Asianet Suvarna News Asianet Suvarna News

ಬಿಜೆಪಿ ಸರ್ಕಾರದಿಂದ ವಿಜಯಪುರ ಜಿಲ್ಲೆಯಲ್ಲಿ ರಸ್ತೆ ಕ್ರಾಂತಿ: ಸಂಸದ ರಮೇಶ ಜಿಗಜಿಣಗಿ

ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಪ್ರಗತಿಯಿಂದ ದೊಡ್ಡಮಟ್ಟದ ಅನುಕೂಲವಾಗಿದೆ. ಈ ಕಾರಣಕ್ಕಾಗಿಯೇ ಪ್ರಸ್ತುತ ಚತುಷ್ಪಥ ಮಾರ್ಗವಾಗಿರುವ ಈ ರಸ್ತೆಯನ್ನು ಷಷ್ಠ ಮಾರ್ಗ (ಸಿಕ್ಸ್ ಲೇನ್) ಮಾರ್ಪಾಡು ಮಾಡಲು ಸಹ ಮಂಜೂರಾತಿ ದೊರಕಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದ ಸಂಸದ ರಮೇಶ ಜಿಗಜಿಣಗಿ 

Road Revolution in Vijaypura district by BJP Government Says MP Ramesh Jigajinagi grg
Author
First Published Aug 26, 2023, 9:11 PM IST

ವಿಜಯಪುರ(ಆ.26): ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಷಷ್ಠ ಮಾರ್ಗವಾಗಿ (ಸಿಕ್ಸ್‌ ಲೈನ್‌) ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಅವರು ತಿಳಿಸಿದರು. ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಪ್ರಗತಿಯಿಂದ ದೊಡ್ಡಮಟ್ಟದ ಅನುಕೂಲವಾಗಿದೆ. ಈ ಕಾರಣಕ್ಕಾಗಿಯೇ ಪ್ರಸ್ತುತ ಚತುಷ್ಪಥ ಮಾರ್ಗವಾಗಿರುವ ಈ ರಸ್ತೆಯನ್ನು ಷಷ್ಠ ಮಾರ್ಗ (ಸಿಕ್ಸ್ ಲೇನ್) ಮಾರ್ಪಾಡು ಮಾಡಲು ಸಹ ಮಂಜೂರಾತಿ ದೊರಕಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಕಳೆದ 9 ವರ್ಷಗಳ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ರಸ್ತೆ ಕಾಮಗಕಾರಿಗಳ ಗಮನಾರ್ಹ ಸಾಧನೆ ಮಾಡಲಾಗಿದೆ. ಜಿಲ್ಲೆಯಲ್ಲಿ ರಸ್ತೆ ಕ್ರಾಂತಿಯನ್ನೇ ಮಾಡಲಾಗಿದೆ. 9 ವರ್ಷಗಳ ಅವಧಿಯಲ್ಲಿ 1514.71 ಕಿ.ಮೀ. ರಸ್ತೆ ನಿರ್ಮಿಸಲಾಗಿದ್ದು, ೪೦೨೫.೮೬ ಕೋಟಿ ಖರ್ಚು ಮಾಡಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಬರ ವಿಚಾರದಲ್ಲಿ ಬೊಮ್ಮಾಯಿ ರಾಜಕೀಯ ಸಲ್ಲ: ಸಚಿವ ಎಂ.ಬಿ.ಪಾಟೀಲ್‌

ಕಳೆದ 9 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಅನುದಾನ ಅಡಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆ, ರಾಜ್ಯ ಹೆದ್ದಾರಿ ಮೊದಲಾದ ಕಾಮಗಾರಿಗಳ ಪ್ರಗತಿಯ ತಾಂತ್ರಿಕ ವಿವರಣೆ, ಖರ್ಚು ಮಾಡಲಾದ ಅನುದಾನ, ಮಾರ್ಗಗಳ ಮೇಲ್ದರ್ಜೆ ಹೀಗೆ ಪ್ರಸ್ತುತ ಕಾಮಗಾರಿಯ ಹಂತದ ಬಗ್ಗೆ ಸುದೀರ್ಘವಾಗಿ ವಿವರಣೆ ನೀಡಿದರು.

ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಸುಸಜ್ಜಿತವಾಗಿ ರಸ್ತೆ ನಿರ್ಮಾಣಗೊಂಡಿರುವುದುರಿಂದ ಸೊಲ್ಲಾಪೂರ ಹಾಗೂ ಮುಂಬಯಿ ಪ್ರಯಾಣಕ್ಕೆ ಸುಗಮ ಸಂಚಾರ ಸಾಧ್ಯವಾಗಿದ್ದು, ಒಟ್ಟು ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿಯ 110 ಕಿ.ಮೀ. ಕಾಮಗಾರಿಯನ್ನು ₹1576 ಕೋಟಿ ವೆಚ್ಚವಾಗಿದೆ ಎಂದರು.

ಅದೇ ತೆರನಾಗಿ ವಿಜಯಪುರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗಾಗಿ ₹460 ಕೋಟಿ ವ್ಯಯಿಸಲಾಗಿದ್ದು, 810 ಕಿ.ಮೀ. ರಸ್ತೆ ನಿರ್ಮಿಸಲಾಗಿದೆ, ವಿಜಯಪುರ ಸೇವಾಲಾಲ ನಗರದಿಂದ (ಮಹಲ್) ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದವರೆಗೆ 80 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ₹190 ಕೋಟಿ ಖರ್ಚಾಗಲಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ 218 ಕಿ.ಮೀ. ಕೊಲಾರದವರೆಗೆ ವಿಜಯಪುರ-ಹುಬ್ಬಳ್ಳಿ ರಸ್ತೆಯನ್ನು ಪೆವಡ್ ಶೋಲ್ಡ್ ಜೊತೆಗೆ ದ್ವಿಪಥಕ್ಕೆ ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ₹291 ಕೋಟಿ ಖರ್ಚು ಮಾಡಲಾಗುವುದು ಎಂದರು.

ವಿಜಯಪುರ ಪ್ರವಾಸಿ ಮಂದಿರ ವೃತ್ತದಿಂದ ತೆಲಸಂಗ ಕ್ರಾಸ್‌ವರೆಗೆ 39 ಕಿ.ಮೀ. ರಸ್ತೆ ನಿರ್ಮಾಣಕ್ಕೆ ₹250 ಕೋಟಿ ಸಿದ್ಧಾಪೂರ-ಅರಕೇರಿ ವಿಜಯಪುರವರೆಗೆ ₹90.31 ಕೋಟಿ ವೆಚ್ಚದಲ್ಲಿ 11.627 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

₹957.09 ಕೋಟಿ ವೆಚ್ಚದಲ್ಲಿ ಮಣ್ಣೂರ, ಹಿರೇಬೇವನೂರ, ಇಂಡಿ, ರೂಗಿ, ನಾಗಠಾಣ ಅಲಿಯಬಾದ ರೈಲ್ವೇ ಮ್ಸಲೆತುವೆ ವಿಜಯಪುರ ಪಟ್ಟಣದ ವರ್ತುಲ ರಸ್ತೆ ಮಾರ್ಗವಾಗಿ ಪ್ರವಾಸಿ ಮಂದಿರವರೆಗೆ 102.31 ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಹೊಲಗಾಲುವೆ ಕಾಮಗಾರಿ ಶೀಘ್ರ ಆರಂಭ: ಸಚಿವ ಎಂ.ಬಿ.ಪಾಟೀಲ

ಪಿಎಂ ಗ್ರಾಮ ಸಡಕ್ ಅಡಿ 82 ಕಾಮಗಾರಿ

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಹಲವಾರು ಕಾಮಗಾರಿ ಪ್ರಗತಿಯಲ್ಲಿದ್ದು, ಒಟ್ಟು 82 ಕಾಮಗಾರಿಗಳನ್ನು ಈ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿದ್ದು, ₹159.17 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ, ಕಳೆದ ಒಂದು ವರ್ಷದ ಅವಧಿಯಲ್ಲಿ 91.13 ಕಿ.ಮೀ. ರಸ್ತೆ ನಿರ್ಮಿಸಲಾಗಿದ್ದು, ₹2716.56 ಲಕ್ಷ ಖರ್ಚು ಮಾಡಲಾಗಿದೆ ಎಂದು ವಿವರಿಸಿದರು.

ಕೇಂದ್ರ ರಸ್ತೆ ನಿಧಿ ಯೋಜನೆಯಡಿಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಲ್ಲಿ ಕಳೇದ 2016-17ನೇ ವರ್ಷದಿಂದ ಇಲ್ಲಿಯವರೆಗೆ 14 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು ಆ ಪೈಕಿ ೧೨ ಕಾಮಗಾರಿಗಳು ಪೂರ್ಣಗೊಂಡಿವೆ, ಒಟ್ಟು ವಿಜಯಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ₹213.70 ಕೋಟಿ ಅನುದಾನಕ್ಕೆ ತಾತ್ವಿಕ ಒಪ್ಪಿಗೆ ದೊರಕಿದೆ ಎಂದರು. ಬಿಜೆಪಿ ಮುಖಂಡರಾದ ಪಾಪುಸಿಂಗ್ ರಜಪೂತ, ಸಂಗಮೇಶ ಉಕ್ಕಲಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Follow Us:
Download App:
  • android
  • ios