ಯಾದಗಿರಿ: ಕುಡಿಯುವ ನೀರಿನಲ್ಲಿ ಮಲ ಮಿಶ್ರಣಗೊಂಡಿದ್ದೇ ಮೂವರ ಸಾವಿಗೆ ಕಾರಣ

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ವಾಂತಿಬೇಧಿಗೆ ಕಾರಣ, ಕುಡಿಯುವ ನೀರಿನಲ್ಲಿ ಮಲ ಮಿಶ್ರಣಗೊಂಡಿರುವುದು ಎಂದು ಆರೋಗ್ಯ ಇಲಾಖೆಯ ವರದಿಗಳು ದೃಢಪಡಿಸಿವೆ.  

In Charge of DHO of Yadgir Talks Over Three Dies Case in Yadgir grg

ಯಾದಗಿರಿ(ಫೆ.24):  ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ವಾಂತಿಬೇಧಿಗೆ ಕಾರಣ, ಕುಡಿಯುವ ನೀರಿನಲ್ಲಿ ಮಲ ಮಿಶ್ರಣಗೊಂಡಿರುವುದು ಎಂದು ಆರೋಗ್ಯ ಇಲಾಖೆಯ ವರದಿಗಳು ದೃಢಪಡಿಸಿವೆ. ಫೆ.16 ರಂದು ಅನಪುರದಲ್ಲಿ ನಡೆದ ವಾಂತಿಬೇಧಿ ಅವಘಡದಲ್ಲಿ ಮೂವರು ಮೃತಪಟ್ಟು, 85ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು.

ಈ ಘಟನೆಯ ನಂತರ, ಗ್ರಾಮದ 13 ಕಡೆಗಳಲ್ಲಿ ನೀರಿನ ಮಾದರಿಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸಂಗ್ರಹಿಸಿ, ಗುಣಮಟ್ಟ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಯಾದಗಿರಿ: ಕಲುಷಿತ ನೀರು ಸೇವನೆ, ಮೃತರ ಸಂಖ್ಯೆ 3ಕ್ಕೇರಿಕೆ

ಪ್ರಯೋಗಾಲಯ ವರದಿಯಂತೆ, ಇವು ಯಾವವೂ ಕುಡಿಯಲು ಯೋಗ್ಯವಿಲ್ಲ. ಜೊತೆಗೆ, ಕುಡಿಯುವ ನೀರು ಸರಬರಜಾಗುವ ಪೈಪ್ ಲೈನ್ ಗಳ ಸೋರಿಕೆ ಆಗಿರಬಹುದಾದ ಸ್ಥಳಗಳ ಮೂಲಕ ಸಂಗ್ರಹಣೆಯಾದ ಮಲದ ಅಂಶದ ಬೆರಕೆಯಾದ ನೀರು ಕುಡಿದು ವಾಂತಿಭೇದಿಗೆ ಕಾರಣ ಎಂದು ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಕ್ಷ್ಮಿಕಾಂತ್ ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರು, ಸ್ವಯಂ ಪ್ರೇರಿತ ದೂರು ದಾಖಲಿಸಿ ಕೊಂಡು ತನಿಖೆಗೆ ಆದೇಶಿಸಿದ್ದರೆ, ಪಿಡಿಓ ಕಾರ್ಯದರ್ಶಿ ಹಾಗೂ ಪಂಪ್ ಆಪರೇಟರ್ ಸೇರಿದಂತೆ ಇನ್ನಿತರರ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304ಎ ದಾಖಲಿಸಲಾಗಿದೆ.

Latest Videos
Follow Us:
Download App:
  • android
  • ios