Asianet Suvarna News Asianet Suvarna News

ಆರೋಪಿಗಳನ್ನು ಕುಮಾರಸ್ವಾಮಿ ಮನೆಯಲ್ಲಿಡ್ಬೇಕಾ: ರೇಣು ವ್ಯಂಗ್ಯ

ರಾಮನಗರಕ್ಕೆ ಕೊರೋನಾ ಸೋಂಕು ಹರಡಲು ಸರ್ಕಾರವೇ ಕಾರಣವೆಂದು ಆರೋಪಿಸಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮನೆಯಲ್ಲಿ ಪಾದರಾಯನಪುರದ ಆರೋಪಿಗಳನ್ನು ಇಡಬೇಕಿತ್ತಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

 

Renukacharya taunts hd kumaraswamy
Author
Bangalore, First Published Apr 25, 2020, 11:57 AM IST

ದಾವಣಗೆರೆ(ಏ.25): ರಾಮನಗರಕ್ಕೆ ಕೊರೋನಾ ಸೋಂಕು ಹರಡಲು ಸರ್ಕಾರವೇ ಕಾರಣವೆಂದು ಆರೋಪಿಸಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮನೆಯಲ್ಲಿ ಪಾದರಾಯನಪುರದ ಆರೋಪಿಗಳನ್ನು ಇಡಬೇಕಿತ್ತಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರಕ್ಕೆ ಕೊರೋನಾ ವೈರಸ್‌ ಹರಡಲು ರಾಜ್ಯ ಸರ್ಕಾರವೇ ಕಾರಣವೆನ್ನುವ ಮೂಲಕ ಎಲ್ಲದರಲ್ಲೂ ರಾಜಕೀಯ ಮಾಡುತ್ತಿರುವುದಂತೂ ಒಳ್ಳೆಯದಲ್ಲ. ಕುಮಾರಸ್ವಾಮಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸೂಕ್ತ ನಿರ್ಧಾರವನ್ನೇ ಕೈಗೊಂಡಿದೆ ಎಂದರು.

ಕೊಡಗಿನ ವಿವಿಧೆಡೆ ಬೆಳಗಿನ ಜಾವ ಭಾರಿ ಮಳೆ, ಇಲ್ಲಿವೆ ಫೋಟೋಸ್

ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ, ರಾಮನಗರ ಜೈಲಿಗೆ ತಳ್ಳಲಾಗಿದೆ. ಜೈಲಿಗೆ ಹೋದ ನಂತರವಷ್ಟೇ ಇಬ್ಬರು ಆರೋಪಿಗಳಿಗೆ ಕೊರೋನಾ ಸೋಂಕು ಇರುವುದು ಗೊತ್ತಾಗಿದೆ. ಇದೆಲ್ಲಾ ಗೊತ್ತಿದ್ದರೂ ಕುಮಾರಸ್ವಾಮಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಜಮೀರ್‌ ಕುಮ್ಮಕ್ಕಿನಿಂದಲೇ ಘಟನೆ ನಡೆದಿದೆ

ಜಮೀರ್‌ ಅಹಮ್ಮದ್‌ನಂತಹ ಕಿಡಿಗೇಡಿ ಶಾಸಕನ ವರ್ತನೆ, ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಬೆಂಗಳೂರಿನ ಪಾದರಾಯನಪುರ ಘಟನೆಗೆ ಜಮೀರ್‌ ನೇರ ಕಾರಣವಾಗಿದ್ದಾರೆ. ಆತ ನೀಡಿದ ಕುಮ್ಮಕ್ಕಿನಿಂದಲೇ ಘಟನೆ ನಡೆದಿದೆ. ಕೊರೋನಾ ತಡೆ ಗೆ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ, ದೌರ್ಜನ್ಯ ಯಾರೇ ಎಸಗಿದ್ದರೂ ಅದು ಅಕ್ಷಮ್ಯ ಅಪರಾಧ ಎಂದು ಅವರು ತಿಳಿಸಿದರು.

ಲಾಕ್‌ಡೌನ್‌ ಎಫೆಕ್ಟ್‌: ವಿಶ್ವ ಮಧ್ವ ಪರಿಷತ್‌ನಿಂದ ಆನ್‌ಲೈನ್‌ ಧಾರ್ಮಿಕ ಶಿಬಿರ

ಸಾರಾಯಿ ಪಾಳ್ಯದ ಘಟನೆ ಖಂಡಿಸುವ ಬದಲಿಗೆ, ಧರ್ಮ, ಪೌರತ್ವ ವಿಷಯ ಹೇಳುತ್ತಾ ಬಂದರು. ಅಲ್ಪ ವೇತನಕ್ಕೆ ದುಡಿಯುವ ಆಶಾ ಕಾರ್ಯಕರ್ತೆಯರ ಆತ್ಮಸ್ಥೈರ್ಯ ಹೆಚ್ಚಿಸುವ ಬದಲು, ಯಾರನ್ನು ಕೇಳಿ ಬಂದರು ಎಂಬುದಾಗಿ ಜಮೀರ್‌ ಹೇಳಿದ್ದು ಸರಿಯಲ್ಲ. ಅದೇನು ಜಮೀರ್‌ನ ಮಾವನ ಮನೆಯಾ? ನಿನ್ನ ಮಾತನ್ನು ಕೇಳಿ ಬರಬೇಕಿತ್ತಾ ಎಂದು ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಜನರ ನಿದ್ದೆ​ಗೆ​ಡಿ​ಸಿದ ಕೊರೋನಾ ಸೋಂಕು: ಎಲ್ಲೆಡೆ ತೀವ್ರ ಕಟ್ಟೆ​ಚ್ಚರ

ಸಿಎಂ, ಗೃಹ ಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಮೊನ್ನೆಯಷ್ಟೇ ಮುಖ್ಯಮಂತ್ರಿಗಳು ಆಲೋಚನೆ ಮಾಡುತ್ತಾರೆ. ಕಠಿಣ ಹೇಳಿಕೆ ಸಹ ನೀಡಿದ್ದಾರೆ. ನಮ್ಮ ಸರ್ಕಾರ ಯಾರು ಎಷ್ಟವರೇ ಆಗಿದ್ದರೂ ಕಠಿಣ ಶಿಕ್ಷೆ ವಿಧಿಸುತ್ತದೆ. ಕಾದು ನೋಡೋಣ. ನಮ್ಮ ಸರ್ಕಾರದಲ್ಲಿ ಎಲ್ಲರಿಗೂ ಒಂದೇ ನ್ಯಾಯ. ಕಾದು ನೋಡಿ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

Follow Us:
Download App:
  • android
  • ios