ಬೀದರ್: ಲಂಚ ಪಡೆಯುತ್ತಿದ್ದಾಗ ವಸತಿ ಶಾಲೆ ಪ್ರಾಚಾರ್ಯ ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ಡಿವೈಎಸ್‌ಪಿ ಎನ್‌ಎಂ ಓಲೇಕಾರ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್ಸಪೆಕ್ಟರ್ ವಾಹೀದ್ ಹುಸೇನ್ ಕೋತ್ವಾಲ್ ಹಾಗೂ ಬಾಬಾ ಸಾಹೇಬ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ತಂಡವು 25 ಸಾವಿರ ರು. ಲಂಚದ ಹಣ ಪಡೆಯುತ್ತಿದ್ದ ಪ್ರಾಚಾರ್ಯ ಶಂಕರ ಜೋಗಿ
ಬೀದರ್(ಆ.04): ವಿದ್ಯಾರ್ಥಿಯೋರ್ವನ ಪ್ರವೇಶಕ್ಕಾಗಿ ಲಂಚ ಸ್ವೀಕರಿಸುತ್ತಿದ್ದ ತಾಲೂಕಿನ ಮುಡಬಿ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಚಾರ್ಯ ಶಂಕರ ಜೋಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಬಸವಕಲ್ಯಾಣ ತಾಲೂಕಿನ ಯಲ್ಲದಗುಂಡಿ ಗ್ರಾಮದ ನಾಗನಾಥ ಪೂಜಾರಿ ಎಂಬುವವರ ಪುತ್ರನನ್ನು 6ನೇ ತರಗತಿಗೆ ಪ್ರವೇಶ ಪಡೆಯಲು 40ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಾಚಾರ್ಯ ಶಂಕರ ಜೋಗಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಅದರಂತೆ ಗುರುವಾರ ಲೋಕಾಯುಕ್ತ ಡಿವೈಎಸ್‌ಪಿ ಎನ್‌ಎಂ ಓಲೇಕಾರ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್ಸಪೆಕ್ಟರ್ ವಾಹೀದ್ ಹುಸೇನ್ ಕೋತ್ವಾಲ್ ಹಾಗೂ ಬಾಬಾ ಸಾಹೇಬ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ತಂಡವು 25 ಸಾವಿರ ರು. ಲಂಚದ ಹಣ ಪಡೆಯುವಾಗ ಪ್ರಾಚಾರ್ಯರನ್ನು ವಶಕ್ಕೆ ಪಡೆದು ನ್ಯಾಯಾಂಗದ ಬಂಧನಕ್ಕೆ ನೀಡಿರುವ ಘಟನೆ ನಡೆದಿದೆ.
ಬೀದರ್: ಖರ್ಗೆ, ಖಂಡ್ರೆ ವಿರುದ್ಧ ವರ್ಣಭೇದದ ಮಾತು, ಶಾಸಕ ಅರಳಿ ಖಂಡನೀಯ
ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಕಿಶೋರ ಗಾಜರೆ, ಶಾಂತಕುಮಾರ ಹಾಗೂ ಕುಶಾಲ್ ಸೇರಿದಂತೆ ಮತ್ತಿತರು ಅಧಿಕಾರಿ, ಸಿಬ್ಬಂದಿಗಳಿದ್ದರು.