ಪಂಚಮಿಗೆಂದು ಅನುಮತಿ ಇಲ್ಲದೇ 20 ಕುಟುಂಬಗಳು ಮನೆಯಲ್ಲಿ ಮದ್ದು ತಯಾರಿಸುತ್ತಿದ್ದವು. ಈ ವೇಳೆ ಮನೆಯಲ್ಲಿ ಮದ್ದು ಸ್ಫೋಟಗೊಂಡ ಪರಿಣಾಮ ಮಲ್ಲಪ್ಪ ಸುಟ್ಟ ಕರಕಲಾಗಿದ್ದಾನೆ. 

ಬೆಳಗಾವಿ(ಜು.20): ಮದ್ದು ತಯಾರಿಸುವಾಗ ಸ್ಫೋಟವಾದ ಪರಿಣಾಮ ‌ಓರ್ವ ಸಾವನ್ನಪ್ಪಿ, ಇಬ್ಬರಿಗೆ ಗಂಭೀರವಾದ ಗಾಯಗಳಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ‌ಪಾಮಲದಿನ್ನಿಯಲ್ಲಿ ಇಂದು(ಶನಿವಾರ) ನಡೆದಿದೆ. ಸ್ಫೋಟದ ರಭಸಕ್ಕೆ ಮಲ್ಲಪ್ಪ ಸತ್ಯಪ್ಪ ಕಂಕಣವಾಡಿ (38) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಪಂಚಮಿಗೆಂದು ಅನುಮತಿ ಇಲ್ಲದೇ 20 ಕುಟುಂಬಗಳು ಮನೆಯಲ್ಲಿ ಮದ್ದು ತಯಾರಿಸುತ್ತಿದ್ದವು. ಈ ವೇಳೆ ಮನೆಯಲ್ಲಿ ಮದ್ದು ಸ್ಫೋಟಗೊಂಡ ಪರಿಣಾಮ ಮಲ್ಲಪ್ಪ ಸುಟ್ಟ ಕರಕಲಾಗಿದ್ದಾನೆ. 

ನಾನು ಕಂಡ ಅತ್ಯಂತ ಭ್ರಷ್ಟ ಸರ್ಕಾರವಿದು: ಸಂಸದ ರಮೇಶ ಜಿಗಜಿಣಗಿ

ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ಗೋಕಾಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟಪ್ರಭಾ ಪೊಲೀಸ್ ‌ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.