ಜನರ ಋುಣ ತೀರಿಸಲು ಪ್ರಾಮಾಣಿಕ ಸೇವೆ: ಯಡಿಯೂರಪ್ಪ
ರಾಜ್ಯದ ಪ್ರತಿಷ್ಠಿತ ಮುಖ್ಯಮಂತ್ರಿ ಹುದ್ದೆಸಹಿತ ರಾಜಕೀಯದ ಎಲ್ಲ ಉನ್ನತ ಸ್ಥಾನ ಮಾನ ದೊರಕಲು ಕಾರಣಕರ್ತರಾದ ತಾಲೂಕಿನ ಜನರ ಋುಣ ತೀರಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ.
ಶಿಕಾರಿಪುರ (ಫೆ.13): ರಾಜ್ಯದ ಪ್ರತಿಷ್ಠಿತ ಮುಖ್ಯಮಂತ್ರಿ ಹುದ್ದೆಸಹಿತ ರಾಜಕೀಯದ ಎಲ್ಲ ಉನ್ನತ ಸ್ಥಾನ ಮಾನ ದೊರಕಲು ಕಾರಣಕರ್ತರಾದ ತಾಲೂಕಿನ ಜನರ ಋುಣ ತೀರಿಸುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಕಟ್ಟಕಡೆಯ ಉಸಿರು ಇರುವರೆಗೂ ರಾಜ್ಯದ ಜನರ ಸೇವೆ ಮಾಡುವುದಕ್ಕೆ ಈ ಬದುಕನ್ನು ಸಂಪೂರ್ಣವಾಗಿ ಮೀಸಲಿಡುತ್ತೇನೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಪಟ್ಟಣದ ಶ್ರೀ ಗಿಡ್ಡೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಶ್ರೀ ಗಿಡ್ಡೇಶ್ವರ ದೇವಸ್ಥಾನ ಬಳಗದ ಸಮಿತಿ, ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂತ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಫೆ.27ಕ್ಕೆ 80 ವರ್ಷ ಪೂರ್ಣಗೊಳ್ಳುವ ನನಗೆ ಅಭಿನಂದನೆ ಸಲ್ಲಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಅದೇ ಸಂದರ್ಭದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ, ಹೊಸ ರೈಲ್ವೆ ಸಂಪರ್ಕ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ. ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ನಾಮಕರಣಕ್ಕೆ ನಿರ್ಣಯಿಸಿ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದ ಅವರು, ತಾಲೂಕಿನ ಕುರುಬ ಸಮುದಾಯಕ್ಕೆ ಸೇರಿದ ಕಾನಹಕ್ಕಲು ಗಿಡ್ಡೇಶ್ವರ ದೇವಸ್ಥಾನ ಅಭಿವೃದ್ಧಿಗೆ .1 ಕೋಟಿ ನೀಡುವುದಾಗಿ ಭರವಸೆ ನೀಡಿದರು.
ಚುನಾವಣೆ ಬಳಿಕ ಸಿದ್ದರಾಮಯ್ಯ ನಿರುದ್ಯೋಗಿ: ನಳಿನ್‌ಕುಮಾರ್ ಕಟೀಲ್
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಗಬ್ಬೂರು ಗಿಡ್ಡೇಶ್ವರ ಸಮುದಾಯ ಭವನಕ್ಕೆ .3 ಕೋಟಿ ಅನುದಾನ, ಶಿರಸಿ ಮಾರಮ್ಮ ದೇವಸ್ಥಾನಕ್ಕೆ .50 ಲಕ್ಷ ಹುಲಿಕಟ್ಟೆಪ್ಪ ದೇವಸ್ಥಾನಕ್ಕೆ .25 ಲಕ್ಷ ನೀಡಲಾಗಿದೆ. ತಾಲೂಕಿನ ತಿಮ್ಲಾಪುರ, ಮತ್ತಿಕೋಟೆ, ಗೊಗ್ಗ, ಬಿಳಿಕಿ, ಡಬ್ಬನಬೈರನಹಳ್ಳಿ, ಕೊಟ್ಟ, ಅರಶಿಣಗೆರೆ, ಕುಸ್ಕೂರು, ವಿಠಲ ನಗರ, ಕಿಟ್ಟದಹಳ್ಳಿ, ಶಂಕ್ರಿಕೊಪ್ಪ, ಅಂಬಾರಗೊಪ್ಪ, ಗುಳೇದಹಳ್ಳಿ, ಸಿದ್ದನಪುರ ಗ್ರಾಮಗಳಲ್ಲಿ ಕುರುಬ ಸಮಾಜಕ್ಕೆ ಸೇರಿದ ದೇವಸ್ಥಾನ ಅಭಿವೃದ್ಧಿಗೆ ಕಳೆದ ವರ್ಷದಲ್ಲಿ ಅನುದಾನ ನೀಡಲಾಗಿದೆ. ಪಟ್ಟಣದ ಮಾರಿಕಾಂಬ ದೇವಸ್ಥಾನದ ಹೆಸರಿಗೆ ನಿವೇಶನ ಖಾತೆ ಮಾಡಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ನಮ್ಮ ತಾಯಿ ಹೆಸರಿನಲ್ಲಿ .10 ಲಕ್ಷ ಮೌಲ್ಯದ ಕಂಚಿನ ಪ್ರತಿಮೆ ನಿರ್ಮಿಸಿದ್ದು, ಶೀಘ್ರದಲ್ಲೆ ಪ್ರತಿಷ್ಠಾಪನೆ ಆಗಲಿದೆ. ರೈಲ್ವೆ ಸಂಪರ್ಕ ಕಲ್ಪಿಸುವುದರಿಂದ 10 ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಆಗಲಿದೆ. ವಿಮಾನ ನಿಲ್ದಾಣದಿಂದ ಉದ್ಯೋಗ ಸೃಷ್ಠಿ ಆಗಲಿದೆ ಎಂದರು.
ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಹಾಲುಮತ ಸಮಾಜದ ಬಗ್ಗೆ ವಿಶೇಷ ಗೌರವ, ಪ್ರೀತಿ ಹೊಂದಿರುವ ಬಿ.ಎಸ್.ಯಡಿಯೂರಪ್ಪ ಮುತ್ಸದ್ಧಿ ರಾಜಕಾರಣಿ. ‘ಪರೋಪಕಾರಂ ಇದಂ ಶರೀರಂ’ ಎಂದು ತಿಳಿದುಕೊಂಡು ಜನರ ನಡುವೆ ಇದ್ದು ಸೇವೆ ಮಾಡುತ್ತಿದ್ದಾರೆ. ಅವರಿಗೆ ಅಭಿನಂದಿಸುವ ಸೌಭಾಗ್ಯ ದೊರಕಿದ್ದು ಸಂತೋಷದ ಸಂಗತಿ ಎಂದರು. ಮೈಲಾರದಲ್ಲಿ ಇತ್ತೀಚೆಗೆ ಲೋಕಾರ್ಪಣೆಯಾದ ವಸತಿ ಶಾಲೆಗೆ .10 ಕೋಟಿ ಅನುದಾನವನ್ನು ಯಡಿಯೂರಪ್ಪ ಅವರು ನೀಡಿದ್ದು, ಇದರೊಂದಿಗೆ ಕಾಗಿನೆಲೆ ಅಭಿವೃದ್ಧಿ ಸೇರಿ ಹಲವಾರು ಅಭಿವೃದ್ಧಿ ಕೆಲಸಕ್ಕೆ ಅವರು ಅನುದಾನ ನೀಡಿದ್ದಾರೆ.
ಮಹಿಳಾ ಸಾಕ್ಷರತೆಯಿಂದ ದೇಶ ಸುಭಿಕ್ಷವಾಗಿರಲು ಸಾಧ್ಯ: ಬಿ.ವೈ.ವಿಜಯೇಂದ್ರ
ಅವರಿಗೆ ನೂರಾರು ವರ್ಷ ಆಯಸ್ಸು ಶಕ್ತಿ ಭಗವಂತ ನೀಡಲಿ ಎಂದು ಹಾರೈಸಿದರು. ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಗಿಡ್ಡೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಂಕ್ರಿ ಸೋಮಪ್ಪ, ಎಂಸಿಎ ನಿರ್ದೇಶಕ ವಸಂತಗೌಡ, ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಮುಖಂಡ ಟಿ.ಎಸ್. ಮೋಹನ್, ಗೋಣಿ ಮಾಲತೇಶ್, ಭದ್ರಾಪುರ ಹಾಲಪ್ಪ, ಹೊಲಗಾವಲು ಮಲ್ಲಪ್ಪ, ಹುಲ್ಮಾರ್ ಮಹೇಶ್, ಬಿ.ಎಲ್. ರಾಜು, ಕುರುಬ ಸಮಾಜ, ಗಿಡ್ಡೇಶ್ವರ ದೇವಸ್ಥಾನ ಸಮಿತಿ ಪದಾಕಾರಿಗಳು ಉಪಸ್ಥಿತರಿದ್ದರು.