ಜಾಂಬೋಟಿ ಗ್ರಾಮದ ವಾಪ್ತಿಯಲ್ಲಿ 30ಕ್ಕೂ ಅಧಿಕ ಭಾರಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಮುಂದೆಯೂ ಹೋಗದೇ ವಾಪಸ್ಸು ಹೋಗದೇ ಸ್ಥಿತಿಯಲ್ಲಿ ವಾಹನ ಸವಾರರು ಪಡಬಾರದ ಕಷ್ಟಗಳನ್ನ ಎದುರಿಸುತ್ತಿದ್ದಾರೆ.
ಬೆಳಗಾವಿ(ಜು.20): ಹಳೆಯ ಸೇತುವೆ ಹಿನ್ನೆಲೆ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಬೆಳಗಾವಿ-ಚೋರ್ಲಾ ಘಾಟ್ ಮಾರ್ಗದ ಜಾಂಬೋಟಿಯಲ್ಲಿ ಭಾರಿ ಪ್ರಮಾಣದ ವಾಹನಗಳು ಸಾಲುಗಟ್ಟಿ ನಿಂತಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜಾಂಬೋಟಿ ಗ್ರಾಮದ ವಾಪ್ತಿಯಲ್ಲಿ 30ಕ್ಕೂ ಅಧಿಕ ಭಾರಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಮುಂದೆಯೂ ಹೋಗದೇ ವಾಪಸ್ಸು ಹೋಗದೇ ಸ್ಥಿತಿಯಲ್ಲಿ ವಾಹನ ಸವಾರರು ಪಡಬಾರದ ಕಷ್ಟಗಳನ್ನ ಎದುರಿಸುತ್ತಿದ್ದಾರೆ.
ಬೆಳಗಾವಿ: ಮದ್ದು ತಯಾರಿಸುವ ವೇಳೆ ಸ್ಫೋಟ, ಓರ್ವ ಸಜೀವ ದಹನ..!
ಜಾಂಬೋಟಿ ಬಳಿಯ ಕುಸಮಳಿ ಗ್ರಾಮದ ಬಳಿಯ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹಳೆಯ ಸೇತುವೆ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.
ಬೆಳಗಾವಿ ನಗರದಿಂದ ಜಾಂಬೋಟಿ ಚೋರ್ಲಾ ಮಾರ್ಗವಾಗಿ ಗೋವಾ ಕಡೆಗೆ ಸಂಚರಿಸುವ ಭಾರೀ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಚೋರ್ಲಾಗೆ ಹೋಗುವ ಭಾರಿ ವಾಹನಗಳು ಪೀರನವಾಡಿ ಕ್ರಾಸ್ ದಿಂದ ಖಾನಾಪುರ ಮಾರ್ಗವಾಗಿ ಹೋಗಲು ಸೂಚನೆ ನೀಡಲಾಗಿದೆ.