ಧರ್ಮ ಕಾರ್ಯ​ಗಳು ನಿರಂತರ ನಡೆ​ಯ​ಬೇ​ಕು: ಬಿ.ಎಸ್‌.ಯಡಿಯೂರಪ್ಪ

ಸಮಾಜದಲ್ಲಿ ನಿರಂತರ ಧರ್ಮ ಕಾರ್ಯಗಳು ನಡೆಯಬೇಕು ಎಂಬ ಸದುದ್ದೇಶದಿಂದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಮಠ, ಮಂದಿರಗಳ ಅಭಿವೃದ್ಧಿಗೆ ಹೆಚ್ಚೆಚ್ಚು ಅನುದಾನ ನೀಡಿದ್ದಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿ​ದರು. 

Religious Activities should be done Continuously Says BS Yediyurappa At Shikaripur gvd

ಶಿಕಾರಿಪುರ (ಫೆ.13): ಸಮಾಜದಲ್ಲಿ ನಿರಂತರ ಧರ್ಮ ಕಾರ್ಯಗಳು ನಡೆಯಬೇಕು ಎಂಬ ಸದುದ್ದೇಶದಿಂದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಮಠ, ಮಂದಿರಗಳ ಅಭಿವೃದ್ಧಿಗೆ ಹೆಚ್ಚೆಚ್ಚು ಅನುದಾನ ನೀಡಿದ್ದಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿ​ದರು. ತಾಲೂಕಿನ ಬೇಗೂರು ಗ್ರಾಮದ ಮರಡಿ ತಾಂಡಾದಲ್ಲಿನ ಗಾಳಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿನ ಬನ್ನಿ ಮಂಟಪದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ ಕಾರ್ಯಕ್ರಮದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

4 ಬಾರಿ ಮುಖ್ಯಮಂತ್ರಿ ಆಗುವ ಸದಾವಕಾಶ ದೊರೆತ ಸಂದರ್ಭ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಯಥೇಚ್ಛ ಅನುದಾನ ಬಿಡುಗಡೆಗೊಳಿಸಿ, ಜನತೆಯ ಋುಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ತಾಲೂಕಿನಾದ್ಯಂತ ಆರೋಗ್ಯ, ಶಿಕ್ಷಣ, ಮೂಲಸೌಲಭ್ಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 3 ಕೋಟಿ ವೆಚ್ಚದಲ್ಲಿ ಬನ್ನಿಮಂಟಪದ ಜತೆಗೆ ನೂತನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ನಿರ್ಮಿಸಲಾಗಿದೆ. ಇದರೊಂದಿಗೆ ಗ್ರಾಮದ ಮಾರಿಕಾಂಬಾದೇವಿ ಸಮುದಾಯ ಭವನ ಸಹಿತ ಜನತೆಯ ಅಪೇಕ್ಷೆಗೆ ಪೂರಕವಾಗಿ ಎಲ್ಲ ಕಾಮಗಾರಿ ಪೂರ್ಣಗೊಳಿಸಿದ್ದಾಗಿ ತಿಳಿಸಿದರು.

ಚುನಾವಣೆ ಬಳಿಕ ಸಿದ್ದರಾಮಯ್ಯ ನಿರುದ್ಯೋಗಿ: ನಳಿನ್‌ಕುಮಾರ್‌ ಕಟೀಲ್‌

ಸಮಾಜದಲ್ಲಿ ನಿರಂತರ ಧರ್ಮ ಕಾರ್ಯ ನಡೆಯಬೇಕು ಎಂಬ ಸದುದ್ದೇಶದಿಂದ ಎಲ್ಲ ಮಠ- ಮಂದಿರಗಳ ಅಭಿವೃದ್ಧಿಗೆ ಮುಖ್ಯಮಂತ್ರಿಯಾದ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಲಾ​ಗಿದೆ. ಇದರೊಂದಿಗೆ ರೈತ ಸಮುದಾಯದ ನೆಮ್ಮದಿ ಬದುಕಿಗಾಗಿ ಎಲ್ಲ ಹೋಬಳಿಗೆ ಶಾಶ್ವತ ನೀರಾವರಿ ಯೋಜನೆ ರೂಪಿಸಲಾಗಿದೆ. ಕೆರೆ- ಕಟ್ಟೆಗಳ ಹೂಳು ತೆಗೆಯಲಾಗಿದೆ ಎಂದು ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಅನಾದಿ ಕಾಲದಿಂದ ಬನ್ನಿ ಮಂಟಪದ ಐತಿಹಾಸಿಕ ಸ್ಥಳ ರಂಗನಾಥಸ್ವಾಮಿ ದೇವಸ್ಥಾನ ಅಭಿವೃದ್ಧಿಗೊಳಿಸಬೇಕು ಎಂಬ ಯಡಿಯೂರಪ್ಪ ಅವರ ಕನಸು ನನಸಾಗಿದೆ. ದಸರಾದಲ್ಲಿ ತಾಲೂಕಿನ ಪ್ರಸಿದ್ಧ 10-15 ದೇವರು ಸಮಾಗಮಗೊಳ್ಳಲು ಇದೀಗ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಯಡಿಯೂರಪ್ಪ ಅವರ ಜನಪರ ಕಾಳಜಿಯನ್ನು ಜನತೆ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

2009 ರಲ್ಲಿ ಮುಖ್ಯಮಂತ್ರಿಯಾದ ಕೂಡಲೇ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ ಘೋಷಿಸಿದ ಯಡಿಯೂರಪ್ಪ ವರು ಇದೀಗ ಎಲ್ಲ ಹೋಬಳಿಗೆ ಶಾಶ್ವತ ನೀರಾವರಿ ಯೋಜನೆಯಿಂದಾಗಿ ಮಾಸಿಕ .1 ಕೋಟಿ ವಿದ್ಯುತ್‌ ಬಿಲ್‌ ಸರ್ಕಾರ ಪಾವತಿಸುತ್ತಿದೆ. ಯೋಜನೆಯಿಂದಾಗಿ ಅಂತರ್ಜಲಮಟ್ಟಏರಿಕೆಯಾಗಿದೆ. ರೈತವರ್ಗ ನೆಮ್ಮದಿಯ ಬದುಕಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜನರ ಋುಣ ತೀರಿ​ಸಲು ಪ್ರಾಮಾ​ಣಿಕ ಸೇವೆ: ಯಡಿ​ಯೂ​ರ​ಪ್ಪ

ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರ ಸಹಿತ ದೇವಸ್ಥಾನ ನಿರ್ಮಾಣದ ಎಂಜಿನಿಯರ್‌, ಶಿಲ್ಪಿಗಣ್ಯರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಬೇಗೂರು ಗ್ರಾಪಂ ಅಧ್ಯಕ ಗಂಗಾಧರ ವಹಿಸಿದ್ದರು. ವೇದಿಕೆಯಲ್ಲಿ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣಪ್ಪ ಕೊಳಗಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಚನ್ನವೀರಪ್ಪ, ಎಂಸಿಎ ನಿರ್ದೇಶಕ ವಸಂತಗೌಡ, ಗ್ರಾಪಂ ಸದಸ್ಯ ಲಕ್ಷ್ಮಣ ರಾವ್‌, ಆಂಜನೇಯ ದೇವಸ್ಥಾನ ಸಮಿತಿ ಅಧ್ಯಕ್ಷ ಕರಿಬಸಪ್ಪ, ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಭೀಮರಾವ್‌, ಎಸಿ ಪಲ್ಲವಿ ಸಾತೇನಹಳ್ಳಿ, ತಹಸೀಲ್ದಾರ್‌ ವಿಶ್ವನಾಥ್‌, ಲೋಕೋಪಯೋಗಿ ಇಲಾಖೆ ಎಇಇ ಜಗದೀಶಯ್ಯ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios