ಬೆಂಗಳೂರು(ಜು.21): ಕೊರೋನಾ ಸೋಂಕು ವ್ಯಾಪಕರವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೃತ ದೇಹಗಳ ಅಂತ್ಯಕ್ರಿಯೆಗೆ ಸಾರ್ವಜನಿಕ ಸ್ಮಶಾನಗಳಿಗೆ ಅಗತ್ಯವಾದ ಸರ್ಕಾರಿ ಜಮೀನುಗಳನ್ನು ಕಾಯ್ದಿರಿಸುವಂತೆ ಶಾಸಕ ಜಮೀರ್‌ ಅಹ್ಮದ್‌ಖಾನ್‌ ಒತ್ತಾಯಿಸಿದ್ದಾರೆ.

ಸೋಮವಾರ ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು. ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಸರ್ಕಾರ ಈಗಾಗಲೇ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಆನೇಕಲ್‌, ಯಲಹಂಕಕ್ಕೆ ಸೇರಿದ ಒಟ್ಟು 10 ಗ್ರಾಮಗಳಲ್ಲಿ 35.18 ಎಕರೆ ಸರ್ಕಾರಿ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಕಾಯ್ದಿರಿಸಿರುವುದು ಸಾಗತಾರ್ಹ ಕ್ರಮ ಎಂದು ಶ್ಲಾಘಿಘಿಸಿದ್ದಾರೆ.

ಶಾಲೆ, ಕಾಲೇಜು ಆರಂಭಿಸಿ: ಏಮ್ಸ್‌ ತಜ್ಞರಿಂದ ಶಿಫಾರಸು!

ಆದರೆ, ಸೋಂಕಿತರ ಪ್ರಮಾಣ ಪ್ರತಿದಿನ ಹೆಚ್ಚುತ್ತಿದೆ. ಹಾಗೆಯೇ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಲು ಈಗಾಗಲೇ ನಿಗದಿಪಡಿಸಿರುವ ಸರ್ಕಾರಿ ಜಮೀನುಗಳಲ್ಲಿ ಸಾಧ್ಯವಾಗುತ್ತಿಲ್ಲ. ತುರ್ತಾಗಿ ಸರ್ಕಾರಿ ಸ್ಮಶಾನಕ್ಕೆ ಜಮೀನುಗಳನ್ನು ನೀಡಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.