Asianet Suvarna News Asianet Suvarna News

ರಾಯಚೂರು: ದೇಹ ಹೊಕ್ಕಿದ ಕಬ್ಬಿಣದ ರಾಡ್‌ ಹೊರತೆಗೆದ ವೈದ್ಯರು!

ದೇಹ ಹೊಕ್ಕಿದ್ದ ಕಬ್ಬಿಣದ ರಾಡ್ ಹೊರತೆಗೆದ ರಾಯಚೂರಿನ ರಿಮ್ಸ್ ಆಸ್ಪತ್ರೆಯ ವೈದ್ಯರು| ಯಾದಗಿರಿ ಜಿಲ್ಲೆಯ ಗುರಮಠಕಲ್ ಬಳಿ ಅಪಘಾತ| ವೆಂಕಟೇಶ್ವರ ರಾವ್‌ಗೆ ಪುನರ್ಜನ್ಮ ನೀಡಿದ ವೈದ್ಯರು|

RIMS Doctors Did Succesful Operation in Patient in Raichur
Author
Bengaluru, First Published Dec 16, 2019, 12:18 PM IST

ರಾಯಚೂರು(ಡಿ.16): ಎದೆಯಲ್ಲಿ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಆಂಧ್ರಪ್ರದೇಶದ ವಿಜಯವಾಡ ಮೂಲದ ಲಾರಿ ಚಾಲಕ ವೆಂಕಟೇಶ್ವರ ರಾವ್ ಎಂಬ ವ್ಯಕ್ತಿಯೇ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯಾಗಿದ್ದಾರೆ.

ಭಾನುವಾರ ರಾತ್ರಿ ಯಾದಗಿರಿ ಜಿಲ್ಲೆಯ ಗುರಮಠಕಲ್ ಬಳಿ ಅಪಘಾತವಾಗಿತ್ತು. ಈ ವೇಳೆ ವೆಂಕಟೇಶ್ವರ ರಾವ್ ಅವರ ದೇಹದೊಳಗೆ ಕಬ್ಬಿಣದ ರಾಡ್ ಹೊಕ್ಕಿತ್ತು. ಕೂಡಲೇ ವೆಂಕಟೇಶ್ವರ ರಾವ್ ಅವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾತ್ರಿ ವೇಳೆಯೇ ರಿಮ್ಸ್ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ವೆಂಕಟೇಶ್ವರ ರಾವ್ ಅವರ ದೇಶಹ ಹೊಕ್ಕಿದ್ದ ಕಬ್ಬಿಣದ ಬಳಿಕ ಸರಳನ್ನು ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಈ ಮೂಲಕ ವೆಂಕಟೇಶ್ವರ ರಾವ್ ಅವರಿಗೆ ಪುನರ್ಜನ್ಮ ನೀಡಿದ್ದಾರೆ. 

ಜನರಲ್ ಸರ್ಜನ್ ಡಾ.ರಾಥೋಡ್ ನೇತೃತ್ವದ ವೈದ್ಯರ ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಸದ್ಯ ವೆಂಕಟೇಶ್ವರ ರಾವ್ ಅವರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 

Follow Us:
Download App:
  • android
  • ios