ಮಂಡ್ಯ[ಆ.13]: ಲಾರಿ ಚಾಲಕನೊಬ್ಬ ಬೈಕ್ ಸವಾರರಿಬ್ಬರ ಮೇಲೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಗರದ ಹೊರವಲಯದ ವಿ.ಸಿ.ಫಾರಂ ಗೇಟ್‌ನ ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ.

ಎಚ್.ಮಲ್ಲಿಗೆರೆ ಗ್ರಾಮದ ಪ್ರವೀಣ್(22), ಹೊಳಲು ಗ್ರಾಮದ ಪ್ರಮೋದ್ (23) ಮೃತರು. ಲಾರಿ ಚಾಲಕ ಗುದ್ದಿದ ನಂತರ ಸುಮಾರು  250 ಮೀಟರ್ ವರೆಗೂ ಬೈಕ್ ಸವಾರರನ್ನು ಎಳೆದುಕೊಂಡು ಹೋಗಿದ್ದಾನೆ. ಸವಾರರಿಬ್ಬರ ದೇಹ ಛಿದ್ರ ಛಿದ್ರಗಳಾಗಿವೆ.

ಚಾಲಕನು ಕುಡಿದು ವಾಹನ ಚಲಾಯಿಸಿದ್ದೆ ಭೀಕರ ಅಪಘಾತಕ್ಕೆ ಕಾರಣವಾಗಿದೆ. ಓಡಿ ಹೋಗುತ್ತಿದ್ದ ಚಾಲಕನನ್ನು ಸ್ಥಳೀಯರೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಿಂದ ಬೆಂಗಳೂರು - ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದು, ಸ್ಥಳದಲ್ಲೇ ಮೊಕ್ಕಾ ಹೂಡಿರುವ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಸಂಚಾರ ತೆರವುಗೊಳಿಸುತ್ತಿದ್ದಾರೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.