ಉಡುಪಿಗೆ ಬಂತು ಆಫ್ರಿಕಾದ ರೊಡೇಶಿಯನ್‌ ರಿಡ್ಜ್‌ ಬ್ಯಾಕ್‌

ಈ ತಳಿಯ 4 ನಾಯಿಗಳು ಸೇರಿದರೆ ಒಂದು ಸಿಂಹವನ್ನು ಕೊಲ್ಲುವ ಸಾಮರ್ಥ್ಯದ ಹೆಗ್ಗಳಿಕೆ

Rhodesian Ridgeback from Africa came to Udupi grg

ಉಡುಪಿ(ನ.03):  ಜಿಂಬಾಬ್ವೆ ದೇಶದ ರೊಡೇಶಿಯನ್‌ ರಿಡ್ಜ್‌ ಬ್ಯಾಕ್‌ ಎಂಬ ವಿಶಿಷ್ಟತಳಿಯ ನಾಯಿಯೊಂದು ಉಡುಪಿಗೆ ಬಂದಿದೆ. ಕರಾವಳಿ ಜಿಲ್ಲೆಗಳಲ್ಲಿ ಪ್ರಥಮ ಬಾರಿಗೆ ಈ ನಾಯಿಯನ್ನು ಸಾಕಲಾಗುತ್ತಿದ್ದು, ಇದರ ಬೆಲೆ ಬರೋಬ್ಬರಿ 1.10 ಲಕ್ಷ ರು. ಉಡುಪಿಯಲ್ಲಿ ಶ್ವಾನ ಸಾಕಾಣಿಕೆಯಲ್ಲಿ ಮನೆಮಾತಾಗಿರುವ ವಿಶ್ವನಾಥ್‌ ಕಾಮತ್‌ ಅವರು 42 ದಿನಗಳ ಈ ಗಂಡು ನಾಯಿಯ ಮರಿಯನ್ನು ಚೆನ್ನೈಯಿಂದ ಖರೀದಿಸಿ, ರೈಲಿನಲ್ಲಿ ಉಡುಪಿಗೆ ತಂದಿದ್ದಾರೆ. ಕರ್ನಾಟಕದ ಕೆನಲ್‌ ಕ್ಲಬ್‌ ನಲ್ಲಿ ನೋಂದಣಿ ಪಡೆದ ಈ ತಳಿಯ ಏಕೈಕ ನಾಯಿ ಇದಾಗಿದೆ.

ಈಗಾಗಲೇ ತಮ್ಮ ಡಾಬರ್‌ ಮನ್‌ ತಳಿಯ ನಾಯಿಗೆ ರಾಷ್ಟ್ರಮಟ್ಟದ ಬಹುಮಾನ ಪಡೆದಿರುವ ಕಾಮತ್‌ ಈ ರೊಡೇಶಿಯನ್‌ ನಾಯಿಯನ್ನು ಕೂಡ ರಾಷ್ಟ್ರಮಟ್ಟದ ಸ್ಪರ್ಧೆಗೆ ಅಣಿಗೊಳಿಸುವ ಹುಮ್ಮಸ್ಸಿನಲ್ಲಿದ್ದಾರೆ.
ರೊಡೇಶಿಯನ್‌ ರಿಡ್ಜ್‌ ಬ್ಯಾಕ್‌ ಆಫ್ರಿಕನ್‌ ಖಂಡದ ಮೂಲತಳಿ, ಈ ತಳಿಯ ನಾಲ್ಕು ನಾಯಿಗಳು ಸೇರಿದರೆ ಒಂದು ಸಿಂಹವನ್ನೇ ಕೊಲ್ಲುವಷ್ಟುಸಾಮರ್ಥ್ಯವನ್ನು ಹೊಂದಿರುವುದರಿಂದ ಇದನ್ನು ಆಫ್ರಿಕನ್‌ ಲಯನ್‌ ಡಾಗ್‌ ಎಂತಲೂ ಕರೆಯುತ್ತಾರೆ.

ಗದಗ: ಕಲ್ಲು ಎತ್ತಿಹಾಕಿ ವ್ಯಕ್ತಿ ಕೊಲೆ ಕೇಸ್‌, ಆರೋಪಿಗಳ ಸುಳಿವು ನೀಡಿದ ಪೊಲೀಸ್ ರ‍್ಯಾಂಬೊ..!

ಪೂರ್ಣ ಬೆಳೆದ ಗಂಡು ನಾಯಿ 19 ರಿಂದ 26 ಇಂಚು ಎತ್ತರ ಮತ್ತು 45 ಕೆಜಿವರೆಗೂ ತೂಗುತ್ತವೆ. 10 - 13 ವರ್ಷಗಳ ಕಾಲ ಬದುಕುತ್ತವೆ. ವಿಪರೀತ ಸಿಟ್ಟಿನ ಸ್ವಭಾವದ ಈ ನಾಯಿ ಬೇಟೆಗೆ ಮತ್ತು ಕಾವಲು ಕಾಯುವುದಕ್ಕೆ ಅತ್ಯಂತ ಸೂಕ್ತವಾಗಿದೆ. ಬಹಳ ಬುದ್ಧಿವಂತ ಮತ್ತು ಸಂವೇದನಾಶೀಲತೆಯ ಈ ತಳಿಯ ನಾಯಿಗಳು ಮಾಲೀಕರಿಗೆ ಅತ್ಯಂತ ನಿಷ್ಠೆಯಿಂದಿರುತ್ತವೆ ಎನ್ನುತ್ತಾರೆ ವಿಶ್ವನಾಥ ಕಾಮತ್‌.
 

Latest Videos
Follow Us:
Download App:
  • android
  • ios