ಒಂದು ವರ್ಷದಲ್ಲಿ ಕಂದಾಯ ಸಮಸ್ಯೆ ದೂರ: ಸಂಸದ

ಕುಣಿಗಲ್ ತಾಲೂಕಿನಲ್ಲಿ ಹೆಚ್ಚು ಕಂದಾಯ ಸಮಸ್ಯೆಗಳಿವೆ, ಭೂಮಿ ಅಳತೆ ಸಮಸ್ಯೆಗಳಿಂದ ಅನೇಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹೆಚ್ಚಾಗುತ್ತಿದೆ. ಇವುಗಳನ್ನು ತಡೆಯುವಲ್ಲಿ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ತಹಸೀಲ್ದಾರ್ ಆಶ್ರಯದಲ್ಲಿ ಕಾರ್ಯಕ್ರಮ ಗಳನ್ನು ನಡೆಸಬೇಕಿದೆ ಎಂದು ಸಂಸದ ಡಿ. ಕೆ. ಸುರೇಶ್ ಹೇಳಿದರು.

Revenue problem gone in a year: MP snr

 ಕುಣಿಗಲ್ :  ಕುಣಿಗಲ್ ತಾಲೂಕಿನಲ್ಲಿ ಹೆಚ್ಚು ಕಂದಾಯ ಸಮಸ್ಯೆಗಳಿವೆ, ಭೂಮಿ ಅಳತೆ ಸಮಸ್ಯೆಗಳಿಂದ ಅನೇಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹೆಚ್ಚಾಗುತ್ತಿದೆ. ಇವುಗಳನ್ನು ತಡೆಯುವಲ್ಲಿ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ತಹಸೀಲ್ದಾರ್ ಆಶ್ರಯದಲ್ಲಿ ಕಾರ್ಯಕ್ರಮ ಗಳನ್ನು ನಡೆಸಬೇಕಿದೆ ಎಂದು ಸಂಸದ ಡಿ. ಕೆ. ಸುರೇಶ್ ಹೇಳಿದರು.

ಯಲಿಯೂರು ಗ್ರಾಮದಲ್ಲಿ ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸದ ಡಿ. ಕೆ. ಸುರೇಶ್ ಮಾತನಾಡಿದರು.

ಮುಂದಿನ ದಿನಗಳಲ್ಲಿ ಪ್ರತಿವಾರಕ್ಕೆ ಒಂದು ಬಾರಿ ಕಂದಾಯ ಅದಾಲತ್ ಮಾಡುವ ಮುಖಾಂತರ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವಂತೆ ತಹಸೀಲ್ದಾರ್ ಗೆ ಸೂಚಿಸಿದರು.

ಅಧಿಕಾರಿಗಳು ಸ್ಥಳ ಪರಿಶೀಲಿಸಿ, ವರದಿ ನೀಡುವ ಮೂಲಕ ಸಮಸ್ಯೆ ಬಗೆಹರಿಸಿ ಕೇವಲ ಕಚೇರಿಯಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು ಸಾರ್ವಜನಿಕರ ನಡುವೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ಕೆಲವೇ ದಿನಗಳಲ್ಲಿ ಕಂದಾಯ ಬಗರ್ಹುಕುಂ ಕಮಿಟಿ ಅಸ್ತಿತ್ವಕ್ಕೆ ಬರಲಿದೆ. ನಂತರ ಸಾಗುವಳಿ ಚೀಟಿ ಸೇರಿದಂತೆ ಇತರ ಸಮಸ್ಯೆಗಳು ಬಗೆಹರಿಯಲಿವೆ ಎಂದರು.

ಸ್ಮಶಾನ, ಸೇತುವೆ, ರಸ್ತೆ, ಸೇರಿದಂತೆ ಹಲವರು ಸಾರ್ವಜನಿಕ ಅರ್ಜಿಗಳು ಬಂದಿದೆ. ಅಧಿಕಾರಿಗಳು ಈ ಸಂಬಂಧ ಕ್ರಮವಹಿಸಿ ತಕ್ಷಣ ಬಗೆಹರಿಸುವಂತೆ ಸೂಚಿಸಿದರು. ರಸ್ತೆ ಸಮಸ್ಯೆ ಗ್ರಾಮದ ಹಳ್ಳಿಗಳಲ್ಲಿ ಹೆಚ್ಚಾಗುತ್ತಿದೆ. ಅದಕ್ಕಾಗಿ ಸರ್ವೆ ಕಾರ್ಯ ನಡೆಯುವಾಗ ರಸ್ತೆಯನ್ನು ಕಾಯ್ದಿರಿಸಬೇಕು ಎಂದರು.

ಮುಂದಿನ ದಿನಗಳಲ್ಲಿ ಸರ್ವೆ ಸಮಸ್ಯೆ ಬಗೆಹರಿಸುವಲ್ಲಿ ತಾಲೂಕಿನ ಸರ್ವೇ ತರಬೇತಿ ನೀಡಿ ಅವರಿಂದ ಆದಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸುವ ಕೆಲಸವನ್ನು ಮಾಡುವ ಪ್ರಾಯೋಗಿಕ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ ಎಂದರು.

ನಿವೇಶನಕ್ಕೆ ಸಂಬಂಧಿಸಿದಂತೆ ಯಲಿಯೂರು ಗ್ರಾಮ ಪಂಚಾಯಿತಿಯಲ್ಲಿ 11 ಎಕರೆ ಜಾಗವನ್ನು ಪ್ರಸ್ತಾವನೆ ಕಳಿಸಲಾಗಿದೆ ಅರ್ಜಿದಾರರನ್ನು ಸಂಪರ್ಕಿಸಿ ಅವರಿಗೆ ನಿವೇಶನ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕುಣಿಗಲ್ ಶಾಸಕ ಡಾಕ್ಟರ್ ರಂಗನಾಥ್ ಮಾತನಾಡಿದರು. ತಹಸೀಲ್ದಾರ್‌ ವಿಶ್ವನಾಥ್, ಕಾರ್ಯನಿರ್ವಣಾಧಿಕಾರಿ ಜೋಸೆಫ್ ಸೇರಿದಂತೆ ಹಲವರು ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಇದ್ದರು.

Latest Videos
Follow Us:
Download App:
  • android
  • ios