Asianet Suvarna News Asianet Suvarna News

ಹೊಸ ದೇವಸ್ಥಾನಕ್ಕಿಂತ ಈಗಿರುವ ಗುಡಿಗಳ ಪುನರುಜ್ಜೀವನ ಅಗತ್ಯ: ಕಿಮ್ಮನೆ ರತ್ನಾಕರ್

ದೇಶದಲ್ಲಿ ಹೊಸ ದೇವಸ್ಥಾನಗಳನ್ನು ನಿರ್ಮಿಸಿ, ಸಮಸ್ಯೆಗಳನ್ನು ಸೃಷ್ಟಿ ಮಾಡುವುದಕ್ಕಿಂತ, ಇರುವ ದೇವಸ್ಥಾನಗಳನ್ನೇ ಪುನರುಜ್ಜೀವನಗೊಳಿಸಿ ಅವುಗಳನ್ನು ಉತ್ತಮ ಸ್ಥಿತಿಯಲ್ಲಿಡುವುದು ಸೂಕ್ತ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. 

Revival of existing shrines more important than new temple Says Kimmane Ratnakar gvd
Author
First Published Jan 21, 2024, 10:45 AM IST

ತೀರ್ಥಹಳ್ಳಿ (ಜ.21): ದೇಶದಲ್ಲಿ ಹೊಸ ದೇವಸ್ಥಾನಗಳನ್ನು ನಿರ್ಮಿಸಿ, ಸಮಸ್ಯೆಗಳನ್ನು ಸೃಷ್ಟಿ ಮಾಡುವುದಕ್ಕಿಂತ, ಇರುವ ದೇವಸ್ಥಾನಗಳನ್ನೇ ಪುನರುಜ್ಜೀವನಗೊಳಿಸಿ ಅವುಗಳನ್ನು ಉತ್ತಮ ಸ್ಥಿತಿಯಲ್ಲಿಡುವುದು ಸೂಕ್ತ ಎಂದು ಕಾಂಗ್ರೆಸ್ ವಕ್ತಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಪಟ್ಟಣದ ತುಂಗಾನದಿ ತೀರದ ಶ್ರೀ ಕೋದಂಡರಾಮ ದೇವಸ್ಥಾನ ಆವರಣವನ್ನು ಸ್ವಚ್ಚಗೊಳಿಸುವ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯುವ ಸಂದರ್ಭ ಈ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ಆಯೋಜಿಸಿದ್ದೇವೆ ಎಂದರು.

ಕೋದಂಡರಾಮ ದೇಗುಲ ಮೂರು ಶತಮಾನಗಳ ಹಿಂದಿನದಾಗಿದ.ಎ ನನ್ನ ಬಾಲ್ಯದಿಂದ ಈ ದೇಗುಲ ನೋಡುತ್ತಿದ್ದೇನೆ. ತುಂಗಾನದಿ ತೀರದ ಸುಂದರ ವಾತಾವರಣದ ನಡುವೆ ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನ ಸಮೀಪದಲ್ಲಿರುವ ಈ ದೇವಸ್ಥಾನ ಶಿಲ್ಪಕಲೆಯಿಂದ ಸುಂದರವಾಗಿದೆ. ಪಟ್ಟಣದ ಮಧ್ಯ ಭಾಗದಲ್ಲಿದ್ದರೂ ಕನಿಷ್ಠ ನಿರ್ವಹಣೆ ಇಲ್ಲದೇ, ದೇವಸ್ಥಾನದ ಸುತ್ತಲೂ ಗಿಡಗಳು ಬೆಳೆದಿವೆ. ಈ ದೇವಸ್ಥಾನ ಆವರಣವನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣಗಳಿಂದ ಅಲಂಕಾರಗೊಳಿಸಲು ತೀರ್ಮಾನಿಸಿದ್ದೇವೆ ಎಂದರು.

ಅಯೋಧ್ಯೆಯಲ್ಲಿ ರಾಮಲಲ್ಲಾಮೂರ್ತಿ ಎತ್ತಿ ಇಟ್ಟಿದ್ದು ನಾನೇ: ಯಾರು ನಂದಗೋಪಾಲ ಸಫಾರಿ?

ರಾಜ್ಯ ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಈ ದೇವಸ್ಥಾನವನ್ನುಅಂದಾಜು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ದೇವಸ್ಥಾನವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಕೈ ಜೋಡಿಸಿರುವ ಪ.ಪಂ. ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್‍ ಕಾರ್ಯಕರ್ತರು ಮತ್ತು ಅಭಮಾನಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿಯೂ ತಿಳಿಸಿದರು. ಪಪಂ ಅಧ್ಯಕ್ಷೆ ಗೀತಾ ರಮೇಶ್, ಡಿ.ಎಸ್. ವಿಶ್ವನಾಥ ಶೆಟ್ಟಿ, ಬಂಡೆ ವೆಂಕಟೇಶ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ರತ್ನಾಕರ ಶೆಟ್ಟಿ, ಯುವ ಕಾಂಗ್ರೆಸ್‍ ಅಧ್ಯಕ್ಷ ಅಮರನಾಥ ಶೆಟ್ಟಿ, ಅಮ್ರಪಾಲಿ ಸುರೇಶ್ ಮುಂತಾದವರು ಇದ್ದರು.

Follow Us:
Download App:
  • android
  • ios