ವಿಷ ಸೇವಿಸಿದ್ದ ನಿವೃತ್ತ ಶಿಕ್ಷಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಫೆ.24): ಅವ್ರೆಲ್ಲ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸ್ತಿದ್ದ ನಿವೃತ್ತ ಶಿಕ್ಷಕರು. ರದ್ದಾಗಿ ಪಿಂಚಣಿ ಯೋಜನೆಯನ್ನ ಜಾರಿಗೊಳಿಸುವಂತೆ ಸತತ 141 ದಿನಗಳಿಂದ ಪ್ರತಿಭಟನೆ ನಡೆಸ್ತಿದ್ರು. ಆದ್ರೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇಬ್ಬರು ನಿವೃತ್ತ ಶಿಕ್ಷಕರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ವಿಕ್ಟೋರಿಯ ಅಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ಸ್ಥಿತಿ ಗಂಭೀರವಾಗಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಳೆ ಪಿಂಚಣಿ ಯೋಜನೆ ಹಾಗೂ ಆರೋಗ್ಯ ಸೇವೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಳ ಆಗ್ರಹಿಸಿ ಕೈಗೊಂಡಿದ್ದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ- ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೌಕರರ ಪ್ರತಿಭಟನೆ ನಿನ್ನೆಗೆ ಅಂತ್ಯಗೊಂಡಿದೆ. ಸರ್ಕಾರ ಇವತ್ತಲ್ಲ ನಾಳೆ ನಮ್ಮ ಹೋರಟವನ್ನ ಗಮನಿಸಿ ಸ್ಪಂದಿಸುತ್ತೆ ಅಂತ ಬರೊಬ್ಬರಿ 142 ದಿನಗಳ ಕಾಲ ಪ್ರತಿಭಟನೆ ನಡೆಸ್ತಿದ್ದ ಅನುದಾನಿತ ಶಾಲಾ ಶಿಕ್ಷಕರಿಗೆ ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಲ್ಲ ಅನ್ನೋದು ಅರಿವಾಗಿತ್ತು.
ಯಾದಗಿರಿ: ಕುಡಿಯುವ ನೀರಿನಲ್ಲಿ ಮಲ ಮಿಶ್ರಣಗೊಂಡಿದ್ದೇ ಮೂವರ ಸಾವಿಗೆ ಕಾರಣ
ಯಾವಾಗ ನಮ್ಮ ಹೋರಟಕ್ಕೆ ಫಲ ಸಿಕ್ಕಿಲ್ಲ ಅನ್ನೋದು ಅರಿವಾಯ್ತೋ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವ್ರು ಒಬ್ಬರಾಗಿ ಊರಿನತ್ತ ಪ್ರಯಾಣ ಬೆಳೆಸಿದ್ರೆ, ಮತ್ತೆ ಕೆಲವ್ರು ಆತ್ಮಹತ್ಯೆ ದಾರಿ ತುಳಿದಿದ್ದು, ಮೊನ್ನೆ ಮೊನ್ನೆ ಶಂಕರಪ್ಪ ಎಂಬುವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ರು. ಅದರ ಬೆನ್ನಲ್ಲೆ ಸಿದ್ದಯ್ಯ ಹಿರೇಮಠ ಹಾಗೂ ವೆಂಕಟರಾಜು ಎಂಬುವರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು. ಅದನ್ನ ಗಮನಿಸಿದ ಇತರೆ ಪ್ರತಿಭಟನೆಕಾರರು ಕೂಡ್ಲೇ ಚಿಕಿತ್ಸೆಗಾಗಿ ಆತ್ಮಹತ್ಯೆಗೆ ಯತ್ನಿಸಿದವ್ರನ್ನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಿದ್ರು. ಸತತ 24 ಗಂಟೆಗಳ ಕಾಲ ಚಿಕಿತ್ಸೆಗೊಳಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ ಸಿದ್ದಯ್ಯ ಹಿರೇಮಠ ಸಾವನ್ನಪ್ಪಿದ್ದಾರೆ.
ಆರಂಭದಿಂದಲೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿದ್ದಯ್ಯ
ಮೂಲತಃ ಬಾಗಲಕೋಟೆಯ ಪಟ್ಟದಕಲ್ಲು ಸರ್ಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡ್ತಿದ್ರು. ಇನ್ನು ನೌಕರರ ಸಂಘದವ್ರು ಕೈಗೊಂಡಿದ್ದ ಪ್ರತಿಭಟನೆ ಆರಂಭದಿಂದಲೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಿದ್ದಯ್ಯ ಹಿರೇಮಠ ಎರಡು ದಿನಗಳ ಹಿಂದೆ ಸರ್ಕಾರ ತಮ್ಮ ಹೋರಟಕ್ಕೆ ಸ್ಪಂದಿಸಲ್ಲ. ನಮಗೆ ನ್ಯಾಯ ಸಿಗೋದಿಲ್ಲ ಅನ್ನೋದು ಅರಿವಾಗಿತ್ತು. ಹೀಗಾಗಿ ಕೊನೆಗೆ ಪ್ರತಿಭಟನೆಯನ್ನ ಅಂತ್ಯಗೊಳಿಸುವ ಬಗ್ಗೆಯೂ ಸಂಘದ ತೀರ್ಮಾನವಾಗಿತ್ತು. ಹೀಗಾಗಿ ಇವತ್ತಲ್ಲ ನಾಳೆ ನಮ್ಮ ಹೋರಾಟಕ್ಕೆ ಪ್ರತಿಫಲ ಸಿಗಲ್ಲ ಅಂತ ಮನನೊಂದು ಪ್ರತಿಭಟನ ಸ್ಥಳದಿಂದ ಕೂಗಳತೆ ದೂರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು. ಆದ್ರೆ ಚಿಕಿತ್ಸೆ ಫಲಕಾಗದೇ ಸಾವನ್ನಪ್ಪಿದ್ದಾರೆ.
ಇನ್ನು ಸಾವಿನ ಸುದ್ದಿ ಕೇಳಿ ಆಸ್ಪತ್ರೆಗೆ ಉಪ್ಪಾರಪೇಟೆ ಪೊಲೀಸ್ರು ಧಾವಿಸಿದ್ರು. ಆ ವೇಳೆ ಮೃತನ ಸಂಬಂಧಿಕರು ಹಾಗೂ ಸ್ನೇಹಿತರು ನಮ್ಮ ಸಮಸ್ಯೆಗೆ ಪರಿಹಾರ ನಿಡೋವರೆಗೂ ಶವ ಸ್ವೀಕರಿಸೋದಿಲ್ಲ ಎಂದು ಹಠಕ್ಕೆ ಹಿಡಿದಿದ್ರು. ಕೂಡಲೇ ಪೊಲೀಸ್ರು ಮೃತರ ಸಂಬಂಧಿಕರನ್ನ ಸಮಧಾನಪಡಿಸಿ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನ ವಾರಸುದಾರರಿಗೆ ಒಪ್ಪಿಸಿದ್ದು, ರಾತ್ರಿಯೇ ಶವವನ್ನ ತೆಗೆದುಕೊಂಡ ವಾರಸುದಾರರು ಊರಿನತ್ತ ಪ್ರಯಾಣ ಬೆಳೆಸಿದ್ದಾರೆ. ಒಟ್ನಲ್ಲಿ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ನಡೆಸಲು ಬಂದವ್ರಲ್ಲಿ ಮೂವರು ಶಿಕ್ಷಕರು ಆತ್ಮಹತ್ಯೆ ಹಾದಿ ಹಿಡಿದ್ರು ಕನಿಷ್ಠ ಮಾನವಿಯತೆ ದೃಷ್ಟಿಯಿಂದ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಚಿವರು ಸ್ಥಳಕ್ಕೆ ಭೇಟಿ ನೀಡಿದೇ ಇದ್ದದ್ದು ಮಾತ್ರ ವಿಪರ್ಯಾಸ.
