ಚಿಂತಾಮಣಿ: ಜಮೀನಿಗಾಗಿ ಕಚೇರಿಗಳಿಗೆ ನಿವೃತ್ತ ಕರ್ನಲ್ ಅಲೆದಾಟ..!
ಬೆಳಗಾವಿಯ ಮಠಾರ ಲೈಟ್ ಇನ್‌ಫೆಂಟರಿ ರೆಜಿಮೆಂಟ್ ಸೆಂಟರ್ ಕರ್ನಲ್ ಆಗಿ ಸೇವೆ ಸಲ್ಲಿಸಿ 2004ರಲ್ಲಿ ನಿವೃತ್ತರಾದ ಚಿಂತಾಮಣಿಯ ಶಿವಾನಂದರೆಡ್ಡಿ ಅವರಿಗೆ ಜಮೀನು ಮಂಜೂರು ಮಾಡುವಂತೆ ಕೋಲಾರ ಜಿಲ್ಲಾಧಿಕಾರಿಯವರು ಚಿಂತಾಮಣಿ ತಹಸೀಲ್ದಾರ್‌ರಿಗೆ ಲಿಖಿತವಾಗಿ ಸೂಚಿಸಿದ್ದಾರೆ. ಆದರೆ ತಾಲೂಕು ಆಡಳಿತ ನಮ್ಮಲ್ಲಿ ಸರ್ಕಾರಿ ಭೂಮಿ ಲಭ್ಯವಿಲ್ಲದ ಕಾರಣ ಶ್ರೀನಿವಾಪುರ ತಾಲೂಕಿನಲ್ಲಿ ಭೂ ಮಂಜೂರಾತಿ ಮಾಡಿಸಿಕೊಳ್ಳುವಂತೆ ರೆಡ್ಡಿಯವರಿಗೆ ಸೂಚಿಸಿದೆ.
ಚಿಂತಾಮಣಿ(ನ.02): ದೇಶ ರಕ್ಷಣೆಗೆ ತಮ್ಮ ಪ್ರಾಣವನ್ನೆ ಮುಡಿಪಾಗಿಟ್ಟಿರುವ ಯೋಧರನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಅಂತಹ ಯೋಧರು ಸೇವೆಯಿಂದ ನಿವೃತ್ತಿ ಹೊಂದಿದಾಗ ಅವರ ಮುಂದಿನ ಜೀವನಕ್ಕಾಗಿ ಸರ್ಕಾರ ಅವರಿಗೆ ಜಮೀನು ನೀಡುವ ಯೋಜನೆ ಜಾರಿಯಲ್ಲಿದೆ. ಆದರೆ ನಿವೃತ್ತ ಯೋಧರು ಈ ಜಮೀನು ಪಡೆಯಲು ದೊಡ್ಡ ಯುದ್ಧವನ್ನೇ ಮಾಡಬೇಕಾದ ಸ್ಥಿತಿಯನ್ನು ಅಧಿಕಾರಿಗಳು ನಿರ್ಮಿಸಿದ್ದಾರೆ.
ಬೆಳಗಾವಿಯ ಮಠಾರ ಲೈಟ್ ಇನ್‌ಫೆಂಟರಿ ರೆಜಿಮೆಂಟ್ ಸೆಂಟರ್ ಕರ್ನಲ್ ಆಗಿ ಸೇವೆ ಸಲ್ಲಿಸಿ 2004ರಲ್ಲಿ ನಿವೃತ್ತರಾದ ಚಿಂತಾಮಣಿಯ ಶಿವಾನಂದರೆಡ್ಡಿ ಅವರಿಗೆ ಜಮೀನು ಮಂಜೂರು ಮಾಡುವಂತೆ ಕೋಲಾರ ಜಿಲ್ಲಾಧಿಕಾರಿಯವರು ಚಿಂತಾಮಣಿ ತಹಸೀಲ್ದಾರ್‌ರಿಗೆ ಲಿಖಿತವಾಗಿ ಸೂಚಿಸಿದ್ದಾರೆ. ಆದರೆ ತಾಲೂಕು ಆಡಳಿತ ನಮ್ಮಲ್ಲಿ ಸರ್ಕಾರಿ ಭೂಮಿ ಲಭ್ಯವಿಲ್ಲದ ಕಾರಣ ಶ್ರೀನಿವಾಪುರ ತಾಲೂಕಿನಲ್ಲಿ ಭೂ ಮಂಜೂರಾತಿ ಮಾಡಿಸಿಕೊಳ್ಳುವಂತೆ ರೆಡ್ಡಿಯವರಿಗೆ ಸೂಚಿಸಿದೆ.
ಸಿದ್ದರಾಮಯ್ಯ ಸರ್ಕಾರ ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಎಂ.ಸಿ.ಸುಧಾಕರ್
20 ವರ್ಷಗಳಿಂದ ಅಲೆದಾಟ
ಆದರೆ ಇದುವರೆಗೂ ಎಲ್ಲಿಯೂ ಜಮೀನು ನೀಡಿಲ್ಲ. ನಿವೃತ್ತಿ ಹೊಂದಿ ೨೦ ವರ್ಷಗಳೇ ಕಳೆದಿರುವ ರೆಡ್ಡಿ ಯವರು ಅಂಗವಿಕಲರಾಗಿದ್ದಾರೆ ಎಂಬುದು ಗೊತ್ತಿದ್ದರೂ ತಾಲೂಕು ಮತ್ತು ಜಿಲ್ಲಾ ಆಡಳಿತ ಮಾನವೀಯತೆಯನ್ನು ಮರೆತು ಕಚೇರಿಗೆ ಅಲೆದಾಡಿಸುತ್ತಿವೆ.
ಈಗಾಗಲೇ ಹಲವು ತಹಸೀಲ್ದಾರ್‌ಗಳು ಬದಲಾವಣೆಯಾದರೇ ಹೊರತು ಇವರಿಗೆ ಸಲ್ಲಬೇಕಾದ ಭೂಮಿ ಮಂಜೂರಾತಿ ಮಾತ್ರ ದೊರೆತಿಲ್ಲ. ಸ್ಥಳೀಯ ಆದ್ಯತೆಯನ್ನು ಪರಿಗಣಿಸಿ ನ್ಯಾಯಯುತವಾಗಿ ಜಮೀನು ಮಂಜೂರು ಮಾಡಬೇಕಿದ್ದ ತಾಲೂಕು ಆಡಳಿತ ನೆಪಮಾತ್ರವಾಗಿ ಅವರ ಮಂಜೂರಾತಿಯನ್ನು ತಾಲೂಕು ಆಡಳಿತದಿಂದ ಎಸಿ ಕಚೇರಿವರೆಗೂ ರವಾನಿಸಿ ಸುಮ್ಮನಾಗುತ್ತಿದೆ ಎಂದು ನಿವೃತ್ತ ಕರ್ನಲ್ ಶಿವಾನಂದರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ತಮಗೆ ಜಮೀನು ಮಂಜೂರು ಮಾಡುವಂತೆ ನಿವೃತ್ತ ಕರ್ನಲ್ ಮನವಿ ಮಾಡಿದ್ದಾರೆ.