ಅಂಕೋಲಾ(ಜು.27): ಕೌಟುಂಬಿಕ ಕಾರಣಕ್ಕೆ ಮಾಜಿ ಸೈನಿಕನೋರ್ವ ತನ್ನ ಸಹೋದರನ ಪತ್ನಿ ಹಾಗೂ ಮಗನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಅಂಕೋಲಾ ಪಟ್ಟಣದ ಮಠಕೇರಿಯಲ್ಲಿ ನಡೆದಿದೆ.

ಇಲ್ಲಿನ ಮಾಜಿ ಸೈನಿಕ ಅಜಯ್ ಪ್ರಭು ಎಂಬಾತ ಆತನ ಸಹೋದರನ ಪತ್ನಿ ಮತ್ತು ಮಗನ ಮೇಲೆ ಗುಂಡು ಹಾರಿಸಿದ್ದು, ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.

ಸದ್ಯ ಮಾಜಿ ಸೈನಿಕ ಅಜಯ್ ಪ್ರಭುನನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.