Asianet Suvarna News Asianet Suvarna News

Belagavi: ಮಗಳ ಹುಟ್ಟುಹಬ್ಬಕ್ಕೆ ಸುವರ್ಣಸೌಧವನ್ನು ಬಾಡಿಗೆ ಕೊಡಿ: ವಿಚಿತ್ರ ಮನವಿ ಸಲ್ಲಿಕೆ

ಕರ್ನಾಟಕದ ಸುವರ್ಣಸೌಧವು ಅಧಿವೇಶನದ ನಡೆಯದೇ ಖಾಲಿ ಇರುವ ಸಮಯದಲ್ಲಿ ನನ್ನ ಮಗಳ 6ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಬಾಡಿಗೆ ನೀಡುವಂತೆ ವಕೀಲರೊಬ್ಬರು ಮನವಿ ಮಾಡಿದ್ದಾರೆ.

Rent Suvarna Soudha for daughter birthday Strange request submitted sat
Author
First Published Dec 22, 2022, 8:03 PM IST

ಬೆಳಗಾವಿ (ಡಿ.22): ಕರ್ನಾಟಕದ ಸುವರ್ಣಸೌಧವು ಅಧಿವೇಶನದ ನಡೆಯದೇ ಖಾಲಿ ಇರುವ ಸಮಯದಲ್ಲಿ ನನ್ನ ಮಗಳ 6ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ಬಾಡಿಗೆ ನೀಡುವಂತೆ ಒತ್ತಾಯಿಸಿ ಎಂದು ಬೆಳಗಾವಿ ಜಿಲ್ಲೆಯ ಗೋಕಾಕ್‌ನ ವಕೀಲರೊಬ್ಬರು ಸಭಾಪತಿಗಳಿಗೆ ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಸುವರ್ಣಸೌಧ  (Suvarna Soudha) ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಖಾಲಿ ಇರುತ್ತದೆ. ಇದರಿಂದ ಶುಭ ಕಾರ್ಯಗಳಿಗೆ ಬಾಡಿಗೆ ಕೊಟ್ಟರೆ ಒಳ್ಳೆಯದು ಎಂದು ಬೆಳಗಾವಿ (Belagavi) ಜಿಲ್ಲೆಯ ಗೋಕಾಕ್​ ತಾಲೂಕಿನ ಘಟಪ್ರಭಾ ನಿವಾಸಿ ಹಾಗೂ ವಕೀಲ ಮಲ್ಲಿಕಾರ್ಜುನ ಚೌಕಾಶಿ ಎಂಬುವವರು ಬಾಡಿಗೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 

6ನೇ ವರ್ಷದ ಹುಟ್ಟುಹಬ್ಬ: ನನ್ನ ಏಕೈಕ ಪುತ್ರಿಯಾದ ಮಣಿಶ್ರೀಗೆ ಜನವರಿ 30ಕ್ಕೆ 5 ವರ್ಷ ಮುಗಿದು 6ನೇ ವರ್ಷ ತುಂಬಲಿದೆ. ನಂತರ ಅವಳು 1ನೇ ತರಗತಿಯ ಪ್ರವೇಶ ಪಡೆದು ಶಾಲೆಗೆ ಹೋಗಲಿದ್ದಾಳೆ. ಇದು ಅವಳ ಜೀವನದ ಅಮೂಲ್ಯ ಕ್ಷಣ. ಹೀಗಾಗಿ ಮಗಳ ಹುಟ್ಟುಹಬ್ಬವನ್ನು ಆಚರಿಸಲು ಅನುಮತಿ ನೀಡಿ. ಜೊತೆಗೆ ನಮ್ಮ ಭಾಗದಲ್ಲಿ ಚಿಕ್ಕ ಹೆಣ್ಣುಮಕ್ಕಳಿಗೆ ಹುಟ್ಟದಟ್ಟಿ ಮಾಡುವ ಪದ್ಧತಿಯಿದೆ. ಇದು ಕೂಡ ಜೀವನದಲ್ಲಿ ಒಮ್ಮೆ ಬರುವಂತಹದ್ದು. ಆದ್ದರಿಂದ ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಭೂತ ಬಂಗ್ಲೆಯಂತಿರುವ ಸುವರ್ಣಸೌಧ ಸಭಾಂಗಣವನ್ನು ಬಾಡಿಗೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios