ನೂರು ಕುಟುಂಬಗಳಿಗೆ 15-20 ದಿನದಲ್ಲಿ ಹಕ್ಕುಪತ್ರ: ಶಾಸಕ ಶಾಮನೂರು ಶಿವಶಂಕರಪ್ಪ
ವರ್ತುಲ ರಸ್ತೆ ಒತ್ತುವರಿ ಮಾಡಿಕೊಂಡಿದ್ದ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳಿಗೆ ಪಾಲಿಕೆಯಿಂದ ಪ್ರತ್ಯೇಕ ವಸತಿಗೆ ವ್ಯವಸ್ಥೆ ಕಲ್ಪಿಸಿರುವ ಸ್ಥಳಕ್ಕೆ ಶುಕ್ರವಾರ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಅಧಿಕಾರಿಗಳ ಸಮೇತ ಭೇಟಿ ನೀಡಿ, ಜನರ ಅಹವಾಲು ಆಲಿಸಿದರು.
ದಾವಣಗೆರೆ (ಡಿ.09): ವರ್ತುಲ ರಸ್ತೆ ಒತ್ತುವರಿ ಮಾಡಿಕೊಂಡಿದ್ದ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳಿಗೆ ಪಾಲಿಕೆಯಿಂದ ಪ್ರತ್ಯೇಕ ವಸತಿಗೆ ವ್ಯವಸ್ಥೆ ಕಲ್ಪಿಸಿರುವ ಸ್ಥಳಕ್ಕೆ ಶುಕ್ರವಾರ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಅಧಿಕಾರಿಗಳ ಸಮೇತ ಭೇಟಿ ನೀಡಿ, ಜನರ ಅಹವಾಲು ಆಲಿಸಿದರು. ಇಲ್ಲಿನ ವರ್ತುಲ ರಸ್ತೆಯ ಹೆಗಡೆ ನಗರದಿಂದ ಆವರಗೊಳ್ಳ ಸಮೀಪದ ದೊಡ್ಡಬಾತಿ ಸರ್ವೇ ನಂಬರ್ ವ್ಯಾಪ್ತಿಯ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯ ಎ.ಬಿ.ರಹೀಂ ಇತರರ ಸಹಿತ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೇ, ಸ್ಥಳಾಂತರಗೊಂಡ ಕುಟುಂಬಗಳಿಗೆ ಊಟ ಬಡಿಸಿದರು.
ಈ ವೇಳೆ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ರಾಮಕೃಷ್ಣ ಹೆಗಡೆ ನಗರದಲ್ಲಿ ವರ್ತುಲ ರಸ್ತೆಯ ಜಾಗದಲ್ಲಿದ್ದ ಮನೆಗಳನ್ನು ತೆರವು ಮಾಡಿಸಿ, ಅಲ್ಲಿದ್ದ ಜನರಿಗೆ ಪರ್ಯಾಯವಾಗಿ ಇಲ್ಲಿನ ಆವರಗೊಳ್ಳ ಸಮೀಪದ ಕೇಂದ್ರೀಯ ವಿದ್ಯಾಲಯ ಹಿಂಭಾಗದ ಪ್ರದೇಶದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ, ಹಕ್ಕುಪತ್ರ ನೀಡಲಾಗಿದೆ ಎಂದರು. ಹೆಗಡೆ ನಗರದಲ್ಲಿದ್ದವರು ಸೂಕ್ತ ದಾಖಲೆಗಳ ನೀಡದ್ದಕೆ ಕೆಲವರಿಗೆ ವಿಳಂಬವಾಗಿದೆ. ಸದ್ಯ 100 ಕುಟುಂಬಗಳಿಗೆ ಇನ್ನು 15-20 ದಿನಗಳಲ್ಲಿ ಹಕ್ಕುಪತ್ರ ನೀಡಲಿದ್ದೇವೆ. ಈಗಾಗಲೇ ಸರ್ಕಾರಕ್ಕೆ ಕಳಿಸಲಾಗಿದ್ದು, ಸರ್ಕಾರದಿಂದ ಬರುತ್ತಿದ್ದಂತೆಯೇ ನೂರು ಕುಟುಂಬಕ್ಕೆ ಹಕ್ಕುಪತ್ರ ನೀಡಲಿದ್ದೇವೆ. ಹೆಗಡೆ ನಗರದಲ್ಲಿ ನಿಜವಾಗಲೂ ವಾಸವಿದ್ದ ಕುಟುಂಬಗಳಿಗೆ ಹಕ್ಕುಪತ್ರ ಸಿಗಲಿದೆ ಎಂದು ತಿಳಿಸಿದರು.
ಹೆಣ್ಣು ಭ್ರೂಣಲಿಂಗ ಹತ್ಯೆ ಬೆನ್ನಲ್ಲೇ ಈ ವರ್ಷ 4500 ಗರ್ಭಪಾತ ಮಾತ್ರೆಗಳು ಪೂರೈಕೆ!
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಕಿರಣಕುಮಾರ, ಪಾಲಿಕೆ ಸದಸ್ಯ ಎ.ಬಿ.ರಹೀಂ ಸಾಬ್, ಆಯುಕ್ತೆ ರೇಣುಕಾ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೋಟೂರು ಬಸವನಗೌಡ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವಿರೇಶ್ ಕುಮಾರ, ಬೆಸ್ಕಾಂ ಅಧೀಕ್ಷಕ ಅಭಿಯಂತರ ಪಾಟೀಲ್, ಜಿ.ಎಂ.ನಾಯ್ಕ, ನಿರ್ಮಿತಿ ಕೇಂದ್ರದ ರವಿ, ಶಿವಕುಮಾರ ಸೇರಿ ಅಧಿಕಾರಿಗಳು, ಸಿಬ್ಬಂದಿ, ಸ್ಥಳಾಂತರಗೊಂಡ ಕುಟುಂಬಗಳ ಸದಸ್ಯರಿದ್ದರು.
ಸಮಸ್ಯೆಗಳಿದ್ದರೆ ಜಿಲ್ಲಾಡಳಿತ ಪರಿಹರಿಸಬೇಕು: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಭಾಗಕ್ಕೆ ಉತ್ತಮ ರಸ್ತೆ ನಿರ್ಮಿಸಲು 1 ಕೋಟಿ ರು. ವೆಚ್ಚದ ಕಾಮಗಾರಿ ಕೈಗೊಳ್ಳಲಾಗುವುದು. ಬೆಸ್ಕಾಂನಿಂದ ಸದ್ಯ ವಿದ್ಯುದೀಪದ ವ್ಯವಸ್ಥೆ ಮಾಡಲಾಗಿದೆ. ಸ್ಥಳಾಂತರಗೊಂಡ ಕುಟುಂಬಗಳು ವಾಸಿಸುತ್ತಿರುವ ಪ್ರದೇಶದಲ್ಲಿ ಯಾವುದೇ ಸಮಸ್ಯೆ, ಅಹವಾಲು ಇದ್ದರೆ, ತಕ್ಷಣವೇ ಪಾಲಿಕೆ, ಜಿಲ್ಲಾಡಳಿತದಿಂದ ಸಮಸ್ಯೆ ಪರಿಹರಿಸುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಹಿರಿಯ ಶಾಸಕ ಶಾಮನೂರು ಸೂಚಿಸಿದರು.
ನಾವ್ಯಾರೆಂದು ನಮಗೆ ಅರಿವಾದರೆ, ಬದುಕು ಸಾರ್ಥಕ: ಎಂಟಿಬಿ ನಾಗರಾಜ್
ಹೊಸ ಜಾಗದಲ್ಲಿ ಮೂಲಸೌಕರ್ಯ ವ್ಯವಸ್ಥೆ: ದಾವಣಗೆರೆ ಪಿಬಿ ರಸ್ತೆಯಿಂದ ಮಾಗಾನಹಳ್ಳಿ ರಸ್ತೆವರೆಗೆ ವರ್ತುಲ ರಸ್ತೆ ನಿರ್ಮಾಣವಾಗುವುದರಿಂದ ಜಿಲ್ಲಾ ಕೇಂದ್ರದಲ್ಲಿ ವಾಹನ ದಟ್ಟಣೆ ಕಡಿಮೆಯಾಗುವ ಜೊತೆಗೆ ಜನರ ಅಮೂಲ್ಯ ಸಮಯ ಉಳಿಯಲಿದೆ. ದೊಡ್ಡಬಾತಿ ಸರ್ವೇ ನಂಬರ್ ವ್ಯಾಪ್ತಿಗೆ ಸ್ಥಳಾಂತರವಾದ ಹೆಗಡೆ ನಗರದ ನಿವಾಸಿಗಳಿಗೆ ಹೊಸ ಜಾಗದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಶೆಡ್‌ಗಳ ವ್ಯವಸ್ಥೆ ಮಾಡಿದ್ದು, ನೀರು, ವಸತಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದೆ.