ಬುಧವಾರ ಬೆಳಗ್ಗೆ ಕಚೇರಿ ಕಡೆಗೆ ಧಾವಿಸುತ್ತಿದ್ದ ಬೆಂಗಳೂರು ಮಂದಿ ಒಂದು ಕ್ಷಣ ಆತಂಕಕ್ಕೆ ಗುರಿಯಾಗಿದ್ದರು. ಮೆಟ್ರೋ ಪಿಲ್ಲರ್ ಒಂದರಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಹರಿದಾಡಿತ್ತು.
ಬೆಂಗಳೂರು[ಡಿ.12] ಬುಧವಾರ ಬೆಳಗ್ಗೆ ಒಂದು ಆತಂಕಕಾರಿ ಸುದ್ದಿ ಬೆಂಗಳೂರಿಗರನ್ನು ಭಯ ಬೀಳಿಸಿತ್ತು. ಮೆಟ್ರೋ ಪಿಲ್ಲರ್ ಒಂದರಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂಬ ಸುದ್ದಿ ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿತ್ತು.
ಆದರೆ ಬಿರುಕು ಕಾಣಿಸಿಕೊಂಡಿದೆ ಎನ್ನಲಾದ ಟ್ರಿನಿಟಿ ವೃತ್ತದಲ್ಲಿ ಇರೋ ಪಿಲ್ಲರ್ ನಲ್ಲಿ ಯಾವುದೇ ದೋಷ ಇಲ್ಲ ಎಂದು ಮೆಟ್ರೋ ನಿಗಮ ಸ್ಪಷ್ಟನೆ ನೀಡಿದೆ. ಪಿಲ್ಲರ್ ಕುಸಿಯುವ ಆತಂಕವಿಲ್ಲ. ಪ್ರಯಾಣಿಕರು ಗಾಬರಿಪಡಬೇಕಾಗಿಲ್ಲ ಎಂದು ನಿಗಮ ತಿಳಿಸಿದೆ.
"
ಗಂಟೆಗೆ 45 ಕಿಲೋಮೀಟರ್ ವೇಗದಲ್ಲಿ ಓಡಾಡುತ್ತಿದ್ದ ಮೆಟ್ರೋ ಟ್ರಿನಿಟಿ ಭಾಗದಲ್ಲಿ ಗಂಟೆಗೆ 20 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ.
ಮಳೆ ನೀರು ಸರಾಗವಾಗಿ ಹರಿದು ಹೋಗಲು ಅವಕಾಶ ಮಾಡಿಕೊಟ್ಟಿರುವ ಹನಿ ಕೂಮ್ ವ್ಯವಸ್ಥಿತವಾಗಿ ಲಾಕ್ ಆಗಿರಲಿಲ್ಲ. ಈಗ ಅದನ್ನು ಸರಿ ಮಾಡಲಾಗುತ್ತಿದೆ. ಯಾರೂ ಆತಂಕ ಪಡಬೇಕಾಗಿಲ್ಲ ಎಂದು ನಿಗಮ ತಿಳಿಸಿದೆ.
Scroll to load tweet…
Scroll to load tweet…
ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ:
"
