ಕರಾವಳಿ ಭದ್ರತೆ ಹೆಚ್ಚಿಸಲು ಇನ್ನೆರಡು ರಾಡಾರ್‌ ಸ್ಥಾಪನೆ : ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ

ರಾಜ್ಯದ ಕರಾವಳಿ ಪ್ರದೇಶದ ಭದ್ರತೆ ಹೆಚ್ಚಿಸುವ ಉದ್ದೇಶದಿಂದ ಕಡಲ ತಡಿಯಲ್ಲಿ ಇನ್ನೆರಡು ರಾಡಾರ್‌ ಅಳವಡಿಸಲಾಗುವುದು ಎಂದು ಎಂದು ಕೋಸ್ಟ್‌ ಗಾರ್ಡ್‌ ಕರ್ನಾಟಕ ಕಮಾಂಡರ್‌ ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ ತಿಳಿಸಿದ್ದಾರೆ.

Installation of two more radars coastal security says DIG Praveen Kumar Mishra rav

ಮಂಗಳೂರು (ಜ.8) : ರಾಜ್ಯದ ಕರಾವಳಿ ಪ್ರದೇಶದ ಭದ್ರತೆ ಹೆಚ್ಚಿಸುವ ಉದ್ದೇಶದಿಂದ ಕಡಲ ತಡಿಯಲ್ಲಿ ಇನ್ನೆರಡು ರಾಡಾರ್‌ ಅಳವಡಿಸಲಾಗುವುದು ಎಂದು ಎಂದು ಕೋಸ್ಟ್‌ ಗಾರ್ಡ್‌ ಕರ್ನಾಟಕ ಕಮಾಂಡರ್‌ ಡಿಐಜಿ ಪ್ರವೀಣ್‌ ಕುಮಾರ್‌ ಮಿಶ್ರಾ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸುರತ್ಕಲ್‌(Suratkal) ಮತ್ತು ಭಟ್ಕಳ(Bhatkal)ದಲ್ಲಿ ರಾಡಾರ್‌ ಕೇಂದ್ರ(Radar station)ಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ಉತ್ತರ ಕನ್ನಡ(Uttara Kannada)ದ ಬೇಲೆಕೇರಿ ಮತ್ತು ಉಡುಪಿಯ ಕುಂದಾಪುರ(Kundapura)ದಲ್ಲಿ ರಾಡಾರ್‌ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಬೇಲೆಕೇರಿಯಲ್ಲಿ ರಾಡಾರ್‌ ಟವರ್‌(Radar station tower) ಬಹುತೇಕ ಸಿದ್ಧಗೊಂಡಿದೆ. ಕುಂದಾಪುರದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಕಾರವಾರ: ಕರಾವಳಿ ಭದ್ರತೆಗೆ ಕೋಸ್ಟ್‌ ಗಾರ್ಡ್‌ನ ಅತ್ಯಾಧುನಿಕ ಹಡಗುಗಳ ನಿಯೋಜನೆ

ಪ್ರತಿ ರಾಡಾರ್‌ ಕೇಂದ್ರದಿಂದ 40 ನಾಟಿಕಲ್‌ ಮೈಲು ದೂರದವರೆಗೆ ಕಣ್ಗಾವಲು ಇರಿಸಲು ಸಾಧ್ಯವಾಗುತ್ತದೆ. ರಾಡಾರ್‌ನಲ್ಲಿರುವ ಕ್ಯಾಮೆರಾ 5ರಿಂದ 7 ನಾಟಿಕಲ್‌ ಮೈಲು ದೂರದವರೆಗಿನ ಸಾಮರ್ಥ್ಯ ಹೊಂದಿರುತ್ತದೆ. ಈ ನಾಲ್ಕೂ ರಾಡಾರ್‌ಗಳು ಕಾರ್ಯ ನಿರ್ವಹಣೆ ಆರಂಭಿಸಿದ ಬಳಿಕ ಸಂಪೂರ್ಣವಾಗಿ ಕರ್ನಾಟಕದ ಕಡಲ ತಡಿಯ ಸರ್ವೇಕ್ಷಣೆ ಇನ್ನಷ್ಟುಸುಲಭವಾಗಲಿದೆ. ಮುಂಬೈ ಭಯೋತ್ಪಾದನಾ ದಾಳಿಯ ನಂತರ ಕರಾವಳಿ ಕಣ್ಗಾವಲು ಹೆÜಚ್ಚಿಸಲು ರಾಡಾರ್‌ ಕೇಂದ್ರಗಳ ಸ್ಥಾಪನೆಗೆ ಮಹತ್ವ ನೀಡಲಾಗಿದೆ ಎಂದು ಡಿಐಜಿ ಮಿಶ್ರಾ ತಿಳಿಸಿದರು.

ಬೋಟ್‌ಗಳಿಗೆ ಎಐಆರ್‌ ಉಪಕರಣ: 20 ಮೀ. ಹೆಚ್ಚು ಉದ್ದವಿರುವ ಮೀನುಗಾರಿಕಾ ಬೋಟ್‌ಗಳಲ್ಲಿ ಸ್ವಯಂಚಾಲಿತ ಗುರುತಿನ ವ್ಯವಸ್ಥೆ ‘ಎಐಎಸ್‌’ ಉಪಕರಣ ಅಳವಡಿಸಲು ಮೀನುಗಾರರು ಮುಂದಾಗಬೇಕು. ಈ ಉಪಕರಣದಿಂದ ಸಮುದ್ರದಲ್ಲಿ ಎದುರಾಗುವ ಯಾವುದೇ ಸಂಕಷ್ಟದ ಸಮಯದಲ್ಲಿ ದೋಣಿಗಳನ್ನು ಗುರುತಿಸಿ ಮೀನುಗಾರರನ್ನು ತಲುಪಲು ಕೋಸ್ಟ್‌ ಗಾರ್ಡ್‌ಗೆ ಸಹಾಯವಾಗಲಿದೆ. ಮೀನುಗಾರಿಕಾ ದೋಣಿ ಎಲ್ಲಿದೆ ಎನ್ನುವ ಖಚಿತ ಮಾಹಿತಿ ಮಾತ್ರವಲ್ಲದೆ, ಅದರ ಮಾಲೀಕರು ಮತ್ತಿತರ ವಿವರಗಳು ಕೋಸ್ಟ್‌ ಗಾರ್ಡ್‌ನ ಕಂಟ್ರೋಲ್‌ ರೂಮ್‌ನಲ್ಲಿದ್ದೇ ತಿಳಿದುಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಮೀನುಗಾರಿಕಾ ಇಲಾಖೆ ಉಪನಿರ್ದೇಶಕಿ ಸುಶ್ಮಿತಾ ರಾವ್‌ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಡದೋಣಿಗಳೂ ಸೇರಿ ಒಟ್ಟು 2,553 ಮೀನುಗಾರಿಕಾ ದೋಣಿಗಳಿವೆ. ಅದರಲ್ಲಿ 1607 ಯಾಂತ್ರೀಕೃತ ದೋಣಿಗಳ ಪೈಕಿ 400ರಲ್ಲಿ ಎಐಆರ್‌ ಉಪಕರಣ ಅಳವಡಿಸಲಾಗಿದೆ. ಪರವಾನಗಿ ನವೀಕರಣ ಮಾಡುವಾಗ 20 ಮೀ.ಗಿಂತ ಹೆಚ್ಚು ಉದ್ದವಿರುವ ದೋಣಿಗಳಿಗೆ ಎಐಎಸ್‌ ಅಳವಡಿಸಲು ಸೂಚಿಸಲಾಗುತ್ತಿದೆ ಎಂದು ಹೇಳಿದರು.

ಉಡುಪಿ: ಕರಾವಳಿಯಲ್ಲಿ ಪಕ್ಷಿಗಳ ಕಲರವ- ಪಕ್ಷಿ ವೀಕ್ಷಣೆಗೆ ಇದು ಸಕಾಲ

ಕೋಸ್ಟ್‌ ಗಾರ್ಡ್‌ ಅಕಾಡೆಮಿ ಡಿಪಿಆರ್‌ ಸಿದ್ಧ

ಕೆಂಜಾರಿನಲ್ಲಿ ಉದ್ದೇಶಿತ ಇಂಡಿಯನ್‌ ಕೋಸ್ವ್‌ ಗಾರ್ಡ್‌ ಅಕಾಡೆಮಿಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಭಾರತೀಯ ಕೋಸ್ವ್‌ ಗಾರ್ಡ್‌ ಪಶ್ಚಿಮ ವಲಯದ ಕಮಾಂಡರ್‌ ಜನರಲ್‌ ಎಂವಿ ಬಾಡ್ಕರ್‌ ತಿಳಿಸಿದ್ದಾರೆ. 160 ಎಕರೆ ಜಾಗದಲ್ಲಿ ಅಕಾಡೆಮಿ ಸ್ಥಾಪನೆಯಾಗಲಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದರು.

Latest Videos
Follow Us:
Download App:
  • android
  • ios