ಸಿ.ಟಿ.ರವಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಿ: ಕಾಂಗ್ರೆಸ್‌ ಮುಜರಾಯಿ ಇಲಾಖೆಗೆ ಮನವಿ

ಮಾಂಸ ಸೇವಿಸಿ ದೇವಸ್ಥಾನ ಪ್ರವೇಶಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ಇನ್ನು ಮುಂದೆ ರಾಜ್ಯದ ಯಾವುದೇ ದೇವಸ್ಥಾನಕ್ಕೆ ಅವರಿಗೆ ಪ್ರವೇಶ ಕಲ್ಪಿಸಬಾರದು ಎಂದು ಕಾಂಗ್ರೆಸ್‌ ಮುಖಂಡರು ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

Restrict CT Ravi's temple entry: Congress appeals to Mujarai department

ಬೆಂಗಳೂರು (ಫೆ.28) :

ಮಾಂಸ ಸೇವಿಸಿ ದೇವಸ್ಥಾನ ಪ್ರವೇಶಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ಇನ್ನು ಮುಂದೆ ರಾಜ್ಯದ ಯಾವುದೇ ದೇವಸ್ಥಾನಕ್ಕೆ ಅವರಿಗೆ ಪ್ರವೇಶ ಕಲ್ಪಿಸಬಾರದು ಎಂದು ಕಾಂಗ್ರೆಸ್‌ ಮುಖಂಡರು ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರ ಚಾಮರಾಜಪೇಟೆ(Chamarajpete)ಯಲ್ಲಿ ಮುಜರಾಯಿ ಇಲಾಖೆ(Department of Mujarai) ಆಯುಕ್ತ ಬಸವರಾಜ್‌ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್‌.ಮನೋಹರ್‌ ನೇತೃತ್ವದ ನಿಯೋಗ, ರವಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು. ಇತ್ತೀಚೆಗೆ ರವಿ ಅವರು ಮಾಂಸಹಾರ ಸೇವಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕರೀಬಂಟ ಹನುಮಾನ್‌ ದೇವಸ್ಥಾನ ಪ್ರವೇಶಿಸಿದ್ದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪವಿತ್ರವಾದ ದೇವಸ್ಥಾನವನ್ನು ಕಲುಷಿತಗೊಳಿಸಿದ್ದಾರೆ. ಆದ್ದರಿಂದ ಇವರ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ರವಿ ಅವರಿಗೆ ರಾಜ್ಯದ ಯಾವುದೇ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಬಾರದು. ಈ ಬಗ್ಗೆ ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಖರ್ಗೆಯವ್ರನ್ನ ಬೇಸಗೆ ಬಿಸಿಲಿಗೆ ನಿಲ್ಲಿಸಿ ಕಾಂಗ್ರೆಸ್ಸಿಗರಿಂದ ಅವಮಾನ: ಮೋದಿ...

Read more at: https://kannada.asianetnews.com/latest-news

ಹಿಂದುತ್ವ, ಸಂಸ್ಕೃತಿ ರಕ್ಷಕ ಎಂದು ಹೇಳಿಕೊಳ್ಳುವ ಬಿಜೆಪಿಗೆ ಇದು ಕಾಣುವುದಿಲ್ಲವೇ? ಬಿಜೆಪಿಯ ಮುಖಂಡರು ಬೇರೆಯವರು ಇಂತಹವುಗಳನ್ನು ಮಾಡಿದರೆ ಅದಕ್ಕೆ ದೇವರು, ಭಯ, ಭಕ್ತಿ ಬಗ್ಗೆ ಮಾತನಾಡುತ್ತಾ ಭಗವದ್ಗೀತೆ ನುಡಿಯುತ್ತಾರೆ. ಆದರೆ ತಮ್ಮ ತಪ್ಪುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ  ಸಿ.ಟಿ. ರವಿ ದೇವರ ಸನ್ನಿಧಿಗೆ ಮಾಂಸಾಹಾರವನ್ನು ಸೇವಿಸಿ ಹೋಗಿರುವುದು ತಪ್ಪು ಎಂದಾದರೆ ಬಿಜೆಪಿಯವರು ದೇವಸ್ಥಾನವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿ, ಯಾಕೆ ಪ್ರಾಯಶ್ಚಿತ ಮಾಡಿಕೊಳ್ತಿಲ್ಲಎಂದು ಪ್ರಶ್ನಿಸಿದ್ದಾರೆ.

Latest Videos
Follow Us:
Download App:
  • android
  • ios