ಈಗ ಲಾಕ್‌ಡೌನ್ ನಡುವೆಯೂ ಮೀನು ಸವಿಯಬಹುದು..!

ಲಾಕ್‌ಡೌನ್‌ ನಡುವೆಯೂ ಕಾರಾವಳಿ ಜನರಿಗೆ ಮೀನು ಸವಿಯಲು ಸಾಧ್ಯವಾಗಲಿದೆ. ಕರಾವಳಿಯಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತವಾಗಿದ್ದು, ಮಾರುಕಟ್ಟೆಯಲ್ಲಿ ಮೀನು ಸಿಗದೆ ಮೀನು ಪ್ರಿಯರು ತೀವ್ರ ನಿರಾಶವಾಗಿದ್ದರು. ಇದೀಗ ರಾಜ್ಯ ಸರ್ಕಾರ ಮೀನು ಪ್ರಿಯರಿಗೆ ಖುಷ್‌ ಮಾಡಿದೆ.

 

Restricted fishing is allowed in Udupi

ಉಡುಪಿ(ಏ.12): ರಾಜ್ಯದಲ್ಲಿ ಲಾಕ್‌ಡೌನ್‌ ಆರಂಭವಾದ ಮೇಲೆ ಕರಾವಳಿಯಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತವಾಗಿದ್ದು, ಮಾರುಕಟ್ಟೆಯಲ್ಲಿ ಮೀನು ಸಿಗದೆ ಮೀನು ಪ್ರಿಯರು ತೀವ್ರ ನಿರಾಶವಾಗಿದ್ದರು. ಇದೀಗ ರಾಜ್ಯ ಸರ್ಕಾರ ಮೀನು ಪ್ರಿಯರಿಗೆ ಖುಷ್‌ ಮಾಡಿದೆ. ಲಾಕ್‌ಡೌನ್‌ ಇನ್ನಷ್ಟುಬಿಗಿಗೊಳಿಸಲಾಗಿದ್ದರೂ, ಕೆಲವು ನಿರ್ಬಂಧಗಳೊಂದಿಗೆ ಮೀನುಗಾರಿಕೆ ಆರಂಭಿಸಲು ಅವಕಾಶ ನೀಡಿದೆ.

ಕರಾವಳಿಯಲ್ಲಿ ಬಹುಜನರ ನಿತ್ಯ ಅಗತ್ಯದ ಆಹಾರವಸ್ತು ಮೀನು. ಜೊತೆಗೆ ಮೀನುಗಾರರ ಜೀವನ ಕೂಡ ಮೀನುಗಾರಿಕೆಯಿಂದಲೇ ನಡೆಯಬೇಕು, ಆದ್ದರಿಂದ ಮುಖ್ಯಮಂತ್ರಿಗಳು ನಾಡದೋಣಿಗಳ ಮೂಲಕ ಮೀನುಗಾರಿಕೆಗೆ ಅವಕಾಶ ನೀಡಿದ್ದಾರೆ ಎಂದು ಉಡುಪಿ - ದಕ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶಪಾಲ ಸುವರ್ಣ ಹೇಳಿದ್ದಾರೆ.

ಆಹಾರ ಕಿಟ್‌ನಲ್ಲಿ ದೊಡ್ಡ ಫೋಟೋ, ಮಾಜಿ ಕೈ ಶಾಸಕನ ವಿರುದ್ಧ ಟೀಕೆ..!

ಒಂದು ದೋಣಿಯಲ್ಲಿ 5 ಮೀನುಗಾರರು ಸಾಮಾಜಿಕ ಅಂತರ ಪಾಲಿಸಿ ಮೀನು ಹಿಡಿಯುವುದಕ್ಕೆ ಅವಕಾಶ ನೀಡಿದ್ದಾರೆ. ಆದರೆ ಬಂದರೊಳಗೆ ಮೀನುಗಾರಿಕಾ ಚಟುವಟಿಕೆಗೆ ಅವಕಾಶವಿಲ್ಲ, ಆದ್ದರಿಂದ ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಗಂಗೊಳ್ಳಿಯವರೆಗೆ ಕೆಲವೊಂದು ಸ್ಥಳಗಳನ್ನು ನಿಗದಿ ಮಾಡಿ ಅಲ್ಲಿ ಸುರಕ್ಷಿತವಾಗಿ ದೋಣಿಗಳಿಂದ ಮೀನು ಇಳಿಸುತ್ತೇವೆ. ಮೀನು ಮಾರುವುದಕ್ಕೂ ಕೆಲವೊಂದು ಮಾರುಕಟ್ಟೆಗಳನ್ನು ನಿಗದಿ ಮಾಡಿದ್ದೇವೆ. ಏಪ್ರಿಲ್‌ 15ರ ಬೆಳಗಿನ ಜಾವದಿಂದ ಮೀನುಗಾರಿಕೆ ಆರಂಭವಾಗಲಿದೆ. ಸರ್ಕಾರದ ಸೂಚನೆಯಂತೆ ಮೀನುಗಾರಿಕೆ ನಡೆಸುತ್ತೇವೆ ಎಂದವರು ಹೇಳಿದ್ದಾರೆ.

2ನೇ ಹಂತದ ಲಾಕ್‌ಡೌನ್ ವಿಭಿನ್ನ: ಕರ್ನಾಟಕದಲ್ಲಿ ಹೇಗಿರಲಿದೆ..?

ಅಭಿಯಾನ ಆರಂಭವಾಗಿತ್ತು: ಮೀನುಗಾರಿಕೆ ಸ್ಥಗಿತಗೊಂಡ ಮೇಲೆ ಮೀನು ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಮೀನು ಬೇಕು, ಮೀನು ಹಿಡಿಯಲು ಅವಕಾಶ ಕೊಡಿ ಎಂದು ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸುವ ಅಭಿಯಾನವನ್ನು ಆರಂಭಿಸಿದ್ದರು.

Latest Videos
Follow Us:
Download App:
  • android
  • ios