Asianet Suvarna News Asianet Suvarna News

ಮಂಗಳೂರಿನ ಯಕ್ಷಗಾನ, ಆಹಾರ, ಸಮುದ್ರ ಸೂಪರ್‌

ಮಂಗಳೂರಿನ ಜನರು ಸುಸಂಸ್ಕೃತರು, ಸಭ್ಯಸ್ಥರು. ಇಲ್ಲಿನ ಸಂಸ್ಕೃತಿ, ಜಾನಪದ, ಸಂಗೀತ ಮೇಲಾಗಿ ಇಲ್ಲಿನ ಆಹಾರ, ತಿಂಡಿ ತಿನಿಸು ತುಂಬಾ ಹಿಡಿಸಿವೆ ಎಂದು ಉತ್ತರಾಖಂಡದಿಂದ ಆಗಮಿಸಿದ ನೆಹರೂ ಯುವ ಕೇಂದ್ರದ ಪ್ರತಿನಿಧಿ ಅನೂಪ್‌ ಹೇಳಿದ್ದಾರೆ.

represent of Nehru Yuva Kendra praises mangalore food yakshagana and beach
Author
Bangalore, First Published Jan 28, 2020, 2:01 PM IST
  • Facebook
  • Twitter
  • Whatsapp

ಮಂಗಳೂರು(ಜ.28): ‘‘ಮಂಗಳೂರಿನ ಜನರು ಸುಸಂಸ್ಕೃತರು, ಸಭ್ಯಸ್ಥರು. ಇಲ್ಲಿನ ಸಂಸ್ಕೃತಿ, ಜಾನಪದ, ಸಂಗೀತ ಮೇಲಾಗಿ ಇಲ್ಲಿನ ಆಹಾರ, ತಿಂಡಿ ತಿನಿಸು ತುಂಬಾ ಹಿಡಿಸಿವೆ. ಇಲ್ಲಿಗೆ ಬಂದು ನಾವು ಬಹಳಷ್ಟುಕಲಿತಿದ್ದೇವೆ. ಕನ್ನಡವನ್ನೂ ಅಲ್ಪಸ್ವಲ್ಪ ಕಲಿತಿದ್ದೇವೆ’’. ಉತ್ತರಾಖಂಡದಿಂದ ಆಗಮಿಸಿದ ನೆಹರೂ ಯುವ ಕೇಂದ್ರದ ಪ್ರತಿನಿಧಿ ಅನೂಪ್‌ ಹೇಳಿದ್ದು ಹೀಗೆ.

ಭಾರತ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೆನೆಪೋಯಾ ವಿವಿ ಸಹಯೋಗದಲ್ಲಿ ‘ಏಕ್‌ ಭಾರತ್‌ ಶ್ರೇಷ್ಠ್‌ ಭಾರತ್‌’ ಕಾರ್ಯಕ್ರಮದಡಿ ಉತ್ತರಾಖಂಡದ 50 ಮಂದಿಯ ತಂಡ ಸಾಂಪ್ರದಾಯಿಕ ಉಡುಗೆಯೊಂದಿಗೆ ಮಂಗಳೂರಿಗೆ ಆಗಮಿಸಿತ್ತು. ಈ ತಂಡದ ಸದಸ್ಯ ಅನೂಪ್‌ ಸೇರಿದಂತೆ ಅನೇಕರು ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಮುಸ್ಲಿಮರಿಗೆ ತೊಂದರೆ ಆದರೆ ಬಿಜೆಪಿ ಹೋರಾಟ: ರಕ್ಷಣಾ ಸಚಿವ ರಾಜನಾಥ್ ಅಭಯ!

ಕರ್ನಾಟಕದ ನಮ್ಮ ಪ್ರಯಾಣ ತುಂಬ ಇಷ್ಟವಾಗಿದೆ. ಸಂಗೀತದಲ್ಲಿ ಆಸಕ್ತಿಯಿದ್ದ ನಾನು ಕರ್ನಾಟಕದ ಜಾನಪದ ಸಂಗೀತವನ್ನೂ ತುಸು ಮಟ್ಟಿಗೆ ಕಲಿತಿದ್ದೇನೆ ಎಂದ ಅನೂಪ್‌, ‘ಸೋಜಿಗದ ಸೂಜಿಮಲ್ಲಿಗೆ’ ಎಂಬ ಹಾಡನ್ನು ರಾಗಬದ್ಧವಾಗಿ ಹಾಡಿ ಗಮನ ಸೆಳೆದಿದ್ದಾರೆ.

ಇಡ್ಲಿ ವಡೆ ಮಸ್‌್ತ: ಕರ್ನಾಟಕಕ್ಕೆ ಬರುವಾಗ ಇಲ್ಲಿನ ಆಹಾರ ಪದ್ಧತಿಗಳ ಬಗ್ಗೆ ಹಿಂಜರಿಕೆಯಿತ್ತು. ಆದರೆ ಮಂಗಳೂರಿನ ಇಡ್ಲಿ, ವಡೆ ಉಪಮಾ ತುಂಬಾ ಹಿಡಿಸಿದೆ. ಇಲ್ಲಿನ ಯಕ್ಷಗಾನವೂ ಆಸಕ್ತಿ ಕೆರಳಿಸಿದೆ ಎಂದು ಅವರು ಹೇಳಿದರು. ಉಳಿದ ಅನೇಕ ಪ್ರತಿನಿಧಿಗಳು ತಾವು ಜೀವನದಲ್ಲೇ ಮೊತ್ತ ಮೊದಲ ಬಾರಿಗೆ ಸಮುದ್ರ ನೋಡಿದ್ದಾಗಿ ಹೇಳಿಕೊಂಡರು. ಇನ್ನೋರ್ವ ಸದಸ್ಯೆ ಜ್ಯೋತಿ ಎಂಬವರು ಅಲ್ಲಿನ ಉಡುಗೆಯ ಮಹತ್ವವನ್ನು ತಿಳಿಸಿದರು. ಇಲ್ಲಿನ ಯಕ್ಷಗಾನ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದೇವಳ, ಚರ್ಚ್, ಮಸೀದಿಗೆ ಭೇಟಿ:

ನೆಹರು ಯುವ ಕೇಂದ್ರದ ಪ್ರತಿನಿಧಿ ಜಿ.ಎಸ್‌. ಹಿರೇಮಠ್‌ ಮತ್ತು ಎನ್‌ವೈಕೆ ಜಿಲ್ಲಾ ಯುವ ಸಂಯೋಜಕ ರಘುವೀರ್‌ ಸೂಟರ್‌ಪೇಟೆ ಮಾತನಾಡಿ, ಉತ್ತರಾಖಂಡದ 50 ಮಂದಿ ಪ್ರತಿನಿಧಿಗಳು ದ.ಕ. ಜಿಲ್ಲೆಯ ಉಳ್ಳಾಲ ದರ್ಗಾ, ಕುದ್ರೋಳಿ ದೇವಾಲಯ, ಅತ್ತೂರು ಚಚ್‌ರ್‍, ಮೂಡುಬಿದಿರೆ ಸಾವಿರ ಕಂಬದ ಬಸದಿ, ಪ್ರಶಸ್ತಿ ವಿಜೇತ ಯುವಕ ಮಂಡಲಗಳು, ಸಂತ ಅಲೋಶಿಯಸ್‌ ಚಾಪೆಲ್‌, ಕಾರ್ಕಳದ ಅನಾಥಾಶ್ರಮಕ್ಕೆ ಭೇಟಿ ನೀಡಿ ಇಲ್ಲಿನ ಕಲೆ ಸಂಸ್ಕೃತಿಗಳನ್ನು ತಿಳಿದುಕೊಂಡಿದ್ದಾರೆ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್‌ ಹಾಗೂ ಶಾಸಕ ಯು.ಟಿ. ಖಾದರ್‌ ಅವರನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ ಎಂದರು.

ಕರ್ನಾಟಕ ಮತ್ತು ಉತ್ತರಾಖಂಡ್‌ ರಾಜ್ಯಗಳ ಬಾಂಧವ್ಯವನ್ನು ಬಲಪಡಿಸುವ ಮತ್ತು ಇಲ್ಲಿನ ಸಂಸ್ಕೃತಿ, ಭಾಷೆ, ಜೀವನ ಶೈಲಿ, ಶೈಕ್ಷಿಣಿಕ ಕ್ಷೇತ್ರ ಇತ್ಯಾದಿ ವಿಷಯಗಳನ್ನು ಅರಿತು ಕಲಿಯುವ ಕಾರ್ಯಕ್ರಮ ಇದಾಗಿದೆ. ಕರ್ನಾಟಕ ರಾಜ್ಯಕ್ಕೆ 15 ದಿನಗಳ ಈ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಈ ತಂಡ ಆಗಮಿಸಿದೆ. ಆರಂಭದಲ್ಲಿ ಬೆಂಗಳೂರಿನಲ್ಲಿ ಪ್ರಯಾಣ ನಡೆಸಿ ಅಲ್ಲಿಂದ ಮಂಗಳೂರಿಗೆ ಬಂದಿದೆ. ಜ.24ರಂದು ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ ಶಾಸಕ ಯು.ಟಿ.ಖಾದರ್‌ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆದು ತಂಡದ ಜಿಲ್ಲಾ ಭೇಟಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಇಲ್ಲಿಂದ ಸೋಮವಾರ ರಾತ್ರಿ ಮೈಸೂರಿಗೆ ಪ್ರಯಾಣ ಬೆಳೆಸಿದೆ. ಫೆ.3ರಂದು ಮರಳಿ ಉತ್ತರಾಖಂಡಕ್ಕೆ ತೆರಳಲಿದೆ.

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್‌ ಷಾ, ಯೆನೆಪೋಯ ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್‌ ಕಾರ್ಯಕ್ರಮಗಳ ಸಂಯೋಜಕಿ ಡಾ.ಅಶ್ವಿನಿ ಶೆಟ್ಟಿಪ್ರಾಸ್ತಾವಿಕವಾಗಿ ಮಾತನಾಡಿದರು.

ಅನಾಥಾಶ್ರಮಕ್ಕೆ ಧನಸಹಾಯ

ಕಾರ್ಕಳಕ್ಕೆ ಭೇಟಿ ನೀಡಿದ್ದ ವೇಳೆ ಹಿರಿಯರಿಗೆ ಆಶ್ರಯ ನೀಡುವ ಅನಾಥಾಶ್ರಮಕ್ಕೂ ಉತ್ತರಾಖಂಡದ ಸದಸ್ಯರು ತೆರಳಿದ್ದರು. ಅಲ್ಲಿನ ಆಶ್ರಮವಾಸಿಗಳನ್ನು ನೋಡಿ ಧನಸಹಾಯ ಮಾಡುವ ನಿರ್ಧಾರ ಮಾಡಿದರು. ಅದರಂತೆ ತಮ್ಮ ಕೈಲಾದಷ್ಟುಸಹಾಯ ಮಾಡಿದ್ದಾರೆ ಎಂದು ಜಿ.ಎಸ್‌. ಹಿರೇಮಠ್‌ ತಿಳಿಸಿದರು.

Follow Us:
Download App:
  • android
  • ios