Asianet Suvarna News Asianet Suvarna News

ಕೆಂಗಲ್‌ ಹನು​ಮಂತಯ್ಯ ಮೆಡಿಕಲ್‌ ಕಾಲೇಜು ಸ್ಥಳಾಂತರ: ಸೆ.8ಕ್ಕೆ ರಾಮ​ನ​ಗರ ಬಂದ್‌

ಕೆಂಗಲ್‌ ಹನು​ಮಂತಯ್ಯ ಮೆಡಿ​ಕಲ್‌ ಕಾಲೇ​ಜು ಸ್ಥಳಾಂತರ ವಿರೋ​ಧಿಸಿ ಸೆ.8ರಂದು ರಾಮ​ನ​ಗರ ಬಂದ್‌ ಗೆ ಕರೆ ನೀಡು​ವು​ದು. ಆನಂತರ ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ನಿವಾ​ಸಕ್ಕೆ ಮುತ್ತಿಗೆ ಹಾಕು​ವುದು ಮತ್ತು ಮುಖ್ಯ​ಮಂತ್ರಿ ಸಿದ್ದ​ರಾಮಯ್ಯ ಅವ​ರನ್ನು ಭೇಟಿ​ಯಾಗಿ ಮನವಿ ಸಲ್ಲಿ​ಸುವುದು. 
 

Relocation of Kengal Hanumantaiah Medical College Ramanagara bandh on September 8 gvd
Author
First Published Aug 30, 2023, 9:23 PM IST

ರಾಮ​ನ​ಗರ (ಆ.30): ಕೆಂಗಲ್‌ ಹನು​ಮಂತಯ್ಯ ಮೆಡಿ​ಕಲ್‌ ಕಾಲೇ​ಜು ಸ್ಥಳಾಂತರ ವಿರೋ​ಧಿಸಿ ಸೆ.8ರಂದು ರಾಮ​ನ​ಗರ ಬಂದ್‌ ಗೆ ಕರೆ ನೀಡು​ವು​ದು. ಆನಂತರ ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ನಿವಾ​ಸಕ್ಕೆ ಮುತ್ತಿಗೆ ಹಾಕು​ವುದು ಮತ್ತು ಮುಖ್ಯ​ಮಂತ್ರಿ ಸಿದ್ದ​ರಾಮಯ್ಯ ಅವ​ರನ್ನು ಭೇಟಿ​ಯಾಗಿ ಮನವಿ ಸಲ್ಲಿ​ಸುವುದು. ನಗ​ರದ ಕೃಷ್ಣ​ಸ್ಮೃತಿ ಕಲ್ಯಾಣ ಮಂಟ​ಪ​ದಲ್ಲಿ ಮಂಗ​ಳ​ವಾರ ಕೆಂಗಲ್‌ ಹನು​ಮಂತಯ್ಯ ಮೆಡಿ​ಕಲ್‌ ಕಾಲೇಜು ಹೋರಾಟ ಸಮಿತಿ ಮೆಡಿ​ಕಲ್‌ ಕಾಲೇಜು ಸ್ಥಳಾಂತರ ವಿರೋ​ಧಿಸಿ ಆಯೋ​ಜಿ​ಸಿದ್ದ ಸಾರ್ವ​ಜ​ನಿ​ಕರ ಸಭೆ​ಯಲ್ಲಿ ಮೆಡಿ​ಕಲ್‌ ಕಾಲೇ​ಜನ್ನು ಉಳಿ​ಸಿ​ಕೊ​ಳ್ಳುವ ನಿಟ್ಟಿ​ನಲ್ಲಿ ಹೋರಾ​ಟದ ರೂಪು​ರೇ​ಷೆ​ಗ​ಳನ್ನು ರೂಪಿ​ಸ​ಲಾ​ಯಿತು.

ಕಾಂಗ್ರೆಸ್‌ ಹೊರತು ಪಡಿಸಿ ಜೆಡಿ​ಎಸ್‌, ಬಿಜೆಪಿ ಪಕ್ಷ​ಗಳ ಮುಖಂಡರು, ರೈತ ಸಂಘ, ದಲಿತ ಸಂಘ​ಟನೆ ಹಾಗೂ ಕನ್ನಡ ಪರ ಸಂಘ​ಟ​ನೆ​ಗಳ ಪದಾ​ಧಿ​ಕಾ​ರಿ​ಗಳನ್ನು ಒಳ​ಗೊಂಡಂತೆ ಪಕ್ಷಾ​ತೀ​ತ​ವಾಗಿ ನಡೆದ ಸಾರ್ವ​ಜ​ನಿ​ಕರ ಸಭೆ​ಯಲ್ಲಿ ನಮ್ಮ ಮೆಡಿ​ಕಲ್‌ ಕಾಲೇಜು ನಮ್ಮ ಹಕ್ಕು ಘೋಷ​ಣೆ​ಯಡಿ ಮೆಡಿ​ಕಲ್‌ ಕಾಲೇ​ಜನ್ನು ರಾಮ​ನ​ಗ​ರ​ದ​ಲ್ಲಿಯೇ ಉಳಿ​ಸಿ​ಕೊ​ಳ್ಳಲು ತೀವ್ರ​ತ​ರ​ವಾದ ಚಳ​ವ​ಳಿ​ ನಡೆಸುವುದು. ಹೋರಾಟಕ್ಕೆ ಮಾಜಿ ಮುಖ್ಯ​ಮಂತ್ರಿ​ಗ​ಳಾದ ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಉಪ​ಮು​ಖ್ಯ​ಮಂತ್ರಿ ಅಶ್ವತ್ಥ ನಾರಾ​ಯಣ ಅವರನ್ನು ಚಳ​ವ​ಳಿ​ಯಲ್ಲಿ ತೊಡ​ಗಿ​ಸಿ​ಕೊಂಡು ಕಾಂಗ್ರೆಸ್‌ ನೇತೃ​ತ್ವದ ರಾಜ್ಯ ಸರ್ಕಾ​ರಕ್ಕೆ ಬಿಸಿ ಮುಟ್ಟಿ​ಸಲು ಒಮ್ಮ​ತದ ತೀರ್ಮಾನ ಕೈಗೊ​ಳ್ಳ​ಲಾ​ಯಿತು. 

ರಾಜೀವ್‌ಗಾಂಧಿ ಮೆಡಿಕಲ್‌ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್‌ಡಿಕೆ ಆಕ್ರೋಶ

ಸೆ.8ರ ರಾಮನಗರ ಬಂದ್‌ ಸಂಬಂಧ ಆಗಸ್ಟ್‌ 30ರಂದು ನಗರದ ಪ್ರವಾಸಿ ಮಂದಿರದಲ್ಲಿ ಮತ್ತೊಂದು ಸುತ್ತಿನ ಸಭೆ ಆಯೋಜಿಸಿ, ಬಂದ್‌ ಗೆ ಕರೆ ನೀಡುವ ಸಂಬಂಧ ರೂಪುರೇಷಗಳ ಕುರಿತು ಚರ್ಚಿಸಲು ಪದಾಧಿಕಾರಿಗಳು ನಿರ್ಣಯ ಕೈಗೊಂಡರು. ಬಿಜೆಪಿ ಮುಖಂಡ ಪ್ರಸಾದ್‌ ಗೌಡ ಮಾತನಾಡಿ, ಡಿ​ಸಿ​ಎಂ ಡಿ.ಕೆ.​ಶಿ​ವ​ಕು​ಮಾರ್‌ ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು. ನಿಮ್ಮ ಸ್ವಂತ ಹಣದಲ್ಲಿಯೇ ಮೆಡಿ​ಕಲ್‌ ಕಾಲೇಜು ನಿರ್ಮಾಣ ಮಾಡಬಹುದು. ಇಲ್ಲವೆ ದಾನಿಗಳಿಂದ ನಿರ್ಮಾಣ ಮಾಡಿ​ಸ​ಬ​ಹುದು. ವಿನಾ ಕಾರಣ ಜನರು ತಿರುಗಿ ಬೀಳಲು ಅವಕಾಶ ನೀಡಬೇಡಿ. ಹೋರಾಟಕ್ಕೆ ಹೆಜ್ಜೆ ಇಟ್ಟಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಅಶ್ವತ್ಥ ನಾರಾಯಣ ಸೇರಿ ಅನೇಕ ನಾಯಕರನ್ನು ಕರೆತಂದು ಹೋರಾಟ ನಡೆಸಿ ಮೆಡಿ​ಕಲ್‌ ಕಾಲೇ​ಜನ್ನು ಉಳಿ​ಸಿ​ಕೊ​ಳ್ಳು​ತ್ತೇವೆ ಎಂದು ಎಚ್ಚ​ರಿಕೆ ನೀಡಿ​ದರು.

ಡಿಕೆ ಸಹೋ​ದ​ರ​ರಿಗೆ ತಮಿ​ಳು​ನಾ​ಡಿನ ಮೇಲೆ ಹೆಚ್ಚಿನ ಪ್ರೀತಿ ತೋರಿ​ಸು​ತ್ತಿ​ದ್ದು, ಎಲ್ಲ ಯೋಜ​ನೆ​ಗ​ಳನ್ನು ಗಡಿ ಭಾಗಕ್ಕೆ ತೆಗೆ​ದು​ಕೊಂಡು ಹೋಗು​ತ್ತಿ​ದ್ದಾರೆ. ಇದಕ್ಕೆ ಕಾರಣ ಏನೆಂದು ಗೊತ್ತಾ​ಗು​ತ್ತಿಲ್ಲ. ಕನ​ಕ​ಪು​ರಕ್ಕೆ ಪ್ರತ್ಯೇಕ ಮೆಡಿ​ಕಲ್‌ ಕಾಲೇಜು ತಂದು ನಿಮ್ಮ ಗಟ್ಟಿ​ತನ ತೋರಿಸಿ, ಜಿಲ್ಲಾ ಬೆಳ​ವ​ಣಿಗೆ , ಮಕ್ಕಳ ವ್ಯಾಸಂಗ, ಉದ್ಯೋ​ಗಾ​ವ​ಕಾ​ಶಗಳ ದೃಷ್ಟಿ​ಯಿಂದ ರಾಮ​ನ​ಗರ ಕಾಲೇಜು ಸ್ಥಳಾಂತ​ರಕ್ಕೆ ಅವ​ಕಾಶ ನೀಡು​ವು​ದಿಲ್ಲ ಎಂದು ಹೇಳಿ​ದ​ರು. ಸಾಹಿತಿ ಶಿವಲಿಂಗಯ್ಯ ಮಾತನಾಡಿ, ಮೆಡಿ​ಕಲ್‌ ಕಾಲೇಜು ಉಳಿ​ವಿ​ಗಾಗಿ ನಡೆ​ಯು​ತ್ತಿ​ರುವ ಹೋರಾಟ ರಾಜ​ಕೀ​ಯ​ಕ​ರಣ ಆಗ​ಬಾ​ರದು. ಅದು ಸಾರ್ವ​ಜ​ನಿಕ ಹಿತಾ​ಸಕ್ತಿ ಹಿನ್ನೆ​ಲೆ​ಯಲ್ಲಿ ನಡೆ​ದಾಗ ಮಾತ್ರ ಜಯ ಸಿಗ​ಲಿದೆ. ಆರೋ​ಗ್ಯದ ದೃಷ್ಟಿ​ಯಿಂದ ಜಿಲ್ಲಾ ಕೇಂದ್ರ​ದ​ಲ್ಲಿ ಮೆಡಿ​ಕಲ್‌ ಕಾಲೇಜು ನಿರ್ಮಾಣಗೊಳ್ಳು​ವುದು ಸೂಕ್ತ ಎಂದು ತಿಳಿ​ಸಿ​ದರು.

ಪ್ರತಿ ವಿಚಾ​ರ​ದಲ್ಲು ರಾಮ​ನ​ಗ​ರಕ್ಕೆ ಅನ್ಯಾ​ಯ​ವಾ​ಗು​ತ್ತಲೇ ಬಂದಿದೆ. ಸಾಹಿತ್ಯ, ಸಾಂಸ್ಕೃ​ತಿಕ ಹಾಗೂ ಹೋರಾ​ಟದ ವಿಚಾ​ರ​ದ​ಲ್ಲಿಯೂ ರಾಮ​ನ​ಗರ ಹಿಂದು​ಳಿ​ದಿದೆ. ​ಇ​ದಕ್ಕೆ ದಿವ್ಯ ನಿರ್ಲಕ್ಷ್ಯ ಮತ್ತು ಹೋರಾ​ಟದ ಮನೋ​ಭಾ​ವನೆ ಇಲ್ಲ​ದಿ​ರು​ವುದೆ ಕಾರಣ. ಮೆಗಾ ಡೇರಿ, ರೇಷ್ಮೆ ಮಾರು​ಕಟ್ಟೆಕಾರ​ಣಾಂತ​ರ​ಗ​ಳಿಂದ ಸ್ಥಳಾಂತ​ರ​ಗೊಂಡವು. ಅದೇ ಹಾದಿ​ಯಲ್ಲಿ ಮೆಡಿ​ಕಲ್‌ ಕಾಲೇಜು ಕೂಡ ಸಾಗಿದೆ. ರೇಷ್ಮೆ​ನ​ಗ​ರಿಯ ಅಸ್ಮಿತೆ ಅಳಿ​ಸುವ ಪ್ರಯ​ತ್ನ ನಡೆ​ಯು​ತ್ತಿವೆ ಎಂದು ಕಿಡಿ​ಕಾ​ರಿ​ದ​ರು. ನಿವೃತ್ತ ಪೊಲೀಸ್‌ ಅಧಿಕಾರಿ ಪುರುಷೋ​ತ್ತಮ್‌, ಗ್ರಾಪಂ ಮಾಜಿ ಅಧ್ಯಕ್ಷ ಎನ್‌.ರಮೇಶ್‌, ಕಸ್ತೂರಿ ಕರ್ನಾ​ಟಕ ಜನ​ಪರ ವೇದಿಕೆ ರಾಜ್ಯಾ​ಧ್ಯಕ್ಷ ರಮೇಶ್‌ ಗೌಡ, ಜೆಡಿ​ಎಸ್‌ ಮುಖಂಡ ರೈಡ್‌ ನಾಗ​ರಾಜ್‌, ಬಿಜೆಪಿ ಮುಖಂಡ ಎಸ್‌.ಆರ್‌ .ನಾ​ಗ​ರಾಜ್‌, ರೈತಸಂಘ ಮುಖಂಡ ಮಲ್ಲಯ್ಯ, ಕರು​ನಾಡ ಸೇನೆ ರಾಜ್ಯ ಉಪಾ​ಧ್ಯಕ್ಷ ಜಗದೀಶ್‌, ಕರವೇ ಸ್ವಾಭಿ​ಮಾನಿ ಬಣದ ರಾಜ್ಯಾ​ಧ್ಯಕ್ಷ ಪಿ.ಕೃ​ಷ್ಣೇ​ಗೌಡ, ರಾಜ್ಯ ಉಸ್ತು​ವಾರಿ ಅಧ್ಯಕ್ಷ ಶಿವು​ಗೌಡ, ಆರ್ಯ​ವೈಶ್ಯ ಸಮು​ದಾ​ಯದ ಮುಖಂಡ ಉಮೇಶ್‌ ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದ​ರು.

ಕುಮಾರಸ್ವಾಮಿ ಮಂಜೂರು ಮಾಡಿದ್ದ ಕಾಲೇಜು: ಶಾಸಕ ಎ.ಮಂಜು​ನಾಥ್‌ ಮಾತ​ನಾಡಿ, ಡಿಕೆ ಸಹೋ​ದ​ರ​ರಿಗೆ ಜಿಲ್ಲೆಯ ಬಗೆಗೆ ಎಳ್ಳಷ್ಟುಮಮ​ಕಾರ ಇಲ್ಲ. ಕುಮಾ​ರ​ಸ್ವಾಮಿಯವರು ಸಿಎಂ ಆಗಿ​ದ್ದಾಗ ಮಂಜೂರು ಮಾಡಿದ ರಾಜೀವ್‌ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್‌ನಲ್ಲಿ ನಿರ್ಮಾಣ ಆಗ​ಬೇ​ಕಿ​ರುವ ಮೆಡಿ​ಕಲ್‌ ಕಾಲೇ​ಜನ್ನು ಕಳ್ಳ​ತನ ಮಾಡಿ​ಕೊಂಡು ಕನ​ಕ​ಪು​ರಕ್ಕೆ ತೆಗೆ​ದು​ಕೊಂಡು ಹೋಗು​ತ್ತಿ​ದ್ದಾರೆ. ನೀವು ಸತ್ಯ ನುಡಿಯುವುದಾದರೆ ಒಮ್ಮೆ ದಾಖಲೆಗಳನ್ನು ತೆಗೆ​ದು ನೋಡಿ. ಕನ​ಕ​ಪು​ರದ ಮೆಡಿ​ಕಲ್‌ ಕಾಲೇ​ಜನ್ನು ಚಿಕ್ಕ​ಬ​ಳ್ಳಾ​ಪು​ರಕ್ಕೆ ಯಾರೂ ಕಸಿದುಕೊಂಡು ಹೋಗ​ಲಿಲ್ಲ. 

ಕಾಂಗ್ರೆಸ್‌ನ 5 ಗ್ಯಾರಂಟಿಗಳು ಐದೂ ವರ್ಷ ಇರುತ್ತೆ: ಸಂಸದ ಡಿ.ಕೆ.ಸುರೇಶ್‌

ಬದ​ಲಿಗೆ ಚಿಕ್ಕ​ಬ​ಳ್ಳಾ​ಪು​ರಕ್ಕೆ ಮಂಜೂ​ರಾ​ಗಿದ್ದ ಮೆಡಿ​ಕಲ್‌ ಕಾಲೇ​ಜನ್ನು ಡಿಕೆ ಸಹೋ​ದ​ರರು ಕಸಿ​ದು​ಕೊಂಡು ಕನ​ಕ​ಪು​ರಕ್ಕೆ ತಂದಿ​ದ್ದರು. ಆನಂತರ ಯಡಿ​ಯೂ​ರ​ಪ್ಪ​ರ​ವರ ಸರ್ಕಾ​ರ​ದಲ್ಲಿ ಕನ​ಕ​ಪು​ರಕ್ಕೆ ತರ​ಲಾ​ಗಿದ್ದ ಮೆಡಿ​ಕಲ್‌ ಕಾಲೇಜು ಚಿಕ್ಕ​ಬ​ಳ್ಳಾ​ಪು​ರಕ್ಕೆ ವಾಪಸ್‌ ಹೋಯಿತು. ಈ ಸತ್ಯ ಸಂಗ​ತಿ​ಯನ್ನು ಮರೆ ಮಾಚು​ತ್ತಿ​ರುವ ಡಿಕೆ ಸಹೋ​ದ​ರರು ಇದೀಗ ರಾಮ​ನ​ಗ​ರದ ಮೆಡಿ​ಕಲ್‌ ಕಾಲೇ​ಜನ್ನು ಕಳ್ಳ​ತನ ಮಾಡಲು ಮುಂದಾ​ಗಿ​ದ್ದಾರೆ. ಇದಕ್ಕೆ ಯಾವ ಕಾರ​ಣಕ್ಕೂ ಅವ​ಕಾಶ ನೀಡು​ವು​ದಿಲ್ಲ ಎಂದು ಹೇಳಿ​ದರು. ರಾಮ​ನ​ಗರ ಶಾಸ​ಕರು ಬಕೆ​ಟ್‌ ಹಿಡಿ​ಯುವ ಸಂಸ್ಕೃತಿ ಉಳ್ಳ​ವರು. ಅವ​ರಿಗೆ ನಿಮ್ಮ ಎದುರು ಮಾತ​ನಾ​ಡುವ ಧೈರ್ಯವಿಲ್ಲ. ಇನ್ನು ಜಿಲ್ಲಾ ಉಸ್ತು​ವಾರಿ ಸಚಿ​ವರು ನೀವು ನಿಂತು​ಕೊಳ್ಳಿ ಅಂದರೆ ನಿಲ್ಲು​ತ್ತಾರೆ, ಕುಳಿ​ತು​ಕೊಳ್ಳಿ ಅಂದರೆ ಕುಳಿ​ತು​ಕೊ​ಳ್ಳು​ತ್ತಾರೆ. ಇಂತಹ ನಾಯ​ಕ​ರಿಂದ ನ್ಯಾಯ ನಿರೀ​ಕ್ಷಿ​ಸಲು ಸಾಧ್ಯ​ವಿಲ್ಲ ಎಂದು ಮಂಜು​ನಾಥ್‌ ವ್ಯಂಗ್ಯ​ವಾ​ಡಿ​ದರು.

Follow Us:
Download App:
  • android
  • ios