ರೋಚಕ RESCUE OPERATION: ಚಾಲಕ ಬಚಾವ್; ಕ್ಲೀನರ್ ನಾಪತ್ತೆ!
- ರೋಚಕ ರೆಸ್ಕ್ಯೂ ಆಪರೇಷನಲ್ಲಿ ಮಿಶ್ರಫಲ
- ಚಾಲಕನನ್ನು ರಕ್ಷಣೆ ಮಾಡಿದ್ರೇ ಕ್ಲೀನರ್ ಪತ್ತೆಯಾಗಲಿಲ್ಲ
- ರಾರಾವಿ ಸೇತುವೆಯಿಂದ ಮುಗುಚಿ ಬಿದ್ದಿದ್ದ ಭತ್ತ ತುಂಬಿದ ಲಾರಿ
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಆ.2) : ಅದೊಂದು ರೋಚಕ ಕಾರ್ಯಚರಣೆ ಆದ್ರೆ ಆ ಕಾರ್ಯಾಚರಣೆಯಲ್ಲಿ ಸಿರಗುಪ್ಪ ತಾಲೂಕು ಆಡಳಿತಕ್ಕೆ ಸಿಕ್ಕಿದ್ದು, ಮಾತ್ರ ಮಿಶ್ರಫಲ.. ಹೌದು, ಬಳ್ಳಾರಿ ಜಿಲ್ಲೆಯಾದ್ಯಾಂತ ಕಳೆದ ಎರಡು ದಿನಗಳಿಂದ ರಾತ್ರಿಯ ವೇಳೆ ಸುರಿದ ಮಳೆಯ ಪರಿಣಾಮ ನದಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಿರಗುಪ್ಪ ತಾಲೂಕಿನ ವ್ಯಾಪ್ತಿಯಲ್ಲಿ ರಾರಾವಿ ಗ್ರಾಮದ ಬಳಿ ಬರುವ ಹಗರಿ ನದಿಯ ಲಾರಿಯೊಂದು ಉರುಳಿಬಿದ್ದ ಪರಿಣಾಮ ಚಾಲಕ ಮತ್ತು ಕ್ಲೀನರ್ ರಾತ್ರಿಯೀಡಿ ಮುಗುಚಿಬಿದ್ದ ಲಾರಿಯ ಮೇಲ್ಬಾಗದಲ್ಲಿ ರಕ್ಷಣೆಗಾಗಿ ಕಾಯುತ್ತಾ ಕುಳಿತಿದ್ರು. ರಾತ್ರಿಯೀಡಿ ಕಾರ್ಯಚರಣೆ ನಡೆಸಿದ್ರು, ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಣೆ ಮಾಡೋಕೆ ಆಗಲಿಲ್ಲ. ಆದರೆ, ಬೆಳಗ್ಗೆ ಆರು ಗಂಟೆಗೆ ಯಾದಗಿರಿಯಿಂದ ಬಂದ ಬೋಟ್‌ವೊಂದು ನದಿಗಿಳಿದು ಚಾಲಕನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಯ್ತು. ಆದರೆ ಕ್ಲೀನರ್ ಮಾತ್ರ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ರು. ಸಂಜೆವರೆಗೂ ಹುಡುಕಾಡಿದ್ರು, ಕ್ಲೀನರ್ ಮೃತದೇಹ ಸಿಗಲೇ ಇಲ್ಲ.
ಬಳ್ಳಾರಿ: ಕಲುಷಿತ ನೀರು ಕುಡಿದು 10 ವರ್ಷದ ಬಾಲಕಿ ಸಾವು
ರಾರಾವಿ ಬಳಿ ಹಗರಿ ನದಿಯಲ್ಲಿ ಸಿಲುಕಿದ ಲಾರಿ :
ಸಿರಗುಪ್ಪ(Siraguppa)ದಿಂದ ಭತ್ತ ತುಂಬಿಕೊಂಡ ಲಾರಿಯೊಂದು ನಿನ್ನೆ ಸಂಜೆ ಆಂಧ್ರ ಕಡೆ ಹೊರಟಿತ್ತು. ರಾರಾವಿ ಬಳಿ ಕರ್ನಾಟಕ(Karnataka) ಮತ್ತು ಆಂಧ್ರ(Andhrapradesh) ಸಂಪರ್ಕ ಕಲ್ಪಿಸೋ ಸೇತುವೆ ಕಾಮಗಾರಿ ನಡೆದಿದೆ. ಹೀಗಾಗಿ ಕೆಳಗಡೆ ಇರೋ ತಾತ್ಕಾಲಿಕವಾಗಿ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡುತ್ತಿವೆ. ಈ ಲಾರಿಯೂ ಕೂಡ ತಾತ್ಕಾಲಿಕ ಸೇತುವೆ ಮೇಲೆ ನೀರು ಇದ್ರೂ ಅದನ್ನು ಲೆಕ್ಕಿಸದೇ ಅದರ ಮೇಲೆಯೂ ಚಲಿಸುತ್ತಿದ್ದು, ನೀರಿನ ರಭಸಕ್ಕೆ ಮತ್ತು ಮಂದ ಬೆಳಕಿನ ಕಾರಣದಿಂದ ನಿಯಂತ್ರಣ ತಪ್ಪಿದ ಲಾರಿ ನದಿಗೆ ಉರುಳಿ ಬಿದ್ದಿದೆ.
ಅಷ್ಟೊತ್ತಿಗಾಗಲೇ ಕತ್ತಲಾದ ಹಿನ್ನೆಲೆ ರಕ್ಷಣೆಗಾಗಿ ಇಬ್ಬರು ಕೂಗಾಡಿ ಕೊಂಡಿದ್ದಾರೆ. ತಡರಾತ್ರಿ ಇಬ್ಬರ ರಕ್ಷಣೆಗಾಗಿ ಹರಸಾಹಸಪಟ್ಟರೂ ರಕ್ಷಣೆ ಮಾಡಲಾಗಲಿಲ್ಲ. ಬಳ್ಳಾರಿ ಜಿಲ್ಲಾಡಳಿತದದಿಂದ ತಂದಿರೋ ಅಗ್ನಿಶಾಮಕ ದಳದ ರೆಸ್ಕ್ಯೂ ತಂಡದ ಬೋಟ್ ನಲ್ಲಿ ಎಷ್ಟೇ ಪ್ರಯತ್ನಿಸಿದ್ರೂ. ನೀರಿನ ರಭಸಕ್ಕೆ ಬೋಟ್ ನೀರಿನಲ್ಲಿ ಹೋಗಲಾಗಲಿಲ್ಲ. ನಂತರ ಪಂಚರ್ ಆಗೋ ಮೂಲಕ ರಾತ್ರಿ ಕಾರ್ಯಚರಣೆ ಸ್ಥಗಿತಗೊಳಿಸಲಾಯಿತು.
ರಾತ್ರಿಯಿಡೀ ಉಕ್ಕಿ ಹರಿಯುತ್ತಿರೋ ನದಿಯಲ್ಲಿ ಲಾರಿಯ ಮೇಲೆಯೇ ನಿಂತು ಕಾಲ ಕಳೆದ ಚಾಲಕ ಕ್ಲೀನರ್ ಪರಿದಾಡಿದ್ರೂ. ಸ್ಥಳಕ್ಕೆ ತಾಲೂಕು ಅಡಳಿತದ ಜೊತೆ ಸ್ಥಳೀಯ ಶಾಸಕ ಸೋಮಲಿಂಗಪ್ಪ ಮುಕ್ಕಾಂ ಹೂಡೋ ಮೂಲಕ ಕಾರ್ಯಚರಣೆಗ ಸಾಥ್ ನೀಡಿದ್ರು.
ಬಳ್ಳಾರಿಯಲ್ಲಿ ಅಕಾಲಿಕ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ!
ಯಾದಗಿರಿಯಿಂದ ಬಂದ ಬೋಟ್:
ರಾತ್ರಿಯಲ್ಲ ಪ್ರಯತ್ನ ಪಟ್ಟ ಬಳಿಕ ಬೆಳಗ್ಗೆ ಯಾದಗಿರಿ ಜಿಲ್ಲೆಯಿಂದ ರೆಸ್ಕ್ಯೂ ಬೋಟ್ ತರಿಸಲಾಯಿತು. ಬೋಟ್ ಬಂದ ಬಳಿಕ ಗಿಡಗಂಟೆಯ ಮಧ್ಯೆ ಸಿಲುಕಿಕೊಂಡಿದ್ದ ಚಾಲಕ ಚಾಲಕ ಅಹ್ಮದ್ ರಕ್ಷಣೆ ಮಾಡಲಾಯಿತು. ಆದ್ರೇ, ಲಾರಿ ಕ್ಲೀನರ್ ಹುಸೇನ್. ಅವರನ್ನು ಎಷ್ಟೇ ಹುಡುಕಿದ್ರೂ ಸಿಗಲಿಲ್ಲ. ರಾತ್ರಿಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿರಬಹುದೆಂದು ಹೇಳಲಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿಕೊಂಡು ಪರದಾಡಿ ಹೊರಗೆ ಬಂದ ಚಾಲಕ ತನ್ನ ಜೀವ ಮರಳಿ ಬಂತು ಹೊರಗೆ ಕರೆತರಲು ಸಹಕಾರ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ರು.
ಆರಂಭದಲ್ಲಿ ಸೇತುವೆ ಮೇಲೆ ಲಾರಿ ಹೋಗಬೇಕಾದ್ರೇ, ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರು ಇರಲಿಲ್ಲ. ಕೆಲವರು ನಡೆದುಕೊಂಡೇ ಹೊಗುತ್ತಿದ್ರು. ಆ ಧೈರ್ಯದ ಮೇಲೆ ನಾನು ಕೂಡ ಲಾರಿಯನ್ನು ತೆಗೆದುಕೊಂಡು ಹೋದೆ ಆದರೆ, ದಿಢೀರನೆ ನೀರು ಹೆಚ್ಚಾದಂತೆಲ್ಲ ಲಾರಿಯೂ ನೀರಿನ ಸೆಳೆತಕ್ಕೆ ಕೊಚ್ಚಿ ಹೋಯ್ತು ಎಂದರು.