Asianet Suvarna News Asianet Suvarna News

Koppal News: ಈಜು ಕೊಳಕ್ಕೆ ಬಿದ್ದು ಕಂದಾಯ ನೌಕರ ಸಾವು!

ಈಜು ಕೊಳಕ್ಕೆ ಬಿದ್ದು ಕಂದಾಯ ಇಲಾಖೆ ನೌಕರ ಮೃತಪಟ್ಟಿರುವ ದುರ್ಘಟನೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ರೆಸಾರ್ಟ್ ನಡೆದಿದೆ.

Revenue employee dies after falling into swimming pool at koppal rav
Author
First Published Jan 24, 2023, 12:12 AM IST

ಕೊಪ್ಪಳ (ಜ.23): ಈಜು ಕೊಳಕ್ಕೆ ಬಿದ್ದು ಕಂದಾಯ ಇಲಾಖೆ ನೌಕರ ಮೃತಪಟ್ಟಿರುವ ದುರ್ಘಟನೆ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಬಳಿ ರೆಸಾರ್ಟ್ ನಡೆದಿದೆ.

ಕಂದಾಯ ಇಲಾಖೆ ಎಸ್‌ಡಿಎ ತಾಯಪ್ಪ (26) ಮೃತಪಟ್ಟ ದುರ್ದೈವಿ. ವಾರ್ಷಿಕ ಕ್ರೀಡಾಕೂಟ ಹಿನ್ನೆಲೆ ಕೊಪ್ಪಳ ತಹಸೀಲ್ದಾರ್ ಕಚೇರಿಯಿಂದ ಫೆದರ್ಸ್ ರೆಸಾರ್ಟ್ ನಲ್ಲಿ ಆಯೋಜನೆ ಮಾಡಲಾಗಿತ್ತು. ಕಂದಾಯ ಇಲಾಖೆ ನೌಕರರು ಗೆಟ್ ಟುಗೆದರ್ ಪಾರ್ಟಿಗೆ ಹೋಗಿದ್ದಾಗ ನಡೆದಿರುವ ಘಟನೆ.

ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತದಿಂದ ಮೃತಪಟ್ಟ 32 ವರ್ಷದ ಯುವಕ..!

ಪಾರ್ಟಿಯಲ್ಲಿ ಊಟ ಮುಗಿಸಿದ ಬಳಿಕ ತಾಯಪ್ಪ ಈಜಾಡಲು ಸ್ವಿಮಿಂಗ್ ಪೂಲ್ಗೆ ಇಳಿದ ವೇಳೆ ನಡೆದಿರುವ ದುರಂತ. ಕಳೆದ ನಾಲ್ಕೈದು ವರ್ಷಗಳಿಂದ ಎಸ್‌ಡಿಎ ಆಗಿ ಕೆಲಸ‌ ಮಾಡುತ್ತಿದ್ದ ತಾಯಪ್ಪ. ಈಜುಕೋಳದಲ್ಲಿ ಮುಳುಗಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.  ತಾಯಪ್ಪ ಮೃತಪಟ್ಟ ಸುದ್ದಿ ತಿಳಿದು ಆತನ ಪತ್ನಿ ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದೆ. ಸದ್ಯ ಈ ಘಟನೆ ಕೊಪ್ಪಳ ಜಿಲ್ಲೆ ಮುನಿರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾರ್‌ ಡಿಕ್ಕಿ: ಬೈಕ್‌ ಸವಾರ ಸಾವು

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಕ್ರಾಸ್‌ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಬೈಕ್‌ ಸವಾರ ಮೃತಪಟ್ಟು, ಹಿಂಬದಿಯ ಸವಾರ ಗಾಯಗೊಂಡ ಘಟನೆ ಸೋಮವಾರ ಸಂಜೆ ನಡೆದಿದೆ. ಛಬ್ಬಿ ಗ್ರಾಮದ ರಾಮಪ್ಪ ಸುಣಗಾರ (45) ಮೃತಪಟ್ಟರು. ಅಶೋಕ ಹೊಂಗಲ ಗಾಯಗೊಂಡಿದ್ದಾರೆ. ಬೈಕ್‌ ಸವಾರ ದಾಟುತ್ತಿರುವಾಗ ಬೆಂಗಳೂರಿನಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್‌ ಸವಾರನಿಗೆ ತಲೆಗೆ ಪೆಟ್ಟಾಗಿದ್ದರಿಂದ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಗಾಯಗೊಂಡ ಅಶೋಕನನ್ನು ನಗರದ ಕಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಬೆಂಗಳೂರು ವಿಜಯ ನಗರದ ನಿವಾಸಿ ಬಸವರಾಜ ಹಳ್ಳಿ ಮಠ ಎಂಬಾತ ಅಪಘಾತ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijayapura: ಪ್ರೀತಿಸಿದವರು ಸಾವಿನಲ್ಲಿ ಒಂದಾದರು: ಪ್ರೇಮಿಯಿಂದ ತಾಳಿಕಟ್ಟಿಸಿಕೊಂಡು ಪ್ರಾಣಬಿಟ್ಟ ಯುವತಿ

ಪತ್ನಿ ಕೊಲೆ; ಆರೋಪಿ ಬಂಧನ

ಹುಬ್ಬಳ್ಳಿ: ಪತ್ನಿಯ ಮೇಲೆ ಸಂಶಯ ಪಟ್ಟು ಕೊಲೆ ಗೈದ ಪರಾರಿಯಾಗಿದ್ದ ಆರೋಪಿ ಪತಿಯನ್ನು ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಕೋಳಿವಾಡ ಗ್ರಾಮದ ಉಡಚಪ್ಪ ದೇವರಮನಿ ಬಂಧಿತ ಆರೋಪಿ. ಶನಿವಾರ ಪತ್ನಿ ಶಾರದಾಳನ್ನು ಸಂಶಯ ಪಟ್ಟು ಹರಿತ ವಾದ ಮಾರಕಾಸ್ತ್ರದಿಂದ ಕತ್ತು ಸಿಳಿ ಕೊಲೆ ಮಾಡಿದ್ದ. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಲೆ ಮರಿಸಿಕೊಂಡಿದ್ದ ಆರೋಪಿ ಸೆರೆ ಹಿಡಿಯಲು ಪೊಲೀಸ್‌ ಇನಸ್ಪೆಕ್ಟರ್‌ ರಮೇಶ ಗೋಕಾಕ ಅವರ ನೇತೃತ್ವದ ತಂಡ ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Follow Us:
Download App:
  • android
  • ios