Asianet Suvarna News Asianet Suvarna News

ಗಂಗಾವತಿ: ಕೋವಿಡ್‌ಗೆ ಖ್ಯಾತ ಸಂಗೀತ ಶಿಕ್ಷಕ ಗೋವಿಂದರಾಜ್‌ ಬಲಿ

ಮಹಾಮಾರಿ ಕೊರೋನಾ ಸಂಗೀತ ಶಿಕ್ಷಕ ಪಂಡಿತ ಗೋವಿಂದರಾಜ ಬೊಮ್ಮಲಾಪುರ ಬಲಿ| ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಗೋವಿಂದರಾಜ ಬೊಮ್ಮಲಾಪುರ ವಿಧಿವಶ| ಬೊಮ್ಮಲಾಪುರ ಅವರು ಅಗಲಿಗೆ ಸಂಗೀತ ಪ್ರಿಯರಿಗೆ ತೀವ್ರ ಅಘಾತವನ್ನುಂಟು ಮಾಡಿದೆ|
 
 

Renowned Music Teacher Govind Raj Passed Away in Gangavati in Koppal District
Author
Bengaluru, First Published Sep 3, 2020, 10:49 AM IST

ಕೊಪ್ಪಳ(ಸೆ.03): ಜಿಲ್ಲೆಯ ಗಂಗಾವತಿ ನಗರದ ಖ್ಯಾತ ಸಂಗೀತ ಶಿಕ್ಷಕ ಪಂಡಿತ ಗೋವಿಂದರಾಜ ಬೊಮ್ಮಲಾಪುರ ಅವರು ಕೋವಿಡ್‌ಗೆ ಬಲಿಯಾಗಿದ್ದಾರೆ. ತಮ್ಮ 65ನೇ ವಯಸ್ಸಿನಲ್ಲಿಯೂ ಉತ್ಸಾಹದಿಂದಲೇ ಸಂಗೀತ ಪಾಠ ಮಾಡುತ್ತಿದ್ದ ಅವರು ಕೊರೋನಾ ತಗುಲಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ಸಂಗೀತ ಪ್ರಿಯರಿಗೆ ತೀವ್ರ ಅಘಾತವನ್ನುಂಟು ಮಾಡಿದೆ.

ಬಾಲ್ಯಜೀವನ:

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಶಿಷ್ಯರನ್ನು ತಯಾರಿಸಿದ ಗೋವಿಂದರಾಜ ಬೊಮ್ಮಲಾಪುರರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ 1955 ರಲ್ಲಿ ಜನಿಸಿದ್ದರು. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ನಡೆಸಿದ್ದಾರೆ. ಆಕಾಶವಾಣಿಯ ಬಿ ಗ್ರೇಡ್‌ ಕಲಾವಿದರಾಗಿ, ದೂರದರ್ಶನ, ಚಂದನ ಇನ್ನೂ ಅನೇಕ ವಾಹಿನಿಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸಂಗೀತಾ ಕಟ್ಟಿ, ಫಯಾಜ್‌ ಖಾನ್‌, ಗಣಪತಿ ಭಟ್‌, ವೆಂಕಟೇಶ ಕುಮಾರ, ಕುಮಾರದಾಸ ಸದಾಶಿವ ಪಾಟೀಲ್‌, ಅಂಬಯ್ಯ ನುಲಿ ಇನ್ನೂ ಅನೇಕ ಹಿರಿಯ ಸಂಗೀತ ಗಾಯಕರಿಗೆ ಹಾರ್ಮೋನಿಯಂ ಸಾಥ್‌ ನೀಡಿದ್ದಾರೆ.

ಕೊಪ್ಪಳ: ಸೆ. 30ರ ವರೆಗೆ ಹುಲಿಗೆಮ್ಮ ದೇವಿ ದರ್ಶನ ನಿಷೇಧ

2014ರಲ್ಲಿ ತಮ್ಮದೇ ಆದ ಶ್ರೀ ಗುರುಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಆರಂಭಿಸಿ ಅನೇಕ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಏರ್ಪಡಿಸಿದ್ದರು. ಅವರ ಪುತ್ರ ಪಂಚಾಕ್ಷರ ಬೊಮ್ಮಲಾಪುರ ಗಾಯಕರಾಗಿ, ತಬಲಾ ವಾದಕರಾಗಿ ಅವರಿಗೆ ಸಾಥ್‌ ನೀಡುತ್ತಿದ್ದರಲ್ಲದೇ, ಸಂಸ್ಥೆಯ ಕಾರ್ಯದರ್ಶಿ ಅವರ ಅಳಿಯ ರಾಘವೇಂದ್ರ ಗಂಗಾವತಿ ಸಹ ತಬಲಾ ವಾದಕರು.

ಪ್ರಶಸ್ತಿ ಪುರಸ್ಕಾರ:

ಬೊಮ್ಮಲಾಪುರ ಅವರಿಗೆ ನಾಡಿನ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ. ಹಾನಗಲ್ಲ ಕುಮಾರ ಶ್ರೀ ಪ್ರಶಸ್ತಿ, ನಾದ ಚತುರ, ಕರ್ನಾಟಕ ಕಲಾರತ್ನ, ಸ್ವರ ಸೌರಭ ಸಂಗೀತ ಸಿರಿ, ಪ್ರಶಸ್ತಿ ಲಭಿಸಿದೆ. ಅವರ ನಿಧನಕ್ಕೆ ಗಾಯಕ ಸದಾಶಿವ ಪಾಟೀಲ್‌, ಮಾರುತಿ ದೊಡ್ಡಮನಿ, ರಾಮಚಂದ್ರಪ್ಪ ಉಪ್ಪಾರ, ಡಿ.ವೈ.ಎಸ್‌.ಪಿ ರುದ್ರೇಶ ಉಜ್ಜನಕೊಪ್ಪ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.
 

Follow Us:
Download App:
  • android
  • ios