ಧಾರವಾಡ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ, ಕೇಂದ್ರ ರೈಲ್ವೆ ಸಚಿವರಿಂದ ಚಾಲನೆ
ಧಾರವಾಡ ರೈಲ್ವೆ ನಿಲ್ದಾಣವನ್ನ ಮೇಲ್ದರ್ಜೆಗೆ ಏರಿಸಿದ ಹಿನ್ನೆಲೆ ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನಿಲ್ದಾಣಕ್ಕೆ ಚಾಲನೆ ನೀಡಿದರು
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಅ.11): ಧಾರವಾಡ ರೈಲ್ವೆ ನಿಲ್ದಾಣವನ್ನ ಮೇಲ್ದರ್ಜೆಗೆ ಏರಿಸಿದ ಹಿನ್ನೆಲೆ ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನಿಲ್ದಾಣಕ್ಕೆ ಚಾಲನೆ ನೀಡಿದರು. ಇದೇ ಸಂಧರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈಲ್ವೆ ಸಚಿವರಿಗೆ ಧಾರವಾಡ ಪೇಡೆಯನ್ನ ಕೊಟ್ಟ ಸನ್ಮಾನಿಸಿದರು. ಇನ್ನು ರೈಲ್ವೆ ನಿಲ್ದಾಣಕ್ಕೆ ನಿಲ್ದಾಣಕ್ಕೆ ಚಾಲನೆ ನೀಡಿದ ಸಚಿವರು ಭಾಷಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯನ್ನ ಹಾಡಿ ಹೊಗಳಿದ್ದಾರೆ. ವೇದಿಕೆಯ ಭಾಷಣದಲ್ಲಿ ಮಾತನಾಡಿದ ಸಚಿವರು ಜೋಶಿ ಅವರು ನಮಗೆ ಧಾರವಾಡ ಪೇಡಾ ತಿನ್ನಿಸಿ ಕೆಲಸವನ್ನ ಮಾಡಿಸಿಕ್ಕೊಳ್ಳುತ್ತಾರ ಅವರು ಒಳ್ಳೆಯ ಕೆಲಸಗಾರರು ಅವರು ಯಾರ ಭಯ ವಿಲ್ಲದೆ ಕೇಂದ್ರದಲ್ಲಿ ಒಳ್ಳೆಯ ಹಿಡಿತವನ್ನ ಸಾಧಿಸಿದ್ದಾರೆ. ಪ್ರಹ್ಲಾದ್ ಜೋಶಿ ಅವರ. ಕೊಡುಗೆ ಧಾರವಾಡಕ್ಕೆ ಅಪಾರವಾಗಿದೆ. ಅವರು ಇನ್ನಷ್ಟು ದೊಡ್ಡ ದೊಡ್ಡ ಕೆಲಸಗಳನ್ನ ಮಾಡುತ್ತಾರೆ. ಅವರು ಪ್ರಧಾನಿ ಮೋದಿ ಸಂಪುಟದಲ್ಲಿ ಪವರ್ ಪುಲ್ ಮಿನಿಸ್ಟರ್ ಆಗಿದ್ದಾರೆ ದೊಡ್ಡ ದೊಡ್ಡ ಸಚಿವರುಗಳು ಜೋಸಿ ಅವರಿಗೆ ಎರಡು ಕೈ ಎತ್ತಿನಮಸ್ಕಾರ ಮಾಡುತ್ತಾರೆ ಎಂದು ವೇದಿಕೆಯ ಬಾಷಣದಲ್ಲಿ ಜೋಶಿ ಅವರನ್ನ. ರೈಲ್ವೆ ಸಚಿವರು ಹೊಗಳಿದ್ದಾರೆ.
ಕನ್ನಡದಲ್ಲಿ ಭಾಷಣ ಆರಂಭ ಮಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಧಾರವಾಡ ಜನತೆಗೆ ನಮಸ್ಕಾರ ಧಾರವಾಡ ಫೇಡಾ ತಿನ್ನಬೇಕು ಎಂದರು ಪ್ರಹ್ಲಾದ ಜೋಶಿ ಅವರು ನನ್ನ ಗುರು ಇದ್ದ ಹಾಗೆ ಈ ಭಾಗಕ್ಕೆ ಬಂದು ಬಹಳ ಸಂತೋಷವಾಗಿದೆ ಈ ಭಾಗದಿಂದ 5 ಮಂದಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಇದ್ದಾರೆ ಇದು ಖುಷಿಯ ವಿಚಾರವಾಗಿದೆ. ಸಾಹಿತ್ಯ, ಸಂಗೀತ, ಧಾರವಾಡ ಫೇಡಾ, ಹಾಗೂ ಇನ್ನೊಂದು ಕಡೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇದ್ದಾರೆ ದೇಶದಲ್ಲಿ ವಂದೇ ಭಾರತ ರೈಲು ಇಲ್ಲಿಯವರೆಗೆ 18 ಲಕ್ಷ ಕಿ.ಮೀ ಕ್ರಮಿಸಿದೆ ಧಾರವಾಡಕ್ಕೆ ವಂದೇ ಭಾರತ ರೈಲು ಮಂಜೂರು ಮಾಡುವ ಕುರಿತು ಮೋದಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.
ಜೋಶಿ ಅವರೊಂದಿಗೆ ಪ್ರಧಾನಿ ಬಳಿಗೆ ಫೇಡಾದೊಂದಿಗೆ ತೆರಳಿ ಮಂಜೂರು ಮಾಡಿಸಲು ಚರ್ಚೆ ಮಾಡುವೆ ದೇಶಾದ್ಯಂತ 75 ಹೊಸ ವಂದೇ ಭಾರತ ರೈಲು ಲೋಕಾರ್ಪಣೆ ಗೊಳಿಸಲಾಗಿದೆ ದೇಶಕ್ಕೆ ಹೊಸ ಅಭಿವೃದ್ಧಿ ನೀಡಲು ಪ್ರಧಾನಿ ಟೀಂ ನಲ್ಲಿ ನಾವು ಕೆಲಸ ಮಾಡ್ತಾ ಇದ್ದೀವಿ ದೇಶದಲ್ಲಿ ಮೈನಿಂಗ್ ಬಗ್ಗೆ ನಕರಾತ್ಮಕ ಧೋರಣೆ ಹೋಗಿ ಹರಾಜು ಪ್ರಕ್ರಿಯೆ ಶುರುವಾಗಲು ಜೋಶಿ ಅವರು ಕಾರಣ ಪ್ರಧಾನಿ ಮೋದಿ ಕ್ಯಾಬಿನೆಟ್ ನಲ್ಲಿ ಜೋಶಿ ಅವರು ಅತ್ಯಂತ ಪ್ರಬಲ ಪ್ರಭಾವಿ ಸಚಿವರಾಗಿದ್ದಾರೆ ವಾಟ್ಸಪ್ ನಲ್ಲಿ ಬಂದಿರುವ ಆದೇಶ ಓದಿ ಘೋಷಣೆ ಮಾಡಿದ್ದಾರೆ.
ಧಾರವಾಡ ಭಾಗದ ರೈಲ್ವೆ ಲೈನ್ Lc 300 ಆದೇಶ ಆಗಿದೆ ಎಂದು ಘೋಷಣೆ ಮಾಡಿದರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ ಮೇರೆಗೆ ಆದೇಶ ಪ್ರಕಟಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ನಿಜಾಮುದ್ದೀನ್ ರೈಲಿನ ಹೆಸರನ್ನು ಸವಾಯಿ ಗಂಧರ್ವ ರೈಲು ಘೋಷಣೆ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪಂಡಿತ ಸವಾಯಿ ಗಂಧರ್ವರ ಅಂಚೆ ಚೀಟಿ ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಇದೆ ಸಂಧರ್ಬದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ, ಶಾಸಕ ಅರವಿಂದ ಬೆಲ್ಲದ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ವೇದಿಕೆಯ ಮೆಲೆ ಉಪಸ್ಥಿತರಿದ್ದರು.