ಚಿಕ್ಕಬಳ್ಳಾಪುರ(ಡಿ.26):  ಡಿ.30 ರಿಂದ ಜನವರಿ 2 ವರೆಗೆ ಮೂರು ದಿನಗಳ ಕಾಲ ನಂದಿಗಿರಿ ಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆರ್.ಲತಾ ಅವರು ಆದೇಶ ಹೊರಡಿಸಿದ್ದಾರೆ.

ಹೌದು, ಹೊಸ ವರ್ಷ ಆಚರಣೆ ಹಿನ್ನಲೆಯಲ್ಲಿ ಪ್ರವಾಸಿಗರು ಹೆಚ್ವಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ‌ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. 

ನಂದಿ ಬೆಟ್ಟಕ್ಕೆ ಒಂದೇ ದಿನ 9 ಸಾವಿರ ಪ್ರವಾಸಿಗರು

ಪ್ರತಿ ವರ್ಷ ಹೊಸ ವರ್ಷಕ್ಕೆ ಒಂದು ದಿನದ ಮಟ್ಟಿಗೆ ನಂದಿಗಿರಿ ಧಾಮಕ್ಕೆ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಮೂರು ದಿನಗಳ ಕಾಲ ನಂದಿಗಿರಿ ಧಾಮ ಪ್ರವೇಶವನ್ನು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಜಿಲ್ಲಾಡಳಿತದ ಈ ಕ್ರಮದಿಂದಾಗಿ ಪ್ರವಾಸಿಗರಿಗೆ ನಿರಾಸೆಯಾಗಿದೆ.