ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಹೃದಯಾಘಾತದಿಂದ ಮೃತಪಟ್ಟ 32 ವರ್ಷದ ಯುವಕ..!
ಮೃತ ಯುವಕನನ್ನು 32 ವರ್ಷದ ಅಭಯ್ ಸಚನ್, ಹಾಗೂ ಈತನ ತಂದೆ ಮೂಲಚಂದ್ರ ಸಚನ್ ಎಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಉತ್ತರ ಪ್ರದೇಶದ ಕಾನ್ಪುರದಿಂದ ಬಸ್‌ಸ್ಟ್ಯಾಂಡ್ ಬಳಿಯ ಅಮರ್‌ದೀಪ್ ಪ್ಯಾಲೇಸ್‌ಗೆ ಮದುವೆ ಮೆರವಣಿಗೆ ಬಂದಿದ್ದು, ಇದರಲ್ಲಿ ಮೃತ ಯುವಕ ಸಹ ಭಾಗಿಯಾಗಿದ್ದ.
ಕಳೆದ ವರ್ಷದಿಂದ ಯುವಕರು, ವಿದ್ಯಾರ್ಥಿಗಳು ಸಹ ಇದ್ದಕ್ಕಿದ್ದಂತೆ ಪ್ರಾಣವನ್ನೇ ಕಳೆದುಕೊಳ್ಳುವ ಆಘಾತಕಾರಿ ಸುದ್ದಿಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಹೃದಯಾಘಾತ ಎಂಬುದು ಆತಂಕಕಾರಿಯಾಗಿದೆ. ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಹೃದಯಾಘಾತದಂತಹ ಸುದ್ದಿಗಳನ್ನು ನೀವು ಓದಿರಬಹುದು. ಡ್ಯಾನ್ಸ್ ಮಾಡುವಾಗ, ಜಿಮ್‌ನಲ್ಲಿ ವರ್ಕೌಟ್ ಮಾಡುವಾಗಲೂ ಮೃತಪಟ್ಟಿರುವ ಘಟನೆಗಳು ಸಹ ವರದಿಯಾಗಿವೆ. ಇದೇ ರೀತಿ, ಮಧ್ಯ ಪ್ರದೇಶದ ರೇವಾ ನಗರದಲ್ಲಿ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, 32 ವರ್ಷದ ಯುವಕ ಮದುವೆ ಮೆರವಣಿಗೆ ಅಥವಾ ಬಾರಾತ್‌ನಲ್ಲಿ ಡ್ಯಾನ್ಸ್ ಮಾಡುತ್ತಲೇ ಸತ್ತಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ ಮೂಲದ ಯುವಕ, ಗೆಳೆಯನ ಮದುವೆಗೆಂದು ಮಧ್ಯ ಪ್ರದೇಶದ ರೇವಾಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಯುವಕ (Youth) ಮೆರವಣಿಗೆಯಲ್ಲಿ (Procession) ಖುಷಿ ಖುಷಿಯಿಂದ ಡ್ಯಾನ್ಸ್ (Dance) ಮಾಡುತ್ತಲೇ, ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದು ಮೃತಪಟ್ಟಿರುವ (Death) ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನು, ಮದುವೆ (Wedding) ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಇತರರು ಸಹ ಇಷ್ಟು ವಯಸ್ಸಿಗೇ ಹೀಗೆ ಇದ್ದಕ್ಕಿದ್ದಂತೆ ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ನಂಬಲಿಕ್ಕೆ ಸಾಧ್ಯವಾಗದೆ ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಜನವರಿ 17, ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇದನ್ನು ಓದಿ: Heartattack in Children: ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ತಜ್ಞರು ಏನಂತಾರೆ?
ಮೃತ ಯುವಕನನ್ನು 32 ವರ್ಷದ ಅಭಯ್ ಸಚನ್, ಹಾಗೂ ಈತನ ತಂದೆ ಮೂಲಚಂದ್ರ ಸಚನ್ ಎಂದು ತಿಳಿದುಬಂದಿದೆ. ಮಂಗಳವಾರ ರಾತ್ರಿ ಉತ್ತರ ಪ್ರದೇಶದ ಕಾನ್ಪುರದಿಂದ ಬಸ್‌ಸ್ಟ್ಯಾಂಡ್ ಬಳಿಯ ಅಮರ್‌ದೀಪ್ ಪ್ಯಾಲೇಸ್‌ಗೆ ಮದುವೆ ಮೆರವಣಿಗೆ ಬಂದಿದ್ದು, ಇದರಲ್ಲಿ ಮೃತ ಯುವಕ ಸಹ ಭಾಗಿಯಾಗಿದ್ದ. ವಧು ಮಧ್ಯ ಪ್ರದೇಶದ ರೇವಾ ಮೂಲದವಳು ಎಂದು ತಿಳಿದುಬಂದಿದ್ದು, ಈ ಮದುವೆಗೆ ಅಭಯ್ ಸಚನ್ ಬಂದಿದ್ದ. ರಾತ್ರಿ 11 ಗಂಟೆ ವೇಳೆಗೆ ಮೆರವಣಿಗೆ ನಡೆಯುತ್ತಿದ್ದ ವೇಳೆ ಬ್ಯಾಂಡ್‌ನ ವಾದ್ಯಕ್ಕೆ ಹಾಗೂ ಡ್ರಮ್ಸ್ ಬೀಟ್‌ಗಳಿಗೆ ತಕ್ಕಂತೆ ವರನ ಗೆಳೆಯ ಅಭಯ್ ಡ್ಯಾನ್ಸ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆದರೆ, ಸ್ವಲ್ಪ ಸಮಯದ ಬಳಿಕ ಈತ ನೆಲಕ್ಕೆ ಕುಸಿದುಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಆತ ನೆಲಕ್ಕೆ ಕುಸಿಯುತ್ತಿದ್ದಂತೆ, ಮೆರವಣಿಗೆಯಲ್ಲಿದ್ದ ಜನರು ಅಭಯ್‌ನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ, ವೈದ್ಯರು ಆತ ಹೃಯಾಘಾತದಿಂದ ಮೃತಪಟ್ಟಿರಬಹುದೆಂದು, ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ. ನಂತರ, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮದುವೆಗೆ ಬಂದಿದ್ದ ಗೆಳೆಯರು ಹಾಗೂ ವರ - ವಧುವಿನ ಕುಟುಂಬಸ್ಥರ ಜತೆ ಮಾತನಾಡಿದ್ದಾರೆ. ಬುಧವಾರ ಮಧ್ಯಾಹ್ನ ಅಭಯ್ ಮೃತದೇಹದ ಪೋಸ್ಟ್‌ಮಾರ್ಟಂ ಮಾಡಲಾಗಿದೆ. ಸಂಬಂಧಿಕರು ಆತನ ಮೃತದೇಹದೊಂದಿಗೆ ಕಾನ್ಪುರಕ್ಕೆ ಹೋಗಿದ್ದು, ಪೋಸ್ಟ್ ಮಾರ್ಟಂ ವರದಿ ಬಂದ ಬಳಿಕವೇ ಯುವಕನ ಸಾವಿಗೆ ನಿಜವಾದ ಕಾರಣ ತಿಳಿದುಬರಬೇಕಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯ ವೇಳೆ ಕಾಂಗ್ರೆಸ್ ಸಂಸದ ಸಂತೋಕ್ ಸಿಂಗ್ ನಿಧನ!
ಈ ಘಟನೆಯಿಂದ ಕುಟುಂಬ ಜರ್ಜರಿತವಾಗಿದ್ದು, ಮದುವೆ ಸಮಾರಂಭ ಶೋಕವಾಗಿ ಮಾರ್ಪಟ್ಟಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.