರ ಅಡಿ, ವಾಣಿಜ್ಯ ಮಳಿಗೆಗಳಿಗಾಗಿ 2 ಲಕ್ಷ ಚದರ ಅಡಿಯನ್ನು ಕಾಯ್ದಿರಿಸಲಾಗಿದೆ. ವಿವಿಧ ವಿಸ್ತೀರ್ಣ ಮತ್ತು ವಿನ್ಯಾಸದಲ್ಲಿ ಒಟ್ಟು 546, ಸಿಂಗಲ…, ಡಬಲ್‌ ಮತ್ತು ತ್ರೀ ಬೆಡ್ರೂಂ ಫ್ಲ್ಯಾಟ್ಗಳು ಹಾಗೂ 284 ವಾಣಿಜ್ಯ ಮಳಿಗೆಗಳು ಮಾರಾಟಕ್ಕಿವೆ ಎಂದು ತಿಳಿಸಿದರು.

ಕರಾವಳಿ ಭದ್ರತೆ ಹೆಚ್ಚಿಸಲು ಇನ್ನೆರಡು ರಾಡಾರ್‌ ಸ್ಥಾಪನೆ : ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ

ಮಂಗಳೂರು ಸ್ಮಾರ್ಟ್ ಸಿಟಿ(Smart city) ಪ್ರಪ್ರಥಮ ಅಂತಾರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್‌ ರೋಹನ್‌ ಸಿಟಿಯ ಪ್ರಧಾನ ಆಕರ್ಷಣೆಯಾಗಲಿದೆ. ವಿಶಾಲ ವಿಶ್ರಾಂತಿ ಕೊಠಡಿಗಳು, ಸ್ವಾಗತ ಆವರಣ, ವಿದ್ಯಾರ್ಥಿಗಳ ಚಟುವಟಿಕೆ ಕೊಠಡಿ, ಅತ್ಯಾಧುನಿಕ ಗ್ರಂಥಾಲಯ, ಬಾರ್‌, ಕಾಫಿ ಶಾಪ್‌, ಫೈನ್‌ ಡೈನ್‌ ಫ್ಯಾಮಿಲಿ ರೆಸ್ಟೋರೆಂಚ್‌, ಜಾಗಿಂಗ್‌ ಟ್ರ್ಯಾಕ್‌, ಸೀನಿಯರ್‌ ಸಿಟಿಜನ್‌ ಪಾರ್ಕ್, ಈಜುಕೊಳ, ಸ್ನೂಕರ್‌ ಟೇಬಲ…, ಟೇಬಲ್‌ ಟೆನ್ನಿಸ್‌, ವಿಡಿಯೋ ಗೇಮ್ಸ… ವಲಯ, 3 ಡಿ ಥಿಯೇಟರ್‌, ಸುಸಜ್ಜಿತ ಜಿಮ…, ಸ್ಪಾ, ಯುನಿಸೆಕ್ಸ್‌ ಸಲೂನ್‌, ಏರೋಬಿಕ್‌ ಹಾಗೂ ಯೋಗ ಕೊಠಡಿ, ಕಾನ್ಫರೆನ್ಸ್‌ ಹಾಲ…, ಸಮುಚ್ಛಯಕ್ಕೆ ತನ್ನದೇ ಮಳೆ ನೀರು ಕೊಯ್ಲು ವ್ಯವಸ್ಥೆ, ಘನ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆ, ಸೌರಶಕ್ತಿ ವ್ಯವಸ್ಥೆ, ವಾಹನ ಚಾರ್ಜಿಂಗ್‌ ವ್ಯವಸ್ಥೆ ಮತ್ತು ಅಗ್ನಿಶಾಮಕ ವ್ಯವಸ್ಥೆ ಇರಲಿದೆ.

ಮತ್ತೆ ಸ್ಯಾಟಲೈಟ್‌ ಫೋನ್‌ ಸದ್ದು: ಕರ್ನಾಟಕ-ಕೇರಳ ಗಡಿಯಲ್ಲಿ ಸಿಗ್ನಲ್‌ ಪತ್ತೆ

ರೋಹನ್‌ ಸಿಟಿಗೆ ರೇರಾ ಹಾಗೂ ಕ್ರೆಡಾಯ್‌ ಮಾನ್ಯತೆಯಿದ್ದು, ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್‌ಗಳ ಅನುಮೋದನೆ ಇರುವುದರಿಂದ ಸಾಲ ಸೌಲಭ್ಯ ಗ್ರಾಹಕರಿಗೆ ಸುಲಭವಾಗಲಿದೆ. ಜತೆಗೆ 31 ಸಾವಿರ ರು. (ಶರತ್ತುಗಳು ಅನ್ವಯ) ಮಾಸಿಕ ಕಂತಿನಲ್ಲಿ ಫ್ಲ್ಯಾಟ್‌ ಖರೀದಿಸಲು ನಿರ್ಮಾಣ ಸಂಸ್ಥೆ ವತಿಯಿಂದ ವಿಶೇಷ ಯೋಜನೆ ರೂಪಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ರೋಹನ್‌ ಕಾರ್ಪೊರೇಶನ್‌, ಮುಖ್ಯ ರಸ್ತೆ, ಬಿಜೈ, ಮಂಗಳೂರು ಮಾರಾಟ ಕಚೇರಿಗೆ ಭೇಟಿ ನೀಡಬಹುದು ಅಥವಾ ರೋಹನ್‌ ಕಾರ್ಪೊರೇಶನ್‌ ಡಾಟ್‌ ಇನ್‌ ಅಥವಾ ದೂರವಾಣಿ ಸಂಖ್ಯೆ 98454 90100 ಸಂಪರ್ಕಿಸಬಹುದಾಗಿದೆ.\ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ಪುತ್ರ ಮೇಘರಾಜ್‌, ಪ್ರಮುಖರಾದ ಆಲ್ವಿನ್‌ ಡಿಸೋಜ, ಟೈಟಸ್‌ ನೊರೋನ್ಹ ಇದ್ದರು.